ETV Bharat / state

ಅಕ್ಕನ ಮೊಬೈಲ್​ ಗೀಳು ಕಂಡು ಪಾಸ್​ವರ್ಡ್​ ಇಟ್ಟ ತಮ್ಮ: ದೊಡ್ಡಬಳ್ಳಾಪುರದಲ್ಲಿ ನೇಣಿಗೆ ಶರಣಾದ ಯುವತಿ - ಅಕ್ಕನ ಮೊಬೈಲ್​ ಗೀಳು ಕಂಡು ಪಾಸ್​ವರ್ಡ್​ ಇಟ್ಟ ತಮ್ಮ

ಸಹೋದರ ತನ್ನ ಮೊಬೈಲ್​ಗೆ ಪಾಸ್​ವರ್ಡ್ ಇಟ್ಟಿದ್ದಕ್ಕೆ ನೊಂದ ಸಹೋದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

girl-commits-suicide-over-mobile-password-issue
ಮೊಬೈಲ್​ಗೆ ಪಾಸ್​ವರ್ಡ್​ ಇಟ್ಟ ತಮ್ಮ: ನೇಣಿಗೆ ಶರಣಾದ ಸಹೋದರಿ
author img

By

Published : Nov 12, 2022, 7:59 AM IST

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ಅತಿಯಾಗಿ ಮೊಬೈಲ್ ಬಳಸುತ್ತಾಳೆಂದು ತಮ್ಮ ತನ್ನ ಮೊಬೈಲ್​ಗೆ ಪಾಸ್​ವರ್ಡ್ ಇಟ್ಟಿದ್ದಕ್ಕೆ ಅಕ್ಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರ ನಗರದ ಗಾಣಿಗರಪೇಟೆಯಲ್ಲಿ ನಡೆದಿದೆ.

ಪಿಯುಸಿ ಓದುತ್ತಿದ್ದ ರುಚಿತಾ (19) ಎಂಬುವರು ನೇಣಿಗೆ ಶರಣಾದವರು. ರುಚಿತಾ ಮನೆಯಲ್ಲಿ ಅತಿ ಹೆಚ್ಚು ಮೊಬೈಲ್​ನಲ್ಲಿ ಮಾತನಾಡುತ್ತಿದ್ದರಂತೆ. ಮೊಬೈಲ್ ಬಳಕೆಯಿಂದ ದೂರ ಮಾಡುವ ಉದ್ದೇಶದಿಂದ ಅವರ ಸಹೋದರ ಪಾಸ್​​ವರ್ಡ್ ಸೆಟ್​ ಮಾಡಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆಗಿದೆ.

ಬಳಿಕ ಘಟನೆಯಿಂದ ಬೇಸತ್ತ ಯುವತಿ ಮನೆಯ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮದುವೆ ರದ್ದಾಗಿದ್ದಕ್ಕೆ ಮನನೊಂದು ಮಹಿಳೆ ಜೊತೆ ಆತ್ಮಹತ್ಯೆ ಮಾಡಿಕೊಂಡ ಯೋಧ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.