ನೆಲಮಂಗಲ: ಅ. 25ರಂದು ರಾತ್ರಿ ವೇಳೆ ಮೋಟಾರ್ ವೈಂಡಿಂಗ್ ಫ್ಯಾಕ್ಟರಿಗೆ ನುಗ್ಗಿದ ದರೋಡೆಕೋರರು ಲಾಂಗ್ನಿಂದ ಸೆಕ್ಯುರಿಟಿ ಗಾರ್ಡ್ ಹೆದರಿಸಿ ಫ್ಯಾಕ್ಟರಿಯಲ್ಲಿದ್ದ 3 ಲಕ್ಷ 75 ಸಾವಿರ ರೂ. ಮೌಲ್ಯದ ಕಾಪರ್ ತಂತಿ ದೋಚಿ ಪರಾರಿಯಾಗಿದ್ದರು. ಕೃತ್ಯದಲ್ಲಿ ಭಾಗಿಯಾಗಿದ್ದ ಐವರು ದರೋಡೆಕೋರರನ್ನು ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೃಷ್ಣ, ನಾಗೇಶ್.ಎ ಅಲಿಯಾಸ್ ದಡಿಯಾ, ಸಂತೋಷ್ ಅಲಿಯಾಸ್ ಸಂತು, ಮಣಿಕಂಠ ಹಾಗೂ ಕಿರಣ್.ಕೆ ಬಂಧಿತ ಆರೋಪಿಗಳು. ಬೆಂಗಳೂರು ಹೊರವಲಯದ ಮಾಗಡಿರಸ್ತೆ ಚಿಕ್ಕಗೊಲ್ಲರಹಟ್ಟಿಯಸನ್ ಎಲೆಕ್ಟ್ರೋ ಸ್ಟಾಟಿಕ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಮೋಟಾರ್ ವೈಂಡಿಂಗ್ ಫ್ಯಾಕ್ಟರಿಯಲ್ಲಿ ಈ ದರೋಡೆ ಪ್ರಕರಣ ನಡೆದಿತ್ತು. ಅ.25 ರ ಮಧ್ಯರಾತ್ರಿ ಎರಡು ಪ್ಯಾಸೆಂಜರ್ ಆಟೋಗಳಲ್ಲಿ ಬಂದ ದರೋಡೆಕೊರರು ಗೇಟ್ನಲ್ಲಿದ್ದ ಸೆಕ್ಯುರಿಟಿ ಗಾರ್ಡ್ಗೆ ಲಾಂಗ್ ತೋರಿಸಿ ಫ್ಯಾಕ್ಟರಿ ಕೀ ಕಿತ್ತುಕೊಂಡಿದ್ದರು. ಬಳಿಕ ಫ್ಯಾಕ್ಟರಿಯಲ್ಲಿದಲ್ಲಿದ್ದ 3 ಲಕ್ಷ 75 ಸಾವಿರ ರೂ. ಮೌಲ್ಯದ 550 ಕೆಜಿ ತೂಕದ ಕಾಪರ್ ತಂತಿ ದೋಚಿ ಪರಾರಿಯಾಗಿದ್ದರು ಎನ್ನಲಾಗ್ತಿದೆ.
ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಪೊಲೀಸರು ಸದ್ಯ ಐವರು ದರೋಡೆಕೊರರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಎರಡು ಆಟೋ ಹಾಗೂ ಎರಡು ಲಾಂಗ್ಗಳನ್ನು ವಶಪಡಿಸಿಕೊಳ್ಳಲಾಗಿದೆ.