ETV Bharat / state

ಶಾಸಕರಾದ ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುತ್ತೆ, ನನಗೂ ಇದೆ : ವೈಎ ನಾರಾಯಣಸ್ವಾಮಿ - ವಿಧಾನ ಪರಿಷತ್ ಸದಸ್ಯ ವೈಎ ನಾರಾಯಣಸ್ವಾಮಿ

ಶಾಸಕರಾದ ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುತ್ತದೆ, ಅದರಂತೆ ನನಗೂ ಸಹ ಇದೆ. ಆದರೆ ಎಲ್ಲರನ್ನೂ ತೃಪ್ತಿ ಪಡಿಸಿ ಎಲ್ಲಾ ಸಮುದಾಯದವರಿಗೂ ಮತ್ತು ಜಿಲ್ಲೆಗಳಿಗೂ ಪ್ರಾತಿನಿಧ್ಯ ಕೊಟ್ಟು ಸಮತೋಲನ ಸಚಿವ ಸಂಪುಟ ರಚನೆ ಮಾಡುವುದು ಒಂದು ಸವಾಲಿನ ಕೆಲಸ ಎಂದು ಒಪ್ಪಿಕೊಂಡಿದ್ದಾರೆ.

YA narayanaswamy
ವೈಎ ನಾರಾಯಣಸ್ವಾಮಿ
author img

By

Published : Aug 1, 2021, 2:33 AM IST

ದೇವನಹಳ್ಳಿ: ಸಚಿವ ಸ್ಥಾನದ ಆಕಾಂಕ್ಷಿಗಳ ದಿನೇ ದಿನೇ ದೊಡ್ಡದಾಗುತ್ತಲೆ ಇದೆ. ಇದೀಗ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಸಹ ತಾವೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನು ತಿಳಿಸಿದ್ದಾರೆ.

ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ವೈಎ ನಾರಾಯಣ ಸ್ವಾಮಿ, ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರು ಸಚಿವ ಸಂಪುಟ ರಚನೆಯ ಕಾರ್ಯವನ್ನು ಆರಂಭಸಿದ್ದಾರೆ. ಶಾಸಕರಾದ ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುತ್ತದೆ, ಅದರಂತೆ ನನಗೂ ಸಹ ಇದೆ. ಆದರೆ ಎಲ್ಲರನ್ನೂ ತೃಪ್ತಿ ಪಡಿಸಿ ಎಲ್ಲಾ ಸಮುದಾಯದವರಿಗೂ ಮತ್ತು ಜಿಲ್ಲೆಗಳಿಗೂ ಪ್ರಾತಿನಿಧ್ಯ ಕೊಟ್ಟು ಸಮತೋಲನ ಸಚಿವ ಸಂಪುಟ ರಚನೆ ಮಾಡುವುದು ಒಂದು ಸವಾಲಿನ ಕೆಲಸ ಎಂದು ಒಪ್ಪಿಕೊಂಡಿದ್ದಾರೆ.

ವೈಎ ನಾರಾಯಣಸ್ವಾಮಿ
ನಾವು ಭಾರತೀಯ ಜನತಾ ಪಾರ್ಟಿಯ ಶಿಸ್ತಿನ ಸಿಪಾಯಿಗಳು, ಮಂತ್ರಿ ಸ್ಥಾನ ಕೊಡಲೀ, ಬಿಡಲೀ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುವೆ. ನನಗೆ ಹೈಕಮಾಂಡ್ ಬಳಿ ಹೋಗಿ ಮನವಿ ಮಾಡುವುದುು ಗೊತ್ತಿಲ್ಲ. ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿಯವರು ಅನುಭವಿಗಳು, ಪ್ರಾತಿನಿಧ್ಯ ಕೊಟ್ಟು ಸಚಿವ ಸಂಪುಟಕ್ಕೆ ಯಾರನ್ನು ಸೇರಿಕೊಳ್ಳಬೇಕು, ಪಕ್ಷದ ವರ್ಚಸ್ಸನ್ನು ಹೇಗೆ ಹೆಚ್ಚಿಸಬೇಕೆಂಬುವುದು ಗೊತ್ತಿದೆ. ನನ್ನ ಸ್ನೇಹಿತರು ಮತ್ತು ನನ್ನ ಬೆಂಬಲಿಗರು ಕೋಲಾರ ಜಿಲ್ಲೆಗೆ ಮಂತ್ರಿ ಸ್ಥಾನ ಕೊಡ ಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ನಾನು ಸಹ ಕೋಲಾರ ಜಿಲ್ಲೆಯವನು. ಆದರೆ ಮಂತ್ರಿ ಸ್ಥಾನಕ್ಕೆ ನಾನು ಒತ್ತಾಯ ಮಾಡುವುದಿಲ್ಲ, ಪಕ್ಷದ ವರಿಷ್ಠರು ಉತ್ತಮ ತೀರ್ಮಾನ ತೆಗೆದು ಕೊಳ್ಳುತ್ತಾರೆಂದು ಹೇಳಿದರು.

ಇದನ್ನು ಓದಿ:ಸಚಿವ ಸಂಪುಟ ವಿಸರ್ಜನೆ ಹಿನ್ನೆಲೆ : ಸಿಎಂ,ಡಿಸಿಎಂ ಸಚಿವರ ಆಪ್ತ ಶಾಖೆಯ ಗುತ್ತಿಗೆ ಆಧಾರದ ಅಧಿಕಾರಿಗಳ ಬಿಡುಗಡೆಗೆ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.