ETV Bharat / state

ಅನೇಕಲ್​; ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ಶೀಟರ್​ ವಿನುತ್  ಹತ್ಯೆ - ಅನೇಕಲ್ ಹತ್ಯೆ ಆರೋಪಿಗಳ ಪತ್ತೆಗೆ ತಂಡ ರಚನೆ

ಆನೇಕಲ್- ಅತ್ತಿಬೆಲೆ ರಸ್ತೆಯ ಡಿಹೆಚ್ಎಲ್ ಬಳಿ ರೌಡಿ ಶೀಟರ್​ನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Murder of a Rowdy Sheeter in Anekal
ಅನೇಕಲ್​ನಲ್ಲಿ ರೌಡಿ ಶೀಟರ್​ ವಿನುತ್ ಹತ್ಯೆ
author img

By

Published : Oct 30, 2020, 4:02 PM IST

ಆನೇಕಲ್ : ತಾಲೂಕಿನಲ್ಲಿ ಕೊಲೆ ಪ್ರಕರಣಗಳು ಮರುಕಳಿಸುತ್ತಿದ್ದು, ಇಂದು ರೌಡಿ ಶೀಟರ್​ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಅತ್ತಿಬೆಲೆ ಠಾಣಾ ವ್ಯಾಪ್ತಿಯ ಬೆಸ್ತಮಾನಹಳ್ಳಿ ನಿವಾಸಿ 23 ವರ್ಷದ ವಿನುತ್ ಅಲಿಯಾಸ್ ಬಟಾಣಿ ಬೈಕ್​ನಲ್ಲಿ ಕೆಲಸಕ್ಕೆ ತೆರಳುವ ಸಂದರ್ಭ ಬರ್ಬರವಾಗಿ ಕೊಲೆಯಾಗಿದ್ದಾನೆ. ಆನೇಕಲ್-ಅತ್ತಿಬೆಲೆ ರಸ್ತೆಯ ಡಿಹೆಚ್ಎಲ್ ಬಳಿ ಕೊಲೆ ನಡೆದಿದ್ದು, ರಸ್ತೆ ಮಧ್ಯೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಅನೇಕಲ್​ನಲ್ಲಿ ರೌಡಿ ಶೀಟರ್​ ವಿನುತ್ ಹತ್ಯೆ

ಕೃತ್ಯದ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಬೆಂಗಳೂರು ಗ್ರಾಮಾಂತರ ಅಡಿಷನಲ್​ ಎಸ್ಪಿ ಲಕ್ಷ್ಮಿ ಗಣೇಶ್ ಸ್ಥಳಕ್ಕೆ ಆಗಮಿಸಿ ಪರೀಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.