ETV Bharat / state

ಬೆಂಗಳೂರಲ್ಲಿ ವಿಧಾನಸೌಧ, ವಿಕಾಸಸೌಧದ ಜೊತೆ ಇನ್ಮುಂದೆ ಗ್ರಾಮಸೌಧ ಕೂಡ ಫೇಮಸ್​!! - 1 lakh for neighboring victims. Solution Check

ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬೂದಿಹಾಳ್ ಗ್ರಾಮ ಪಂಚಾಯಿತಿ ಗ್ರಾಮಸೌಧ ಕಟ್ಟಡದ ಲೋಕರ್ಪಾಣೆ ಮಾಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಮಾದರಿ ಗ್ರಾಮ ಪಂಚಾಯಿತಿ ಕಟ್ಟಡ ಎನ್ನುವ ಹೆಗ್ಗಳಿಕೆಗೂ ಈ ಕಟ್ಟಡ ಪಾತ್ರವಾಗಿದೆ.

gramsoudha-in-bangalore
author img

By

Published : Aug 14, 2019, 10:51 AM IST

ನೆಲಮಂಗಲ: ನಾವೆಲ್ಲ ವಿಧಾನಸೌಧ, ವಿಕಾಸ ಸೌಧ, ಈ ರೀತಿಯ ಹೆಸರು ಕೇಳಿರೋದು ಕಾಮನ್, ಆದರೆ, ಇಲ್ಲೊಂದು ಗ್ರಾಮ‌ಪಂಚಾಯಿತಿ ಗ್ರಾಮ ಸೌಧವನ್ನು ಸುಮಾರು 2 ಕೋಟಿ ವೆಚ್ಚದಲ್ಲಿ ನಿರ್ಮಿಸಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಮಾದರಿ ಗ್ರಾಮ ಪಂಚಾಯಿತಿ ಕಟ್ಟಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುವಂತೆ ಮಾಡಿದೆ.

ಒಂದೆಡೆ ಮದುಮಗಳಂತೆ ಸಿಂಗಾರಗೊಂಡಿರುವ ಗ್ರಾಮ ಪಂಚಾಯಿತಿಯ ಗ್ರಾಮಸೌಧ ಕಟ್ಟಡ, ಕೇಂದ್ರ ಸರ್ಕಾರ ಹಾಗೂ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಕಟ್ಟಡ, ಬರೀ ಅಡಂಬರವಾಗದೇ ನೆರೆ ಸಂತ್ರಸ್ತರಿಗೂ ಒಂದು ಲಕ್ಷ ಪರಿಹಾರದ ಚೆಕ್ ಹಸ್ತಾಂತರಿಸಿದ ಗ್ರಾಮ ಪಂಚಾಯಿತಿ ಆಗಿದೆ. ಹೌದು, ಇದು ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬೂದಿಹಾಳ್ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ವೈಭವವಿದು. ಗ್ರಾಮ ಪಂಚಾಯಿತಿಯ ಎಲ್ಲ ಸೇವೆಗಳು ಫಲಾನುಭವಿಗಳಿಗೆ ತಲುಪಲು ಗ್ರಾಮ ಪಂಚಾಯಿತಿ ಕಟ್ಟಡ ಸಹ ಸುಸಜ್ಜಿತವಾಗಿರಬೇಕು, ಈ ನಿಟ್ಟಿನಲ್ಲಿ ಬೂದಿಹಾಳ್ ಗ್ರಾಮ‌ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಒಂದು ಹೆಜ್ಜೆ ಮುಂದೆ ಹೋಗಿದ್ದು, ಪಂಚಾಯಿತಿ ವ್ಯಾಪ್ತಿಯ ವಿವಿಧ ಖಾಸಗಿ ಕಂಪನಿಗಳ ಸಿಎಸ್ಆರ್ ಹಣದ ಮೂಲದಿಂದ 1 ಕೋಟಿ 70 ಲಕ್ಷ ವೆಚ್ಚದಲ್ಲಿ ನೂತನ ಸುಸರ್ಜಿತ ಕಟ್ಟಡವನ್ನು ನಿರ್ಮಿಸಿ ಲೋಕರ್ಪಾಣೆಗೊಳಿಸಿದರು.

