ದೇವನಹಳ್ಳಿ : ಸಿಎಂ ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಸಚಿವರಾಗಿ ಅಧಿಕಾರಿ ಸ್ವೀಕರಿಸಿದ್ದು, ಇಂದು ಖಾತೆ ಹಂಚಿಕೆ ಸಾಧ್ಯತೆ ಇದೆ. ಈ ಮೊದಲೇ ನಾನು ಅಬಕಾರಿ ಖಾತೆಯನ್ನು ನಿರಾಕರಿಸಿದ್ದೇನೆ ಎಂದು ಬೆಂಗಳೂರು ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ದೇವನಹಳ್ಳಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ನೂತನ ಸಚಿವರು ಸಭೆ ನಡೆಸಿದರು. ಈ ವೇಳೆ ಖಾತೆ ಹಂಚಿಕೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಪ್ರಮಾಣ ವಚನ ಸ್ವೀಕಾರ ಮಾಡಿ ಎರಡೇ ದಿನ ಆಗಿದೆ. 29 ಜನರ ನೂತನ ಸಚಿವ ಸಂಪುಟ ರಚನೆ ಆಗಿದೆ. 9 ಜನ ಹೊಸದಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಹಿಂದಿನ 19 ಜನ ಮತ್ತೆ ಸಚಿವರಾಗಿದ್ದಾರೆ. ಖಾತೆ ಹಂಚಿಕೆಯಲ್ಲಿ ಸಣ್ಣ-ಪುಟ್ಟ ಬದಲಾವಣೆಯಾಗಬಹುದು ಎಂದರು.
ಓದಿ: ರಾಜ್ಯದಲ್ಲಿ ಇಂದಿನಿಂದಲೇ ನೈಟ್ ಮತ್ತು ಗಡಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ : ಸಿಎಂ ಬೊಮ್ಮಾಯಿ ಆದೇಶ
ಖಾತೆ ಹಂಚಿಕೆ ಬಗ್ಗೆ ಮುಖ್ಯಮಂತ್ರಿಗಳು ಕೇಂದ್ರ ವರಿಷ್ಠರ ಜೊತೆ ಚರ್ಚೆ ನಡೆಸಿದ್ದಾರೆ. ಇಂದು ಸಂಜೆ ಖಾತೆ ಹಂಚಿಕೆ ಆಗುವ ಸಾಧ್ಯತೆ ಇದೆ. ನನಗೆ ಯಾವ ಖಾತೆಯ ನಿರೀಕ್ಷೆಯಿಲ್ಲ. ಯಾವ ಖಾತೆ ನೀಡಿದರೂ ಜನಪರವಾಗಿ ಕೆಲಸ ಮಾಡುತ್ತೇನೆ. ಅಬಕಾರಿ ಖಾತೆಯನ್ನು ಮೊದಲೇ ನಿರಾಕರಿಸಿರುವುದಾಗಿ ಇದೇ ವೇಳೆ ಸ್ಪಷ್ಟಪಡಿಸಿದರು.