ದೊಡ್ಡಬಳ್ಳಾಪುರ: ಲಾಕ್ ಡೌನ್ ಜಾರಿಯಾದ ದಿನದಿಂದ ಮನೆಯಿಂದ ಹೊರ ಬರದಂತೆ ಪೊಲೀಸರು ಕಾವಲು ಕಾಯುತ್ತಿದ್ದಾರೆ. ನಗರದಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ಸರ್ಕಾರದ ಸೂಚನೆಯಂತೆ ಸಡಿಲಗೊಳಿಸಲಾಗಿದೆ.
ಈ ಅವಕಾಶ ಬಳಸಿಕೊಂಡ ಪುಂಡರು ಅನಗತ್ಯವಾಗಿ ತಿರುಗುವುದನ್ನು ಹೆಚ್ಚು ಮಾಡಿದ್ದು, ಜೊತೆಗೆ ಕದ್ದುಮುಚ್ಚಿ ಜೂಜಾಟಗಳಲ್ಲಿ ತೊಡಗಿದ್ಧಾರೆ. ಗಲ್ಲಿಗಳಲ್ಲಿ ಗುಂಪು ಸೇರಿ ಬೆಟ್ಟಿಂಗ್ ಕಟ್ಟಿ ಕ್ರಿಕೆಟ್ ಆಡುತ್ತಿದ್ದಾರೆ. ಪುಂಡರ ಪುಂಡಾಟಿಕೆಗೆ ಬ್ರೇಕ್ ಹಾಕಲು ದೊಡ್ಡಬಳ್ಳಾಪುರ ಪೊಲೀಸರು ಡ್ರೋಣ್ ಕ್ಯಾಮೆರಾದ ಕಣ್ಗಾವಲು ಇಡಲಾಗಿದೆ.
ಡ್ರೋಣ್ ಕ್ಯಾಮೆರಾ ನಗರದ ಸುತ್ತಮುತ್ತ ಹಾರಾಟ ನಡೆಸಲಿದೆ ಎಂದು ಡಿವೈಎಸ್ಪಿ ರಂಗಪ್ಪ ಮಾಹಿತಿ ನೀಡಿದರು. ನಗರದ ಆಯಕಟ್ಟಿನ ಸ್ಥಳಗಳು ಸೇರಿದಂತೆ ನಗರದ ಹೊರಭಾಗದ ಬಡಾವಣೆಗಳಲ್ಲಿ ಡ್ರೋಣ್ ಹಾರಾಟ ನಡೆಸಲಿದೆ. ಇದರಿಂದ ಲಾಕ್ ಡೌನ್ ನಿಯಮ ಪಾಲನೆಯನ್ನು ತಿಳಿಯುವುದರ ಜೊತೆಗೆ ಇತರೆ ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.
ಲಾಕ್ ಡೌನ್ ತೆರೆವಾದ ನಂತರವೂ ಸಹ ಡ್ರೋಣ್ ಕ್ಯಾಮೆರಾ ಬಳಕೆ ಮುಂದುವರೆಸುವ ಬಗ್ಗೆ ಹಿರಿಯ ಅಧಿಕಾರಗಳ ಜೊತೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.