ಬೂದಿಹಾಳ್ ಗ್ರಾಮ ಪಂಚಾಯಿತಿಯ ಗ್ರಾಮಸೌಧ ಕಟ್ಟಡ

ಇನ್ನು ಉದ್ಘಾಟನಾ ಸಮಾರಂಭಕ್ಕೆ ಶ್ರೀ ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸ್ಪಟಿಕಪುರಿ ಶ್ರೀ ನಂಜಾವದೂತ ಸ್ವಾಮೀಜಿ, ಸಂಸದ ಬಚ್ಚೇಗೌಡ, ಎಂಎಲ್ ಸಿ ಬೆಮೆಲ್ ಕಾಂತರಾಜು, ಶಾಸಕ ಶ್ರೀನಿವಾಸಮೂರ್ತಿ, ಪಂಚಾಯಿತಿ ಅಧ್ಯಕ್ಷ ನಾಗರಾಜು ಸಾಕ್ಷಿಯಾದರು. ರಾಜಧಾನಿ ಬೆಂಗಳೂರಿನಲ್ಲಿ ಕೆಂಗಲ್ ಹನುಮಂತಯ್ಯ ನಿರ್ಮಿಸಿದ ವಿಧಾನಸೌಧ, ವಿಕಾಸಸೌಧ ನೋಡಿದ್ದೇವೆ, ಆದರೆ, ಗ್ರಾಮ ಪಂಚಾಯಿತಿಯ ಗ್ರಾಮ ಸೌಧ ಇದೇ ಮೊದಲು ಎಂದು ನಿರ್ಮಲಾನಂದ ಶ್ರೀಗಳು ಗ್ರಾಮ ಪಂಚಾಯಿತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ನಂತರ ಮಾತನಾಡಿದ ಸಂಸದ ಬಚ್ಚೇಗೌಡ ಅವರು, ಪಕ್ಷಾತೀತವಾಗಿ ದುಡಿದ ಪರಿಣಾಮ ಇಂದು ಈ ಸುಂದರವಾದ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಇತರ ಪಂಚಾಯಿತಿಗಳಿಗಿಂತ ಭಿನ್ನವಾಗಿ ಇಲ್ಲಿನ ಪಂಚಾಯಿತಿ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಮಕ್ಕೆ ಬೇಕಿರುವ ಮೂಲಭೂತ ಸೌರ್ಕಯ್ಯ ಸರಿಯಾಗಿ ನೀಡುತ್ತಿದ್ದು, ಬೆಂಗಳೂರಿನ ಗ್ರಾಮ ಪಂಚಾಯಿತಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದರು.

Intro:ಸುಸರ್ಜಿತವಾಗಿ ನಿರ್ಮಾಣವಾಗಿರುವ ಗ್ರಾಮ ಪಂಚಾಯತಿ ಕಟ್ಟಡ ಲೋಕಾರ್ಪಣೆ.

ನೆರೆ ಸಂತ್ರಸ್ತರಿಗೆ ಒಂದು ಲಕ್ಷ ಕೊಟ್ಟ ಪಂಚಾಯಿತಿ
Body:ನೆಲಮಂಗಲ : ನಾವೇಲ್ಲಾ ವಿಧಾನಸೌಧ, ವಿಕಾಸ ಸೌಧ, ಈ ರೀತಿಯ ಹೆಸರು ಕೇಳಿರೋದು ಕಾಮನ್, ಆದರೆ ಇಲ್ಲೊಂದು ಗ್ರಾಮ‌ಪಂಚಾಯತಿ ಗ್ರಾಮ ಸೌಧ ವನ್ನು ಸುಮಾರು ೨ ಕೋಟಿ ವೆಚ್ಚದಲ್ಲಿ ನಿರ್ಮಿಸಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಮಾದರಿ ಗ್ರಾಮ ಪಂಚಾಯಿತಿ ಕಟ್ಟಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಒಂದೆಡೆ ಮದುಮಗಳಂತೆ ಸಿಂಗಾರಗೊಂಡಿರು ಗ್ರಾಮ ಪಂಚಾಯತಿಯ ಗ್ರಾಮಸೌಧ ಕಟ್ಟಡ, ಕೇಂದ್ರ ಸರ್ಕಾರ ಹಾಗೂ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಕಟ್ಟಡ, ಬರೀ ಅಡಂಬರವಾಗದೇ ನೆರೆ ಸಂತ್ರಸ್ಥರಿಗೂ ಒಂದು ಲಕ್ಷ ಪರಿಹಾರದ ಚೆಕ್ ಹಸ್ತಾಂತರಿಸಿದ ಗ್ರಾಮ ಪಂಚಾಯತಿ, ಹೌದು, ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬೂದಿಹಾಳ್ ಗ್ರಾಮ ಪಂಚಾಯತಿಯ ನೂತನ ಕಟ್ಟಡ ವೈಭವ ಇದು.

