ETV Bharat / state

ಹೊಸಕೋಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರಕಾಸ್ತ್ರ ಹಿಡಿದು ಪುಂಡರಿಂದ ದಾಂಧಲೆ - ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾರಕಾಸ್ತ್ರ ಹಿಡಿದು ಪುಂಡರ ದಾಂದಲೆ

ಇಂಡಿಕಾ ಕಾರಿನಲ್ಲಿ ಬಂದಿದ್ದ ನಾಲ್ವರು ಪುಂಡರು ಹೆದ್ದಾರಿ‌ ಬದಿಯಲ್ಲಿ ಕಾರು ನಿಲ್ಲಿಸಿಕೊಂಡು ಲಾಂಗು, ಮಚ್ಚು ತೋರಿಸಿ ಅಟ್ಟಹಾಸ ಮೆರೆದಿದ್ದಾರೆ. ಈ‌ ವೇಳೆ ಪ್ರಶ್ನಿಸಿದ ಕೆಲವರ ಮೇಲೆ‌ ಲಾಂಗ್ ಬೀಸಿ ಗಾಯಗೊಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡರು ಮಾರಕಾಸ್ತ್ರ ಹಿಡಿದು ದಾಂದಲೆ

author img

By

Published : Jun 9, 2022, 7:10 PM IST

Updated : Jun 9, 2022, 9:08 PM IST

ಹೊಸಕೋಟೆ(ಬೆಂಗಳೂರು ಗ್ರಾಮಾಂತರ): ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡರು ಲಾಂಗು, ಮಚ್ಚು ಹಿಡಿದು ದಾಂಧಲೆ ನಡೆಸಿದ್ದು, ಈ ವೇಳೆ ಬೈಕ್ ಸವಾರರ ಮೇಲೆ ಹಲ್ಲೆ ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದ‌ಲ್ಲಿ ಪೊಲೀಸರು ಬ್ಯುಸಿಯಾಗಿದ್ದ ವೇಳೆ ಪುಂಡರು ಈ ಕೃತ್ಯ ಎಸಗಿದ್ದಾರೆ. ಹೊಸಕೋಟೆ ತಾಲೂಕಿನ ಅಟ್ಟೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಕೃತ್ಯ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಇಂಡಿಕಾ ಕಾರಿನಲ್ಲಿ ಬಂದಿದ್ದ ನಾಲ್ವರು ಪುಂಡರು ಹೆದ್ದಾರಿ‌ ಬದಿಯಲ್ಲಿ ಕಾರು ನಿಲ್ಲಿಸಿಕೊಂಡು ಲಾಂಗು, ಮಚ್ಚು ತೋರಿಸಿ ಅಟ್ಟಹಾಸ ಮೆರೆದಿದ್ದಾರೆ. ಈ‌ ವೇಳೆ ಪ್ರಶ್ನಿಸಿದ ಕೆಲವರ ಮೇಲೆ‌ ಲಾಂಗ್ ಬೀಸಿ ಗಾಯಗೊಳಿಸಿದ್ದಾರೆ.

ಹೊಸಕೋಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರಕಾಸ್ತ್ರ ಹಿಡಿದು ಪುಂಡರಿಂದ ದಾಂಧಲೆ

ಜೂನ್ 7 ರಂದು ಸಿಎಂ ಬೊಮ್ಮಾಯಿ ಹೊಸಕೋಟೆಗೆ ಆಗಮಿಸಿದ್ದ ಹಿನ್ನೆಲೆ ಪೊಲೀಸರು ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದರು. ಈ ಸಮಯದಲ್ಲಿ ಪುಂಡರು ಅರ್ಧ ಗಂಟೆಗೂ ಹೆಚ್ಚುಕಾಲ ಹೆದ್ದಾರಿಯಲ್ಲಿ ಈ ಕೃತ್ಯ ನಡೆಸಿದ್ದಾರೆ. ನಂತರ ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ಖದೀಮರು ಕಾರು ಬಿಟ್ಟು ಎಸ್ಕೇಪ್ ಆಗಿದ್ದಾರೆ.

ಈ ವೇಳೆ ಕಾರಿನ ಗ್ಲಾಸ್​​ಗಳನ್ನ ದ್ವಂಸಗೊಳಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಸಕೋಟೆ ಪೊಲೀಸರು ಕಾರನ್ನ ವಶಕ್ಕೆ ಪಡೆದು ಆರೋಪಿಗಳಿ ಬಂಧನಕ್ಕೆ ಶೋಧಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ.. ಬೆಂಗಳೂರಲ್ಲಿ ಕೋವಿಡ್​​ ಲಸಿಕಾ ಪ್ರಮಾಣಪತ್ರ ಕಡ್ಡಾಯ

Last Updated : Jun 9, 2022, 9:08 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.