ETV Bharat / spiritual

ವಾರದ ರಾಶಿ ಭವಿಷ್ಯ: ಹಲವರಿಗೆ ಶುಭ, ಕೆಲವರಿಗೆ ಸವಾಲು - WEEKLY HOROSCOPE

ನವೆಂಬರ್ 10ರಿಂದ 16ರ ವರೆಗಿನ ವಾರದ ರಾಶಿ ಭವಿಷ್ಯ ಹೀಗಿದೆ...

ವಾರದ ರಾಶಿ ಭವಿಷ್ಯ  Weekly Horoscope
ವಾರದ ರಾಶಿ ಭವಿಷ್ಯ (ETV Bharat)
author img

By ETV Bharat Karnataka Team

Published : Nov 10, 2024, 7:16 AM IST

ಮೇಷ: ಈ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಮಿಶ್ರಫಲ ದೊರೆಯಲಿದೆ. ವಾರದ ಆರಂಭದಲ್ಲಿ ನೀವು ಕೆಲಸದಲ್ಲಿ ಮುಳುಗಿ ಹೋಗಲಿದ್ದು, ಕೆಲಸದ ಒತ್ತಡವು ಅನಿರೀಕ್ಷಿತವಾಗಿ ಹೆಚ್ಚಲಿದೆ. ಇದನ್ನು ನಿಭಾಯಿಸಬೇಕಾದರೆ ನೀವು ಹೆಚ್ಚಿನ ಶ್ರಮ ಮತ್ತು ಸಮರ್ಪಣಾಭಾವವನ್ನು ತೋರಬೇಕು. ಉದ್ಯೋಗದಲ್ಲಿರುವ ಮಹಿಳೆಯರಿಗೆ ಈ ಅವಧಿಯಲ್ಲಿ ಸವಾಲುಗಳು ಎದುರಾಗಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರದಲ್ಲಿ ಎದುರಾಳಿಗಳು ಕಠಿಣ ಸ್ಪರ್ಧೆಯನ್ನು ನೀಡಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮನ್ನು ಒಂದಷ್ಟು ದೌರ್ಬಲ್ಯವು ಕಾಡಬಹುದು. ಹೀಗಾಗಿ ಸ್ಥಿರ ದಿನಚರಿಯನ್ನು ಕಾಪಾಡುವ ಜೊತೆಗೆ ನಿಮ್ಮ ಆಹಾರಕ್ರಮಕ್ಕೆ ಗಮನ ನೀಡುವುದು ಒಳ್ಳೆಯದು. ವಿದೇಶದಲ್ಲಿ ವೃತ್ತಿ ಅಥವಾ ವ್ಯವಹಾರದ ಗುರಿಯನ್ನು ಹೊಂದಿರುವವರಿಗೆ ಒಂದಷ್ಟು ಅಡಚಣೆಗಳು ಎದುರಾಗಬಹುದು. ಪ್ರೇಮ ಸಂಬಂಧದಲ್ಲಿ ಭಾವನೆಗಳ ಆಧಾರದಲ್ಲಿ ಅವಸರದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಅಥವಾ ಉದ್ವೇಗದಿಂದ ವರ್ತಿಸಬೇಡಿ. ಇಲ್ಲದಿದ್ದರೆ ಗಂಭೀರ ಸಮಸ್ಯೆಗಳು ಎದುರಾಗಬಹುದು. ನಿಮ್ಮ ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಬೇಕಾದರೆ ನಿಮ್ಮ ಜೀವನ ಸಂಗಾತಿಯ ಅಗತ್ಯತೆಗಳನ್ನು ಕಡೆಗಣಿಸಬೇಡಿ. ನಿಮ್ಮ ನಿರ್ಧಾರಗಳು ಮತ್ತು ಕ್ರಿಯೆಗಳಿಗೆ ಸಂಬಂಧಿಸಿದಂತೆ ನೀವು ಸಾಕಷ್ಟು ಎಚ್ಚರಿಕೆ ಮತ್ತು ಜಾಗರೂಕತೆ ವಹಿಸುವುದು ಒಳ್ಳೆಯದು.

ವೃಷಭ: ಈ ವಾರವು ವೃಷಭ ರಾಶಿಯಲ್ಲಿ ಹುಟ್ಟಿದವರಿಗೆ ವಿವಿಧ ಅನುಭವಗಳು ಉಂಟಾಗಲಿವೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರ ಪಾಲಿಗೆ ಏರುಪೇರು ಉಂಟಾಗಬಹುದು. ಈ ವಾರದಲ್ಲಿ ನೀವು ನಿಮ್ಮ ಕೆಲಸದ ಸ್ಥಳದಿಂದ ಅನಿರೀಕ್ಷಿತವಾಗಿ ಪ್ರಯಾಣಿಸಬೇಕಾದೀತು. ಇದರಿಂದಾಗಿ ಪ್ರಯಾಣದ ದೂರವು ಹೆಚ್ಚಬಹುದು. ತಮ್ಮ ವೃತ್ತಿಯಲ್ಲಿ ಪ್ರಗತಿ ಸಾಧಿಸಲು ಇಚ್ಛಿಸುವವರು ಒಂದಷ್ಟು ತಾಳ್ಮೆಯನ್ನು ತೋರಬೇಕು. ಉದ್ಯೋಗದಲ್ಲಿರುವವರು ಈ ವಾರದ ಅಂತ್ಯದಲ್ಲಿ ತಮ್ಮ ಸಹೋದ್ಯೋಗಿಗಳು ಮತ್ತು ಹಿರಿಯರೊಂದಿಗೆ ಸಹಯೋಗ ಸಾಧಿಸಬೇಕು. ಪ್ರಯಾಣಿಸುವ ವೇಳೆ ನಿಮ್ಮ ಬೆಲೆಬಾಳುವ ವಸ್ತುಗಳಿಗೆ ಹಾಗೂ ಯೋಗಕ್ಷೇಮಕ್ಕೆ ಗಮನ ನೀಡಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಸಾಕಷ್ಟು ಶ್ರಮ ಪಟ್ಟರೆ ಮಾತ್ರವೇ ಯಶಸ್ಸನ್ನು ಗಳಿಸಲಿದ್ದಾರೆ. ಸ್ನೇಹಿತೆಯೊಬ್ಬರ ನೆರವಿನಿಂದ, ಪ್ರಣಯ ಸಂಬಂಧದಲ್ಲಿ ಎದುರಾಗಿರುವ ಸಂಘರ್ಷವನ್ನು ಬಗೆಹರಿಸಬಹುದು. ಆದರೆ ನಂಬಿಕೆಯನ್ನು ಮತ್ತೆ ಗಳಿಸಬೇಕಾದರೆ ಇನ್ನಷ್ಟು ಸಮಯ ಬೇಕಾದೀತು.

ಮಿಥುನ: ವಾರದ ಆರಂಭದಲ್ಲಿ ಪ್ರಮುಖ ವ್ಯಕ್ತಿಯೊಬ್ಬರ ನೆರವನ್ನು ನೀವು ಪಡೆಯಲಿದ್ದು, ದೀರ್ಘ ಕಾಲದಿಂದ ಕಾಡುತ್ತಿರುವ ಸಮಸ್ಯೆಯೊಂದಿಗೆ ಪರಿಹಾರ ದೊರೆಯಲಿದೆ. ಅಧಿಕಾರ ಮತ್ತು ನಾಯಕತ್ವದ ಸ್ಥಾನದಲ್ಲಿರುವವರಿಂದ ನಿಮಗೆ ಸಾಕಷ್ಟು ಬೆಂಬಲ ದೊರೆಯಲಿದೆ. ವಾರವು ಮುಂದುವರಿದಂತೆ, ಕೆಲಸದ ಸ್ಥಳದಲ್ಲಿರುವ ಎದುರಾಳಿಗಳ ಕುರಿತು ಸಾಕಷ್ಟು ಎಚ್ಚರ ವಹಿಸಿ. ಆಸ್ತಿ ಅಥವಾ ಕಟ್ಟಡಕ್ಕೆ ಸಂಬಂಧಿಸಿದ ಸಂಘರ್ಷಗಳು ಬಗೆಹರಿಯಲಿವೆ. ನೀವು ಪಾಲುಗಾರಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರೆ, ನಿಮ್ಮ ಆರ್ಥಿಕ ಸಮಸ್ಯೆಯನ್ನು ಬಗೆಹರಿಸಿ ಮುಂದುವರಿಯುವುದು ಒಳ್ಳೆಯದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವ್ಯಕ್ತಿಗಳು ಧನಾತ್ಮಕ ಫಲಿತಾಂಶವನ್ನು ಪಡೆಯಲಿದ್ದಾರೆ. ಹಣಕಾಸಿನ ಹೂಡಿಕೆಯ ವಿಚಾರದಲ್ಲಿ ನಂಬಿಕಸ್ತ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆಯಿರಿ. ಪ್ರಣಯ ಸಂಬಂಧಕ್ಕೆ ಸಂಬಂಧಿಸಿದಂತೆ ಈ ವಾರದಲ್ಲಿ ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ನಿಮ್ಮ ಸಂಗಾತಿಯ ಜೊತೆಗೆ ನೀವು ಅನುರಾಗದ ಕ್ಷಣಗಳನ್ನು ಕಳೆಯಲಿದ್ದು, ವೈವಾಹಿಕ ಜೀವನದಲ್ಲಿ ಸಂತೃಪ್ತಿ ಇರಲಿದೆ.

ಕರ್ಕಾಟಕ: ವಾರದ ಆರಂಭದಲ್ಲಿ ನೀವು ಪ್ರಮುಖ ಗುರಿಯೊಂದನ್ನು ಈಡೇರಿಸಲಿದ್ದು, ಇದರಿಂದಾಗಿ ನಿಮ್ಮ ಗಳಿಕೆಯಲ್ಲಿ ಹೆಚ್ಚಳ ಉಂಟಾಗಲಿದೆ. ಆದರೆ ಉತ್ಸಾಹದ ಭರದಲ್ಲಿ ನಿಮ್ಮ ನಿರ್ಧಾರದ ಮೇಲೆ ನಿಮ್ಮ ಯಶಸ್ಸು ಪರಿಣಾಮ ಬೀರದಂತೆ ನೋಡಿಕೊಳ್ಳಿ. ಜೂಜಾಟದಂತಹ ಯಾವುದೇ ವ್ಯವಹಾರಗಳಿಗೆ ಹಣ ಹಾಕಬೇಡಿ. ಇದರಿಂದ ಭವಿಷ್ಯದಲ್ಲಿ ಆರ್ಥಿಕ ಹಿನ್ನಡೆ ಉಂಟಾಗಬಹುದು. ಈ ವಾರದಲ್ಲಿ ನೀವು ನಿರೀಕ್ಷಿಸುತ್ತಿದ್ದ ಬಡ್ತಿ ಅಥವಾ ಅಥವಾ ಹೊಸ ಕೆಲಸದ ಅವಕಾಶ ಲಭಿಸಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಹಿರಿಯರು ಹಾಗೂ ಸಹೋದ್ಯೋಗಿಗಳು ನಿಮ್ಮನ್ನು ಪ್ರಶಂಸಿಸಲಿದ್ದಾರೆ. ಆಸ್ತಿಯ ಖರೀದಿ ಮತ್ತು ಮಾರಾಟದ ಮೂಲಕ ನೀವು ಲಾಭ ಗಳಿಸಲಿದ್ದೀರಿ. ವಿದೇಶದಲ್ಲಿ ವೃತ್ತಿ ಅಥವಾ ವ್ಯವಹಾರ ನಡೆಸಲು ನೀವು ಯತ್ನಿಸುತ್ತಿದ್ದರೆ ಸವಾಲುಗಳು ಎದುರಾಗಬಹುದು. ವಾರದ ಅಂತ್ಯದಲ್ಲಿ, ನಿಮ್ಮ ಗೆಳೆಯರು ಅಥವಾ ಕುಟುಂಬದ ಸದಸ್ಯರೊಂದಿಗೆ ಪಿಕ್ನಿಕ್‌ ಅಥವಾ ವಿಹಾರವನ್ನು ಆಯೋಜಿಸಬಹುದು. ನಿಮ್ಮ ಪ್ರಣಯ ಸಂಬಂಧವು ಇನ್ನಷ್ಟು ಗಟ್ಟಿಯಾಗಿ ಬೆಳೆಯಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ.

ಸಿಂಹ: ಈ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ತಮ್ಮ ಯೋಗಕ್ಷೇಮ ಮತ್ತು ಸಂಬಂಧಕ್ಕೆ ಗಮನ ನೀಡಬೇಕು. ದುರ್ಬಲ ಆರೋಗ್ಯವು ನಿಮ್ಮ ವೃತ್ತಿಪರ ಸಾಧನೆಯ ಮೇಲೆ ನೇರವಾದ ಪರಿಣಾಮವನ್ನು ಬೀರಲಿದೆ. ಪ್ರಮುಖ ಅವಕಾಶವೊಂದನ್ನು ನೀವು ಕಡೆಗಣಿಸುವ ಸಾಧ್ಯತೆ ಇದ್ದು, ಸಣ್ಣ ತಪ್ಪು ಸಹ ದೊಡ್ಡ ಪ್ರಮಾಣದ ನಷ್ಟವನ್ನುಂಟು ಮಾಡಲಿದೆ. ಎದುರಾಳಿಗಳ ಕುರಿತು ನೀವು ಎಚ್ಚರಿಕೆಯಿಂದ ಇರಬೇಕು. ವಾರದ ಕೊನೆಗೆ, ಆಸ್ತಿ ಮತ್ತು ಕಟ್ಟಡಕ್ಕೆ ಸಂಬಂಧಿಸಿದಂತೆ ಪ್ರಮುಖ ಸಮಸ್ಯೆಗಳು ಎದುರಾಗಬಹುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಎಚ್ಚರಿಕೆ ವಹಿಸಬೇಕು. ಪ್ರಣಯ ಸಂಬಂಧದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ವೈವಾಹಿಕ ಜೀವನದಲ್ಲಿ ಸಂತಸ ನೆಲೆಸಬೇಕಾದರೆ ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿರಿ. ಅವಸರದಿಂದ ವರ್ತಿಸಿದರೆ ಅಥವಾ ಖಾಸಗಿ ಬದುಕಿನಲ್ಲಿ ಹೆಚ್ಚಿನ ಹಸ್ತಕ್ಷೇಪ ಮಾಡಿದರೆ ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗಬಹುದು.

ಕನ್ಯಾ: ಮುಂಬರುವ ವಾರವು ಕನ್ಯಾ ರಾಶಿಯಲ್ಲಿ ಹುಟ್ಟಿದವರಿಗೆ ಸಂತಸ, ಸಂಪತ್ತು ಮತ್ತು ಸಾಧನೆಯ ಭರವಸೆಯನ್ನು ಕರುಣಿಸುತ್ತದೆ. ವಾರದ ಆರಂಭದಲ್ಲಿ ನಿಮ್ಮ ಹಿಂದಿನ ಸಾಧನೆಗಳಿಗೆ ಮನ್ನಣೆ ದೊರೆಯಲಿದೆ. ನಿಮಗೆ ಪ್ರಮುಖ ಜವಾಬ್ದಾರಿಗಳು ದೊರೆಯುವ ಸಾಧ್ಯತೆ ಇದೆ. ಮಾರುಕಟ್ಟೆಯಲ್ಲಿ ಏರಿಕೆ ಉಂಟಾಗುವುದರಿಂದ ನಿಮಗೆ ಲಾಭ ಗಳಿಸುವ ಅವಕಾಶ ಲಭಿಸಲಿದ್ದು, ನಿಮ್ಮ ವರ್ಚಸ್ಸಿನಲ್ಲಿಯೂ ವೃದ್ಧಿ ಉಂಟಾಗಲಿದೆ. ಈ ವಾರದಲ್ಲಿ ವ್ಯವಹಾರದಲ್ಲಿಯೂ ಧನಾತ್ಮಕ ಫಲಿತಾಂಶ ದೊರೆಯಲಿದೆ. ವೃತ್ತಿಯನ್ನು ಬದಲಾಯಿಸಲು ಇಚ್ಛಿಸುವವರಿಗೆ ಈ ವಾರದ ಕೊನೆಯಲ್ಲಿ ಪ್ರತಿಷ್ಠಿತ ಸಂಸ್ಥೆಯೊಂದರಿಂದ ಕೆಲಸದ ಕೊಡುಗೆ ದೊರೆಯಬಹುದು. ನಿಮ್ಮ ವ್ಯವಹಾರವನ್ನು ಇನ್ನಷ್ಟು ಬೆಳೆಸುವ ಕನಸನ್ನು ನೀವು ಕಾಣುತ್ತಿದ್ದರೆ, ಈ ವಾರದಲ್ಲಿ ಇದು ಕೈಗೂಡಲಿದೆ. ವಾರದ ಉತ್ತರಾರ್ಧದಲ್ಲಿ, ಕೆಲವೊಂದು ಐಷಾರಾಮಿ ವಸ್ತುಗಳನ್ನು ನೀವು ಖರೀದಿಸಲಿದ್ದು, ಇದು ನಿಮ್ಮ ಮನೆಯಲ್ಲಿ ಸಂತಸವನ್ನುಂಟು ಮಾಡಲಿದೆ. ನಿಮ್ಮ ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ಅಲ್ಲದೆ ನಿಮ್ಮ ಪ್ರಣಯ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ. ನಿಮ್ಮ ಸಂಗಾತಿಯೊಂದಿಗೆ ಸಮಯವನ್ನು ಚೆನ್ನಾಗಿ ಆನಂದಿಸಲು ನಿಮಗೆ ಅವಕಾಶ ದೊರೆಯಲಿದೆ.

ತುಲಾ: ಈ ವಾರದಲ್ಲಿ ತುಲಾ ರಾಶಿಯಲ್ಲಿ ಹುಟ್ಟಿದವರು ಸಾಕಷ್ಟು ಚಟುವಟಿಕೆಯಿಂದ ಕೂಡಿರಲಿದ್ದಾರೆ. ಭಿನ್ನಾಭಿಪ್ರಾಯದ ಕಾರಣ ನೀವು ಆಗಾಗ್ಗೆ ನ್ಯಾಯಾಲಯಕ್ಕೆ ಭೇಟಿ ನೀಡಲಿದ್ದೀರಿ. ಆದರೆ ಸಮಸ್ಯೆಯನ್ನು ನ್ಯಾಯಾಲಯದ ಹೊರಗೆಯೇ ಬಗೆಹರಿಸುವುದು ಒಳ್ಳೆಯದು. ವಾರದ ಆರಂಭದಲ್ಲಿ ನಿಮ್ಮ ಎಳೆಯ ಒಡಹುಟ್ಟಿದವರೊಂದಿಗೆ ಉಂಟಾಗುವ ಭಿನ್ನಾಭಿಪ್ರಾಯದ ಕಾರಣ ನೀವು ಮಾನಸಿಕ ತಳಮಳವನ್ನು ಅನುಭವಿಸಬಹುದು. ಯಾವುದೇ ದುರದೃಷ್ಟಕರ ಘಟನೆಯು ಉಂಟಾಗದಂತೆ ನೋಡಿಕೊಳ್ಳಬೇಕಾದರೆ ನಿಮ್ಮ ದನಿಯನ್ನು ನಿಯಂತ್ರಿಸುವುದು ಒಳ್ಳೆಯದು. ಕೆಲಸದ ಸ್ಥಳದಲ್ಲಿ ಸಣ್ಣಪುಟ್ಟ ಕಿರಿಕಿರಿಗಳಿಗೆ ಪ್ರತಿಕ್ರಿಯಿಸುವ ಬದಲಿಗೆ ಅವುಗಳನ್ನು ನಿರ್ಲಕ್ಷಿಸುವುದು ಒಳ್ಳೆಯದು. ವಾರದ ಕೊನೆಯಲ್ಲಿ ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಪ್ರಯಾಣಿಸಬೇಕಾದೀತು. ಈ ಪ್ರಯಾಣದಲ್ಲಿ ನಿರೀಕ್ಷಿತ ಆರ್ಥಿಕ ಲಾಭವು ನಿಮಗೆ ದೊರೆಯದಿದ್ದರೂ ಸಹ ನೀವು ಇದನ್ನು ಆನಂದಿಸಲಿದ್ದೀರಿ. ನಿಮ್ಮ ಭಾವನೆಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳಲು ನೀವು ಇಚ್ಛಿಸುವುದಾದರೆ, ನೀವು ಸ್ವಲ್ಪ ಕಾಲ ಕಾಯುವುದು ಒಳ್ಳೆಯದು. ನಿಮ್ಮ ಈಗಿನ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ. ನಿಮ್ಮ ವೈವಾಹಿಕ ಬದುಕಿನಲ್ಲಿ ಸಂತೃಪ್ತಿ ನೆಲೆಸಲಿದೆ.

ವೃಶ್ಚಿಕ: ವಾರದ ಆರಂಭದಲ್ಲಿ ನಿಮ್ಮ ಹಿಂದಿನ ಪ್ರಯತ್ನಗಳು ಮತ್ತು ಹೂಡಿಕೆಗಳಿಗೆ ಲಾಭದಾಯಕ ಫಲಿತಾಂಶ ದೊರೆಯಲಿದೆ. ಈ ವಾರದಲ್ಲಿ ನಿಮ್ಮ ವೃತ್ತಿಪರ ಮತ್ತು ವ್ಯಾವಹಾರಿಕ ಗುರಿಗೆ ಸಂಬಂಧಿಸಿದಂತೆ ಧನಾತ್ಮಕ ಬೆಳವಣಿಗೆಗಳು ಉಂಟಾಗಲಿವೆ. ಆದರೆ ಕೆಲಸದ ಸ್ಥಳದಲ್ಲಿನ ಶತ್ರುಗಳ ಕುರಿತು ಎಚ್ಚರಿಕೆ ವಹಿಸಬೇಕು. ಏಕೆಂದರೆ ಅವರು ನಿಮ್ಮ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡಬಹುದು. ವಾರದ ಕೊನೆಗೆ ವಿದ್ಯಾರ್ಥಿಗಳು ತಮ್‌ ಅಧ್ಯಯನಕ್ಕೆ ಗಮನ ನೀಡುವಲ್ಲಿ ಸಮಸ್ಯೆಯನ್ನು ಎದುರಿಸಬಹುದು. ನೀವು ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದರೆ, ಸಾಕಷ್ಟು ಶ್ರಮ ಪಟ್ಟ ನಂತರವೇ ಯಶಸ್ಸು ದೊರೆಯುತ್ತದೆ ಎಂಬುದನ್ನು ಮರೆಯಬೇಡಿ. ಆದರೆ ಬಾಹ್ಯ ಹಸ್ತಕ್ಷೇಪದ ಕಾರಣ ನಿಮ್ಮ ಪ್ರಣಯ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಇಂತಹ ಸಂದರ್ಭದಲ್ಲಿ ಮುಕ್ತ ಸಂವಹನದ ಮೂಲಕ ಯಾವುದೇ ಸಂಘರ್ಷವನ್ನು ಬಗೆಹರಿಸುವುದು ಒಳ್ಳೆಯದು. ವಾರದ ಕೊನೆಗೆ ನಿಮ್ಮ ಸಂಗಾತಿಯ ಜೊತೆಗೆ ನೀವು ಪವಿತ್ರ ತಾಣವೊಂದಕ್ಕೆ ಭೇಟಿ ನೀಡಬಹುದು. ಕುಟುಂಬದ ಹಿರಿಯ ಸದಸ್ಯರ ಯೋಗಕ್ಷೇಮದ ಕಡೆಗೆ ಗಮನ ನೀಡುವ ಅಗತ್ಯವಿದ್ದು, ಅವರಿಗೆ ಅಗತ್ಯವಿರುವ ಸೂಕ್ತ ಆರೈಕೆ ಮತ್ತು ನೆರವನ್ನು ನೀಡಲು ಮರೆಯಬೇಡಿ.

ಧನು: ಈ ವಾರದಲ್ಲಿ ಧನು ರಾಶಿಯಲ್ಲಿ ಹುಟ್ಟಿದವರು ತಮ್ಮ ಸಮಯ ಮತ್ತು ಶಕ್ತಿಯನ್ನು ಸರಿಯಾಗಿ ಬಳಸಿಕೊಂಡರೆ ಅವರಿಗೆ ಗಣನೀಯ ಪ್ರಮಾಣದ ಯಶಸ್ಸು ಮತ್ತು ಆರ್ಥಿಕ ಲಾಭ ಉಂಟಾಗಲಿದೆ. ಈ ಅವಧಿಯಲ್ಲಿ ಪ್ರಭಾವಿ ವ್ಯಕ್ತಿಗಳು ನಿಮ್ಮ ಸಂಪರ್ಕಕ್ಕೆ ಬರಲಿದ್ದು, ಅವರ ನೆರವಿನಿಂದ ನೀವು ಲಾಭದಾಯಕ ಉದ್ಯಮಗಳಿಗೆ ಕೈ ಹಾಕಲಿದ್ದೀರಿ. ಉದ್ಯೋಗದಲ್ಲಿರುವ ಮಹಿಳೆಯರು ಸಹ ಪ್ರಮುಖ ಮೈಲುಗಲ್ಲನ್ನು ಸಾಧಿಸಲಿದ್ದು, ಇದರಿಂದಾಗಿ ಅವರ ಮನೆ ಮತ್ತು ಕುಟುಂಬದ ಸದಸ್ಯರ ನಡುವೆ ವರ್ಚಸ್ಸಿನಲ್ಲಿ ವೃದ್ಧಿ ಉಂಟಾಗಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೈಗೂಡಿ ