ETV Bharat / state

ಮೊದಲ ಬಾರಿಗೆ ದೇವನಹಳ್ಳಿಯಲ್ಲಿ ಮಾವು, ಹಲಸು ಮೇಳ: ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ - Devanahalli

ಗ್ರಾಮಾಂತರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಾವು ಹಾಗೂ ಹಲಸು ಮೇಳವನ್ನು ಆಯೋಜನೆ ಮಾಡಲಾಗಿದೆ. ಮೇಳದಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್, ಶಾಸಕ ಹಾಗೂ ಸಾರ್ವಜನಿಕರು ಪಾಲ್ಗೊಂಡು ಮಾವು, ಹಲಸು ರುಚಿ ನೋಡಿ ಖುಷಿ ಪಟ್ಟರು.

ದೇವನಹಳ್ಳಿಯಲ್ಲಿ ಮಾವು, ಹಲಸು ಮೇಳ
author img

By

Published : May 18, 2019, 5:34 PM IST

ಬೆಂಗಳೂರು: ಗ್ರಾಮಾಂತರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಾವು ಹಾಗೂ ಹಲಸು ಮೇಳವನ್ನು ಆಯೋಜನೆ ಮಾಡಲಾಗಿದೆ. ಮೇಳದಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್, ಶಾಸಕ ಹಾಗೂ ಸಾರ್ವಜನಿಕರು ಪಾಲ್ಗೊಂಡು ಮಾವು, ಹಲಸು ರುಚಿ ನೋಡಿ ಖುಷಿ ಪಟ್ಟರು.

ದೇವನಹಳ್ಳಿಯಲ್ಲಿ ಮಾವು, ಹಲಸು ಮೇಳ

ಹೌದು, ಇದೇ ಮೊದಲ ಬಾರಿಗೆ ‌ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ರಾಣಿ ಕ್ರಾಸ್ ಬಳಿ ಮೊದಲ ಬಾರಿಗೆ ಮಾವು, ಹಲಸು ಮೇಳವನ್ನು ಆಯೋಜನೆ ಮಾಡಲಾಗಿದೆ. ಮೇಳದಲ್ಲಿ ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ರೈತರು ತಾವು ಬೆಳೆದ ಹಲಸು, ಮಾವು ಪ್ರದರ್ಶನಕ್ಕಿಟ್ಟು ಮಾರಾಟ ಮಾಡುತ್ತಿದ್ದಾರೆ. ಬೆಳಗಾರರಿಂದ ಗ್ರಾಹಕರಿಗೆ ರಿಯಾಯ್ತಿ ದರದಲ್ಲಿ ಮಾವು ಮತ್ತು ಹಲಸು ಹಣ್ಣಿನ ಮೇಳವನ್ನು ಇಂದಿನಿಂದ ಆರಂಭಿಸಲಾಗಿದೆ.

ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವುಗಳ ಸಂಯುಕ್ರಾಶ್ರಯದಲ್ಲಿ ನಾಲ್ಕು ದಿನಗಳ ಕಾಲ ಅಂದರೆ 18 ರಿಂದ 21ರವರೆಗೆ ಈ ಮಾವು ಮತ್ತು ಹಲಸು ಮೇಳ ನಡೆಯಲಿದ್ದು, ದೇವನಹಳ್ಳಿಯ ರಾಣಿ ಕ್ರಾಸ್ ಬಳಿ ವಿವಿಧ ರೀತಿಯ ಮಾವು ಮತ್ತು ಹಲಸುಗಳು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ.

ರಾಜ್ಯದ ವಿವಿಧೆಡೆ ರೈತರು ಬೆಳೆದಿರುವ ಹಲಸು ಮತ್ತು ಮಾವುಗಳನ್ನು ಗ್ರಾಹಕರಿಗೆ ಕೈಗೆಟಕುವ ರಿಯಾಯ್ತಿ ದರದಲ್ಲಿ ಜಿಲ್ಲಾಡಳಿತದ ಮೂಲಕ ಮಾರಾಟ ಮಾಡಲಾಗುತ್ತಿದೆ. ಈ ಮಾವು ಮತ್ತು ಹಲಸು ಮೇಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕರೀಗೌಡ, ದೇವನಹಳ್ಳಿ ಶಾಸಕ‌ ನಿಸರ್ಗ ನಾರಾಯಣಸ್ವಾಮಿ, ದೇವನಹಳ್ಳಿ ತಾಹಶೀಲ್ದಾರ ಮಂಜುನಾಥ್, ಬೆ. ಗ್ರಾಮಾಂತರ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರುದ್ರೇಶ್ ಮತ್ತಿತರರು ಚಾಲನೆ ನೀಡಿದರು.

