ETV Bharat / state

ಬೆಂಗಳೂರು ಏರ್​ಪೋರ್ಟ್ ಮುಂದೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕ ಸಾವು

author img

By

Published : Mar 31, 2021, 10:28 AM IST

Updated : Mar 31, 2021, 11:27 AM IST

ನಿನ್ನೆ ಬೆಂಗಳೂರಿನ ಏರ್​​ಪೋರ್ಟ್​ ಮುಂಭಾಗ ಕಾರಿನೊಳಗೆ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆ ಸೇರಿದ್ದ ಕ್ಯಾಬ್​ ಚಾಲಕ ಪ್ರತಾಪ್​ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

KSTDC cabbie suicide
ಕ್ಯಾಬ್​ ಚಾಲಕ ಪ್ರತಾಪ್ ಸಾವು

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಕ್ಯಾಬ್​ ಚಾಲಕ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಕ್ಯಾಬ್​ ಚಾಲಕ ಪ್ರತಾಪ್ ಆತ್ಮಹತ್ಯೆ

ಏರ್​​ಪೋರ್ಟ್​ ದ್ವಾರದಲ್ಲಿ ಕಾರಿನಲ್ಲಿ ಕುಳಿತು ಬೆಂಕಿ ಹಚ್ಚಿಕೊಂಡಿದ್ದ ಚಾಲಕ

ನಿನ್ನೆ ಸಂಜೆ 4:30 ಸಮಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಪಿಕ್ ಅಪ್ ಪಾಯಿಂಟ್​ನಲ್ಲಿ ಟ್ಯಾಕ್ಸಿಯೊಳಗೆ ಪೆಟ್ರೋಲ್ ಸುರಿದುಕೊಂಡುಕೊಂಡು ಬೆಂಕಿ ಹಚ್ಚಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ ಪ್ರತಾಪ್, ಇಂದು ಮುಂಜಾನೆ ಚಿಕಿತ್ಸೆಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಬಾಡಿಗೆ ಸಿಗದೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ!

ರಾಮನಗರ ಮೂಲದ ಪ್ರತಾಪ್ ಏರ್ ಪೋರ್ಟ್ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು, ಖಾಸಗಿ ಟಾಕ್ಸಿ​ ಸಂಸ್ಥೆಗಳು ಪ್ರಯಾಣಿಕರಿಗೆ ಪ್ರತಿ ಕಿ.ಮೀಗೆ 10ರ ದರದಲ್ಲಿ ಸೇವೆಯನ್ನು ನೀಡುತ್ತಿದ್ದವು. ಇದರಿಂದ ಟ್ಯಾಕ್ಸಿ ಚಾಲಕರಿಗೆ ಬಾಡಿಗೆ ಸಿಗುತ್ತಿರಲಿಲ್ಲ, ಮೃತ ಪ್ರತಾಪ್ ಸಹ ಬಾಡಿಗೆ ಸಿಗದೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದರು. ಇದರಿಂದ ಮನನೊಂದಿದ್ದ ಪ್ರತಾಪ್ ನಿನ್ನೆ ಸಂಜೆ 4:30 ಸಮಯದಲ್ಲಿ ಏರ್ ಪೋರ್ಟ್ ಮುಂಭಾಗದಲ್ಲಿ ಪೆಟ್ರೋಲ್ ಸುರಿದು ಕೊಂಡುಕೊಂಡು ಆತ್ಮಹತ್ಯೆ ಯತ್ನಿಸಿದರು. ಭದ್ರತಾ ಸಿಬ್ಬಂದಿ ಕಾರಿನ ಗಾಜು ಒಡೆದು ಪ್ರತಾಪ್​ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶೇ. 90 ರಷ್ಟು ಸುಟ್ಟಿದ ಪ್ರತಾಪ್ ಇಂದು ಮುಂಜಾನೆ 5:30 ಸಮಯದಲ್ಲಿ ಸಾವನ್ನಪ್ಪಿದ್ದಾರೆ.

ಕ್ಯಾಬ್​ ಚಾಲಕ ಪ್ರತಾಪ್ ಸಾವು

ಕ್ಯಾಬ್​ ಚಾಲಕರಿಂದ ಪ್ರತಿಭಟನೆಗೆ ನಿರ್ಧಾರ

ಪ್ರತಾಪ್ ಸಾವು ಟ್ಯಾಕ್ಸಿ ಚಾಲಕರ ಆಕ್ರೋಶಕ್ಕೆ ಕಾರಣವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವವನ್ನಿಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ. ಏಕರೂಪ ದರವನ್ನು ಸರ್ಕಾರ ನಿಗದಿ ಮಾಡಬೇಕು, ಕಡಿಮೆ ದರದಲ್ಲಿ ಸೇವೆ ನೀಡುತ್ತಿರುವ ಖಾಸಗಿ ಕ್ಯಾಬ್​ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕೆನ್ನುವುದು ಟ್ಯಾಕ್ಸಿ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಏರ್​​​ಪೋರ್ಟ್ ಮುಂಭಾಗ ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಟ್ಯಾಕ್ಸಿ ಚಾಲಕ

Last Updated : Mar 31, 2021, 11:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.