ETV Bharat / state

'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಪಕ್ಷದ ಕಾರ್ಯಕ್ರಮವಾಯಿತೇ ಹೊರತು ಜನರ ಕಾರ್ಯಕ್ರಮವಾಗಲಿಲ್ಲ: ರಾಜ್ಯ ರೈತ ಸಂಘ

author img

By

Published : Feb 25, 2021, 7:53 AM IST

'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಕಾರ್ಯಕ್ರಮ ಪಕ್ಷದ ಕಾರ್ಯಕ್ರಮವಾಯಿತೇ ಹೊರತು ಜನರ ಕಾರ್ಯಕ್ರಮವಾಗಲಿಲ್ಲ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಾಗಸಂದ್ರ ಪ್ರಸನ್ನ ಬೇಸರ ವ್ಯಕ್ತಪಡಿಸಿದರು.

Jilladhikarigala nade halli kade program
'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಜನರ ಕಾರ್ಯಕ್ರಮವಾಗಲಿಲ್ಲ: ರಾಜ್ಯ ರೈತ ಸಂಘ

ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದ ವಿನೂತನ ಕಾರ್ಯಕ್ರಮ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಕಾರ್ಯಕ್ರಮಕ್ಕೆ ಫೆ.20 ರಂದು ಚಾಲನೆ ಸಿಕ್ಕಿದೆ. ಗ್ರಾಮ ವಾಸ್ತವ್ಯ ಮಾಡುವ ಮೂಲಕ ಕಂದಾಯ ಸಚಿವ ಆರ್. ಅಶೋಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಚಿವರ ಕಾರ್ಯಕ್ರಮ ಪಕ್ಷದ ಕಾರ್ಯಕ್ರಮವಾಗಿದೆಯೇ ಹೊರತು ಜನರ ಕಾರ್ಯಕ್ರಮವಾಗಿರಲಿಲ್ಲವೆಂದು ರಾಜ್ಯ ರೈತ ಸಂಘ ಆರೋಪಿಸಿದೆ.

ಸರ್ಕಾರಿ ಸೌಲಭ್ಯ ಪಡೆಯಲು ಜಿಲ್ಲಾ ಕೇಂದ್ರ ಮತ್ತು ತಾಲೂಕು ಕಚೇರಿಗಳಿಗೆ ಅಲೆಯಬೇಕು. ಗ್ರಾಮಸ್ಥರ ಸಮಸ್ಯೆಗಳನ್ನ ಗ್ರಾಮದಲ್ಲೇ ಪರಿಹರಿಸುವ ವಿನೂತನ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, 'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಕಾರ್ಯಕ್ರಮವನ್ನು ಆಯೋಜಿಸಿದೆ. ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಜೊತೆಗೆ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಜನರ ಸಮಸ್ಯೆಗಳನ್ನ ಪರಿಹರಿಸಲು ಮುಂದಾದರು. ಪ್ರತಿ ತಿಂಗಳ 3ನೇ ಶನಿವಾರ ತಾಲೂಕಿನ ಒಂದು ಹಳ್ಳಿಯಲ್ಲಿ 'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ' ನಡೆಯಲಿದೆ.

ದೊಡ್ಡಬಳ್ಳಾಪುರದ ಹೊಸಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಸಚಿವರು ದಲಿತರ ಮನೆಯಲ್ಲಿ ಉಪಹಾರ ಸೇವನೆ, ದಲಿತ ಕಾಲೋನಿ ಜನರ ಸಮಸ್ಯೆ ಅಲಿಸಿ ಗ್ರಾಮಸ್ಥರ ಮನವಿ ಮೇರೆಗೆ ಸ್ಥಳದಲ್ಲೇ ಸ್ಮಶಾನ ಮಂಜೂರು ಮಾಡಿದ್ದರು. ಜೊತೆಗೆ 178 ಜನರಿಗೆ ಪಿಂಚಣಿ ಮಂಜೂರು, 30 ಪೌತಿ ಖಾತೆ ಬದಲಾವಣೆ, 19 ಪಹಣಿ ಕಲಂ 3 ಮತ್ತು 9ರ ತಿದ್ದುಪಡಿ ಆದೇಶ, 381 ಆಧಾರ್ ಕಾರ್ಡ್ ತಿದ್ದುಪಡಿ, 63 ಮತದಾರರ ಗುರುತಿನ ಚೀಟಿ ತಿದ್ದುಪಡಿ ಮಾಡಿದ್ದರು.

ಓದಿ: 'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಕಾರ್ಯಕ್ರಮಕ್ಕೆ ಸಚಿವ ಆರ್.ಅಶೋಕ್ ಚಾಲನೆ

ಆದರೆ ಕಂದಾಯ ಸಚಿವರ ಗ್ರಾಮ ವಾಸ್ತವ್ಯಕ್ಕೆ ರಾಜ್ಯ ರೈತ ಸಂಘ ಬೇಸರ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಾಗಸಂದ್ರ ಪ್ರಸನ್ನ ನಿಜವಾದ ಗ್ರಾಮ ವಾಸ್ತವ್ಯದ ಕನಸು ಈಡೇರಲಿಲ್ಲ. ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಬ್ಬದ ಕಾರ್ಯಕ್ರಮ ಮತ್ತು ಪಕ್ಷದ ಕಾರ್ಯಕ್ರಮವಾಯಿತೇ ಹೊರತು ಜನರ ಕಾರ್ಯಕ್ರಮವಾಗಲಿಲ್ಲ. ಕಂದಾಯ ಸಚಿವರನ್ನ ಭೇಟಿ ಮಾಡಿ ಹಲವು ಸಮಸ್ಯೆಗಳ ಬಗ್ಗೆ ಮಾತನಾಡುವುದಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದೆವು. ಆದರೆ ಸಚಿವರ ಭೇಟಿಗೆ ಅವಕಾಶ ನೀಡಲಿಲ್ಲ. ರೈತರು ತಾಲೂಕು ಕಚೇರಿಗೆ ಹೋದಾಗ ಸಿಂಬ್ಬದಿ ಸೌಜನ್ಯದಿಂದ ನಡೆದುಕೊಂಡರೆ ಸಾಕು, ನಿಜವಾದ ಗ್ರಾಮ ವಾಸ್ತವ್ಯದ ಕನಸು ಈಡೇರುತ್ತದೆ ಎನ್ನುವುದು ರೈತ ಸಂಘಟನೆಯ ಅಶಯವಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.