ಗ್ರಾಮ ಪಂಚಾಯತಿಯ ಎಲ್ಲಾ ಸೇವೆಗಳು ಫಲಾನುಭವಿಗಳಿಗೆ ತಲುಪಲು ಗ್ರಾಮ ಪಂಚಾಯತಿ ಕಟ್ಟಡ ಸಹ ಸುರ್ಸಜಿತವಾಗಿರಬೇಕು, ಈ ನಿಟ್ಟಿನಲ್ಲಿ ಬೂದಿಹಾಳ್ ಗ್ರಾಮ‌ಪಂಚಾಯತಿ ಚುನಾಯಿತ ಪ್ರತಿನಿಧಿಗಳು ಒಂದು ಹೆಜ್ಜೆ ಮುಂದೆ ಹೋಗಿದ್ದು, ಪಂಚಾಯತಿ ವ್ಯಾಪ್ತಿಯ ವಿವಿಧ ಖಾಸಗಿ ಕಂಪನಿಗಳ ಸಿಎಸ್ಆರ್ ಹಣದ ಮೂಲದಿಂದ ೧ ಕೋಟಿ ೭೦ ಲಕ್ಷ ವೆಚ್ಚದಲ್ಲಿ ನೂತನ ಸುಸರ್ಜಿತ ಕಟ್ಟಡವನ್ನು ನಿರ್ಮಿಸಿ ಲೋಕರ್ಪಾಣೆ ಗೊಳಿಸಲಿದರು, ಇನ್ನು ಉದ್ಘಾಟನಾ ಸಮಾರಂಭಕ್ಕೆ ಶ್ರೀ ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮಿಜೀ, ಸ್ಪಟಿಕಪುರಿ ಶ್ರೀ ನಂಜಾವದೂತ ಸ್ವಾಮಿಜೀ, ಸಂಸದ ಬಚ್ಚೇಗೌಡ, ಎಂಎಲ್ ಸಿ ಬೆಮೆಲ್ ಕಾಂತರಾಜು, ಶಾಸಕ ಶ್ರೀನಿವಾಸಮೂರ್ತಿ, ಪಂಚಾಯತಿ ಅಧ್ಯಕ್ಷ ನಾಗರಾಜು ಸಾಕ್ಷಿಯಾದರು.ರಾಜಧಾನಿ ಬೆಂಗಳೂರಿನಲ್ಲಿ ಕೆಂಗೆಲ್ ಹನುಮಂತಯ್ಯ ನಿರ್ಮಿಸಿದ ವಿಧಾನಸೌಧ, ವಿಕಾಸಸೌಧ ನೋಡಿದ್ದೇವೆ ಆದರೆ ಗ್ರಾಮ ಪಂಚಾಯತಿಯ ಗ್ರಾಮ ಸೌಧ ಇದೇ ಮೊದಲು ಎಂದು ನಿರ್ಮಲಾನಂದ ಶ್ರೀ ಗ್ರಾಮ ಪಂಚಾಯತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು, ಇದೇ ವೇಳೆಯಲ್ಲಿ ಪಂಚಾಯತಿ ವ್ಯಾಪ್ತಿಯ ಅಭಿವೃದ್ಧಿ ಪುಸ್ತಕ ಗ್ರಾಮವಾಣಿಯನ್ನು ಜಿಲ್ಲಾ ಪಂಚಾಯತಿ ಸಿಇಓ ಲತಾ ಹಾಗೂ ಪಿಡಿಓ ಪದ್ಮನಾಭ್ ಬಿಡುಗಡೆಗೊಳಿಸಿದರು, ಮಹಿಳೆಯರ ಸ್ವ ಉದ್ಯೋಗಕ್ಕೆ ಒತ್ತು ನೀಡುವ ಸಲುವಾಗಿ ಕೌಶಲ್ಯಭಿವೃದ್ದಿ ಕೇಂದ್ರ, ಡಿಜಿಟಲ್ ಲೈಬ್ರರಿ, ಸುಸಜ್ಜಿತ ಸಭಾ ಭವನ, ಕಚೇರಿ, ಬಾಪೂಜಿ ೧೦೦ ಸೇವಾಕೇಂದ್ರವನ್ನು ಉದ್ಘಾಟಿಸಲಾಯಿತು. ಗ್ರಾಮ ಸೌಧ ನಿರ್ಮಾಣಕ್ಕೆ ಸಹಕರಿಸಿದ ಹಲವಾರು‌ ಕಂಪನಿಗಳ ಮುಖ್ಯಸ್ಥರನ್ನು ಮತ್ತು ಗಣ್ಯರನ್ನು ಇದೇ ವೇಳೆಯಲ್ಲಿ ಸನ್ಮಾನಿಸಲಾಯಿತು.

ಒಟ್ನಲ್ಲಿ ಗ್ರಾಮಗಳ ಉದ್ದಾರ ನಮ್ಮ ಉದ್ದೇಶ, ಗ್ರಾಮಗಳು ಬೆಳೆಯೇ ಬೆಳೆಯುವುದು ದೇಶ ಎಂಬ ಧ್ಯೆಯೋದೊಂದಿಗೆ ಬೂದಿಹಾಳ್ ಪಂಚಾಯತಿ ಸಮಗ್ರ ಅಭಿವೃದ್ಧಿಯತ್ತ ದಾಪುಗಾಲಿಟ್ಟಿರುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ.

01a-ಬೈಟ್: ಶ್ರೀ ಶ್ರೀ ನಿರ್ಮಲಾನಂದ ಮಹಾಸ್ವಾಮಿಜೀಗಳು, ಆದಿಚುಂಚನಗಿರಿ ಮಠ.

01b-ಬೈಟ್: ಬಚ್ಚೇಗೌಡ, ಸಂಸದ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.