ETV Bharat / state

ವೇಗವಾಗಿ ಬಂದ ಬೋರ್ ವೇಲ್ ಲಾರಿ ಪಲ್ಟಿ: ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

ರಾಹುತನಹಳ್ಳಿ ರಸ್ತೆಯ ಕೆ ಎಂ ವಾಟರ್ ಸರ್ವಿಸ್ ಸ್ಟೇಷನ್ ಬಳಿ ವೇಗವಾಗಿ ಬಂದ ಬೋರ್​ವೆಲ್​ ಲಾರಿಯೊಂದು ಪಲ್ಟಿಯಾಗಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Visual captured on CCTV Camera
ವೇಗವಾಗಿ ಬಂದ ಬೋರ್ ವೇಲ್ ಲಾರಿ ಪಲ್ಟಿ
author img

By

Published : Feb 18, 2022, 8:19 PM IST

ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಅತಿ ವೇಗವಾಗಿ ಬಂದ ಬೋರ್ ವೇಲ್ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಲಾರಿಯಲ್ಲಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವೇಗವಾಗಿ ಬಂದ ಬೋರ್ ವೇಲ್ ಲಾರಿ ಪಲ್ಟಿ

ನೆಲಮಂಗಲ ಸಮೀಪದ ರಾಹುತನಹಳ್ಳಿ ರಸ್ತೆಯಲ್ಲಿ ಇರುವ ಗುಂಡಿಯಲ್ಲಿ ವೇಗವಾಗಿ ಬಂದ ಲಾರಿ ಪಲ್ಟಿಯಾಗಿದೆ. ರಾಹುತನಹಳ್ಳಿ ರಸ್ತೆಯ ಕೆ ಎಂ ವಾಟರ್ ಸರ್ವಿಸ್ ಸ್ಟೇಷನ್ ಬಳಿ ಈ ಘಟನೆ ನಡೆದಿದೆ. ರಸ್ತೆ ಪಕ್ಕದ ಸರ್ವಿಸ್ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.

ಇದನ್ನೂ ಓದಿ: ಮಾಟಗಾರ ಎಂದು ಆರೋಪಿಸಿ ಹೊಡೆದು ಕೊಂದ ಗ್ರಾಮಸ್ಥರು

ನೆಲಮಂಗಲ ಆರ್​ಟಿಓ ಕಚೇರಿ ರಸ್ತೆ ಹಳ್ಳ ಗುಂಡಿಯಿಂದ ಕೂಡಿದ್ದು, ಪ್ರತಿನಿತ್ಯ ವಾಹನ ಸವಾರರು ರಸ್ತೆಯ ಹಳ್ಳ ಗುಂಡಿಯಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಹಲವು ಬಾರಿ ಗ್ರಾಮಸ್ಥರು ರಸ್ತೆ ಅಭಿವೃದ್ಧಿಪಡಿಸುವಂತೆ ಪ್ರತಿಭಟನೆ ನಡೆಸಿದ್ದರೂ, ಸಹ ಯಾವ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸದಿರುವುದು ವಿಪರ್ಯಾಸವೇ ಸರಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.