ದೊಡ್ಡಬಳ್ಳಾಪುರ: ನಗರಸಭೆಯ ರಾಜೀವ್ ಗಾಂಧಿ ಬಡಾವಣೆಯಲ್ಲಿ 6 ಚರಂಡಿ ಕಾಮಾಗಾರಿ ನಡೆಯುತ್ತಿದ್ದು, ವಾರ್ಡ್ ಸದಸ್ಯೆ ಮನೆಯ ಸುತ್ತಮುತ್ತಲಿನ ರಸ್ತೆಗಳಿಗೆ ಮಾತ್ರ ಚರಂಡಿ ನಿರ್ಮಾಣ ಮಾಡಿದ್ದಾರೆ. ಉಳಿದೆಡೆ ಚರಂಡಿ ಇಲ್ಲದೇ ಸೊಳ್ಳೆ, ನೊಣ ಮತ್ತು ಕಂಬಳಿ ಹುಳುಗಳಿಂದ ಹಿಂಸೆ ಪಡುತ್ತಿರುವ ನಿವಾಸಿಗಳು ನಗರಸಭಾ ಸದಸ್ಯೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೊಡ್ಡಬಳ್ಳಾಪುರ ನಗರಸಭೆಯ ರಾಜೀವ್ ಗಾಂಧಿ ಬಡಾವಣೆಯಲ್ಲಿ ಮೂಲ ಸೌಕರ್ಯಗಳು ಮರೀಚಿಕೆಯಾಗಿದೆ, ಬಡಾವಣೆ ನಿರ್ಮಾಣವಾಗಿ 20 ವರ್ಷವಾದರೂ ರಸ್ತೆ ಮತ್ತು ಚರಂಡಿಗಳೇ ಇಲ್ಲ, ಮೂಲ ಸೌಕರ್ಯಗಳನ್ನ ಒದಗಿಸುವಂತೆ ಇಲ್ಲಿನ ನಿವಾಸಿಗಳು ಹೋರಾಟ ಮಾಡಿದ್ದಾರೆ, ನಗರೋತ್ಥಾನದ 1 ಕೋಟಿ ಅನುದಾನದಲ್ಲಿ ರಾಜೀವ್ ಗಾಂಧಿ ಬಡಾವಣೆಯಲ್ಲಿ 6 ಕಡೇ ಚರಂಡಿ ಕಾಮಗಾರಿ ನಡೆಯುತ್ತಿದೆ.
ಇಲ್ಲಿನ ನಗರಸಭಾ ಸದಸ್ಯೆ ಹಂಸಪ್ರಿಯಾ ಅವರ ಮನೆ ಸುತ್ತಮುತ್ತಲಿನ ರಸ್ತೆಗಳಿಗೆ ಮಾತ್ರ ಚರಂಡಿ ನಿರ್ಮಾಣ ಮಾಡುತ್ತಿದ್ದಾರೆ, ರಾಜೀವ್ ಗಾಂಧಿ ಬಡಾವಣೆಯ ಪ್ರಮುಖ ರಸ್ತೆಯಲ್ಲಿಯೇ ಚರಂಡಿ ಇಲ್ಲ, ಚರಂಡಿ ಇಲ್ಲದೇ ಸೊಳ್ಳೆ, ನೊಣ ಮತ್ತು ಕಂಬಳಿ ಹುಳುಗಳಿಂದ ತೊಂದರೆ ಪಡುತ್ತಿರುವುದಾಗಿ ಹಾಗೂ ಇದರಿಂದ ಬಡಾವಣೆ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಆಕ್ರೋಶಕ್ಕೆ ಪ್ರತಿಕ್ರಿಯೆ ನೀಡಿದ ನಗರಸಭಾ ಸದಸ್ಯೆ ಹಂಸಪ್ರಿಯಾ ಅವರು, ಈ ಬಡಾವಣೆಯು ತಗ್ಗು ಪ್ರದೇಶದಲ್ಲಿದ್ದು ಜೋರಾದ ಮಳೆಯಾದಾಗ ಮಳೆನೀರು ನೇರವಾಗಿ ಇದೇ ಪ್ರದೇಶಕ್ಕೆ ನುಗ್ಗುವುದರಿಂದಾಗಿ ಇಲ್ಲಿ ಚರಂಡಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು. ಇನ್ನು ಸ್ವಚ್ಚತೆ ಮತ್ತು ಕಸ ವಿಲೇವಾರಿಯಲ್ಲಿ ದೊಡ್ಡಬಳ್ಳಾಪುರ ನಗರಸಭೆಗೆ ರಾಜ್ಯದಲ್ಲಿ 4ನೇ ಸ್ಥಾನಲ್ಲಿದೆ.
ಇದನ್ನೂ ಓದಿ: ಸಾವಿಗೆ ರಹದಾರಿಯಾದ ರಾಷ್ಟ್ರೀಯ ಹೆದ್ದಾರಿ 48: ತುಮಕೂರು ರಸ್ತೆಯಲ್ಲಿ ಸಾವಿರಾರು ಗುಂಡಿಗಳು