ಬೆಂಗಳೂರು:ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮಕ್ಕೆ ಇರುವುದೊಂದೇ ನೀರಿನ ಟ್ಯಾಂಕ್. ಅದು ಸಹಶಿಥಿಲಗೊಂಡು ಇನ್ನೇನು ಬೀಳುವ ಸ್ಥಿತಿಯಲ್ಲಿದೆ. ಹಾಗಾಗಿ ಕೂಡಲೇ ನೆಲಸಮ ಮಾಡಿ ಎಂದು ಸ್ಥಳೀಯರು ಮನವಿ ಸಲ್ಲಿಸಿದರೂ ಯಾವುದೇ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲವಂತೆ.
ಹೌದು, ಸೂಲಿಬಲೆಯಲ್ಲಿ ಕಳೆದ 20 ವರ್ಷಗಳಿಂದಲೂ ಈ ನೀರಿನ ಬಳಕೆಯಲ್ಲಿದೆ. ಈ ಟ್ಯಾಂಕ್ ಶಿಥಿಲಗೊಂಡಿದ್ದರೂ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಹಾಗೂ ಅಪಾಯದ ಮೂನ್ಸೂಚನೆ ಇದ್ದರೂ ಟ್ಯಾಂಕನ್ನು ದುರಸ್ತಿಗೊಳಿಸುತ್ತಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಥಿಲಗೊಂಡಿರುವ ಟ್ಯಾಂಕ್ಅನ್ನು ಉರುಳಿಸುವಂತೆ ಅನುಮೋದನೆ ದೊರೆತು ವರ್ಷ ಕಳೆದರೂ ಕೂಡಾ ಅಧಿಕಾರಿಗಳು ಮಾತ್ರ ಏನೂ ತಿಳಿಯದಂತೆ ಇದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನಾದರೂ ಅಪಾಯವಾಗುವ ಮುನ್ನ ಎಚ್ಚೆತ್ತುಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.