ಬಾದಾಮಿ, ರಸಪುರಿ, ಆಮ್ರಾಪಾಲಿ, ಮಲ್ಲಿಕಾ, ನೀಲಂ, ಮಲಗೋವ, ಬಾಷಾ, ದಶೇರಿ, ಅರ್ಕಾ ಆನ್ಮೋನ್, ಟಾಮಿ ಅಟ್ ಕಿನ್ಸ್, ಲಿಲ್ಲಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಹಾಗೂ ವಿವಿಧ ತಳಿಯ ಹಲಸಿನ ಹಣ್ಣುಗಳು ಇಲ್ಲಿ ದೊರೆಯಲಿವೆ. ಮಾರುಕಟ್ಟೆ ದರಕ್ಕಿಂತ ಶೇ. 10ರ ರಿಯಾಯ್ತಿ ದರದಲ್ಲಿ ಗ್ರಾಹಕರಿಗೆ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಮಾವು ಮೇಳದಲ್ಲಿ ಪಾಲ್ಗೊಳ್ಳಲು ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ಶ್ರೀನಿವಾಸಪುರ, ಕನಕಪುರ, ದೇವನಹಳ್ಳಿ ಸೇರಿದಂತೆ ಇತರೆ ಜಿಲ್ಲೆ ಮತ್ತು ತಾಲೂಕುಗಳಿಂದ 20ಕ್ಕೂ ಹೆಚ್ಚು ಮಾವು ಮತ್ತು ಹಲಸು ಬೆಳೆಗಾರರು ಭಾಗವಹಿಸಿದ್ದು, ಈ ಮೇಳಕ್ಕಾಗಿ ಜಿಲ್ಲಾಡಳಿತ 20 ಮಳಿಗೆಗಳನ್ನು ನಿರ್ಮಿಸಿ, ರೈತರಿಗೆ ಉಚಿತವಾಗಿ ನೀಡಿದೆ.

ಈ ವೇಳೆ ಮಾತನಾಡಿದ ತೋಟಗಾರಿಕ ಇಲಾಖೆಯ ಉಪ ನಿರ್ದೇಶಕ ರುದ್ರೇಶ್, ಇದೇ ಮೊದಲ ಬಾರಿಗೆ ತೋಟಗಾರಿಕಾ ಇಲಾಖೆ ಮತ್ತು ಜಿಲ್ಲಾಡಳಿತದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾವು ಮತ್ತು ಹಲಸಿನ‌ ಮೇಳ ಆಯೋಜನೆ ಮಾಡಲಾಗಿದೆ. ನೇರವಾಗಿ ರೈತರಿಂದ ಗ್ರಾಹಕರಿಗೆ ಯೋಗ್ಯ ಬೆಲೆಗೆ ಹಣ್ಣುಗಳು ಸಿಗಲಿವೆ. ಹೆಚ್ಚು ಗ್ರಾಹಕರು ಬಂದು ಹಣ್ಣುಗಳನ್ನು ಖರೀದಿ ಮಾಡಬೇಕು ಎಂದು ಮನವಿ ಮಾಡಿಕೊಂಡರು.

Intro:KN_BNG_02_180519_Mavu Halasu_Mela_ Ambarish_7203301
Slug : ಮೊದಲ ಬಾರಿಗೆ ದೇವನಹಳ್ಳಿಯಲ್ಲಿ ಮಾವು ಹಲಸು ಮೇಳ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಾವು ಹಾಗೂ ಹಲಸು ಮೇಳವನ್ನು ಆಯೋಜನೆ ಮಾಡಲಾಗಿತ್ತು.. ಮೇಳದಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್, ಶಾಸಕ ಹಾಗೂ ಸಾರ್ವಜನಿಕರು ಪಾಲ್ಗೊಂಡು ಮಾವು, ಹಲಸು ಟೇಸ್ಟ್ ನೋಡಿ ಖುಷಿ ಪಟ್ಟರು..

ಹೌದು ಇದೇ ಮೊದಲ ಬಾರಿಗೆ ‌ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ರಾಣಿ ಕ್ರಾಸ್ ಬಳಿ ಮೊದಲ ಬಾರಿಗೆ ಮಾವು ಹಲಸು ಮೇಳವನ್ನು ಆಯೋಜನೆ ಮಾಡಲಾಗಿತ್ತು.. ಮೇಳದಲ್ಲಿ ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ರೈತರು ತಾವು ಬೆಳೆದ ಹಲಸು,ಮಾವು ಪ್ರದರ್ಶನಕ್ಕಿಟ್ಟು ಮಾರಾಟ ಮಾಡಿದ್ರು..

ಬೆಳಗಾರರಿಂದ ಗ್ರಾಹಕರಿಗೆ ರಿಯಾಯ್ತಿ ದರದಲ್ಲಿ ಒದಗಿಸುವ ಮಾವು ಮತ್ತು ಹಲಸು ಹಣ್ಣಿನ ಮೇಳವನ್ನು ಇಂದಿನಿಂದ ಆರಂಭಿಸಿದೆ.  ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವುಗಳ ಸಂಯುಕ್ರಾಶ್ರಯದಲ್ಲಿ ನಾಲ್ಕು ದಿನಗಳ ಕಾಲ ಅಂದರೆ 18 ರಿಂದ 21ರವರೆಗೆ ಈ ಮಾವು ಮತ್ತು ಹಲಸು ಮೇಳ ನಡೆಯಲಿದ್ದು, ದೇವನಹಳ್ಳಿಯ ರಾಣಿ ಕ್ರಾಸ್ ಬಳಿ ವಿವಿಧ ರೀತಿಯ ಮಾವು ಮತ್ತು ಹಲಸುಗಳು ಗ್ರಾಹಕರನ್ನು ಕೈ ಬೀಸಿ ಕರೆಯುತಿವೆ.

ರಾಜ್ಯದ ವಿವಿಧೆಡೆ ರೈತರು ಬೆಳೆದಿರುವ ಹಲಸು ಮತ್ತು ಮಾವುಗಳನ್ನು ಗ್ರಾಹಕರಿಗೆ ಕೈಗೆಟಕುವ ರಿಯಾಯ್ತಿ ದರದಲ್ಲಿ ಜಿಲ್ಲಾಡಳಿತದ ಮೂಲಕ ಮಾರಾಟ ಮಾಡಲಾಗುತ್ತಿದೆ. ಈ ಮಾವು ಮತ್ತು ಹಲಸು ಮೇಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕರೀಗೌಡ, ದೇವನಹಳ್ಳಿ ಶಾಸಕ‌ ನಿಸರ್ಗ ನಾರಾಯಣಸ್ವಾಮಿ, ದೇವನಹಳ್ಳಿ ತಾಹಶೀಲ್ದಾರ ಮಂಜುನಾಥ್, ಬೆ. ಗ್ರಾಮಾಂತರ ಜಿಲ್ಲೆಯ ತೋಟಗಾರಿಕೆ ಇಳಾಖೆಯ ಉಪ ನಿರ್ದೇಶಕರಾದ ರುದ್ರೇಶ್ ಮತ್ತಿತರರು ಮಾರಾಟ ಮೇಳಕ್ಕೆ ಚಾಲನೆ ನೀಡಿದರು.

ಬಾದಾಮಿ, ರಸಪುರಿ, ಆಮ್ರಾಪಾಲಿ, ಮಲ್ಲಿಕಾ, ನೀಲಂ, ಮಲಗೋವ, ಬಾಷಾ, ದಶೇರಿ, ಅರ್ಕಾ ಆನ್ಮೋನ್, ಟಾಮಿ ಅಟ್ ಕಿನ್ಸ್, ಲಿಲ್ಲಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಹಾಗೂ ವಿವಿಧ ತಳಿಯ ಹಲಸಿನಕಾಯಿಗಳು ಇಲ್ಲಿ ದೊರೆಯಲಿವೆ.  ಮಾರುಕಟ್ಟೆ ದರಕ್ಕಿಂತ ಶೇ.10ರ ರಿಯಾಯ್ತಿ ದರದಲ್ಲಿ ಗ್ರಾಹಕರಿಗೆ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ.

ಮಾವು ಮೇಳದಲ್ಲಿ ಪಾಲ್ಗೊಳ್ಳಲು ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ಶ್ರೀನಿವಾಸಪುರ, ಕನಕಪುರ, ದೇವನಹಳ್ಳಿ ಸೇರಿದಂತೆ ಇತರೆ ಜಿಲ್ಲೆ ಮತ್ತು ತಾಲೂಕುಗಳಿಂದ 20ಕ್ಕೂ ಹೆಚ್ಚು ಮಾವು ಮತ್ತು ಹಲಸು ಬೆಳೆಗಾರರು ಭಾಗವಹಿಸಿದ್ದು, ಈ ಮೇಳಕ್ಕಾಗಿ ಜಿಲ್ಲಾಡಳಿತ 20 ಮಳಿಗೆಗಳನ್ನು ನಿರ್ಮಿಸಿ, ರೈತರಿಗೆ ಉಚಿತವಾಗಿ ನೀಡಿದೆ.

ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ಹೊರೆಯಾಗದೆ, ಮಾರಾಟಗಾರರಿಗೂ ನಷ್ಟವಾಗದಂತ ಯೋಗ್ಯ ಬೆಲೆಗೆ ತಲುಪಿಸಬೇಕೆಂಬ ಉದ್ದೇಶದಿಂದ ಮಾವು ಮೇಳ ಆಯೋಜಿಸಲಾಗಿದೆ.. ಇದರಿಂದ ಯಾವುದೇ ಕಾಲ್ಸಿಯಂ ಕಾರ್ಬೈಡ್‍ನಂತಹ ಹಾನಿಕಾರಕ ರಾಸಾಯನಿಕಗಳನ್ನು ಬಳಸದೇ ಇರುವ ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನೇ ಮಾರಾಟಕ್ಕೆ ಇಡಲಾಗಿದ್ದು ಯಾವುದೇ ಹಾನಿಯಾಗುವುದಿಲ್ಕ.. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಮಾವು ಮತ್ತು ಹಲಸಿನ ಮೇಳವನ್ನು ಆರಂಭಿಸಿದ್ದು, ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.. ಈಗಾಗಲೇ ಇನ್ನು15 ರೈತರು ನಮಗೂ ಮಳಿಗೆಯನ್ನು ನೀಡಿ ಎಂದು ಕೇಳಿಕೊಂಡಿದ್ದರು, ಇದರಿಂದ ಮುಂದಿನ ವಾರ ಮತ್ತೊಂದು ಮಾವು ಮತ್ತು ಹಲಸಿನ ಮೇಳೆ ಇದೇ ದೇವನಹಳ್ಳಿಯಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಕರಿಗೌಡರು ತಿಳಿಸಿದರು..

ಇನ್ನು ಇದೇ ವೇಳೆ ಮಾತನಾಡಿದ ತೋಟಗಾರಿಕ ಇಲಾಖೆಯ ಉಪ ನಿರ್ದೇಶಕ ರುದ್ರೇಶ್ ಮಾತನಾಡಿ, ಇದೇ ಮೊದಲ ಬಾರಿಗೆ ತೋಟಗಾರಿಕೆ ಮತ್ತು ಜಿಲ್ಲಾಡಳಿತದಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾವು ಮತ್ತು ಹಲಸಿನ‌ ಮೇಳ ಆಯೋಜನೆ ಮಾಡಿದ್ದು ನೇರವಾಗಿ ರೈತರಿಂದ ಗ್ರಾಹಕರಿಗೆ ಯೋಗ್ಯ ಬೆಲೆಗೆ ಹಣ್ಣುಗಳು ಸಿಗಲಿವೆ.. ಹೆಚ್ಚು ಗ್ರಾಹಕರು ಬಂದು ಹಣ್ಣುಗಳನ್ನು ಖರೀದಿ ಮಾಡಬೇಕು ಎಂದು ಮನವಿ ಮಾಡಿಕೊಂಡರು.. ಅಲ್ಲದೇ ಈ ಮೇಳ ಸಕ್ಸ್ ಸ್ ಆಗುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು..

ನಾವು ಎಲ್ಲೇ ಇಂತಹ ಮೇಳಗಳು ನಡೆದ್ರು ಅಲ್ಲಿಗೆ ಹೋಗ್ತೇವೆ.. ಹಾಸನ, ಮಂಡ್ಯ, ಮೈಸೂರ, ಲಾಲಬಾಗ್ ಸೇರಿದಂತೆ ಎಲ್ಲಾ ಕಡೆಯಲ್ಲೂ ನಾವು ನಮ್ಮ ಹಣ್ಣುಗಳನ್ನು ಮಾರಾಟ ಮಾಡಿದ್ದಿವಿ ಅಲ್ಲೆಲ್ಲ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.. ಇದೇ ಮೊದಲ ಬಾರಿಗೆ ದೇವನಹಳ್ಳಿ ಯಲ್ಲಿ ಆಯೋಜನೆಗೊಂಡಿರುವ ಮಾವು ಮತ್ತು ಹಲಸಿನ ಮೇಳೆದಲ್ಲಿ ನಮ್ಮ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದೇವೆ.. ಎಂದಿನಂತೆ ಗ್ರಾಹಕರು ನಮಗೆ ಸ್ಪಂದಿಸುವ ನಿರೀಕ್ಷೆ ಇದೆ ಎಂದು ಮಾವಿನ ಹಣ್ಣಿನ ಮಾರಾಟಗಾರರು ಹೇಳುತ್ತಾರೆ.‌

ಒಟ್ಟಿನಲ್ಲಿ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಮಾವು ಮತ್ತು ಹಲಸು ಮೇಳೆವನ್ನು ಆಯೋಜಿಸಿದ್ದು, ನಾಲ್ಕು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಗ್ರಾಹಕರು ಯಾವ ರೀತಿ ರೈತರಿಗೆ ಸ್ಪಂದಿಸುತ್ತಾರೆ ಎಂಬುದನ್ನು ನೋಡಬೇಕು.‌

Body:NoConclusion:No

For All Latest Updates

TAGGED:

Devanahalli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.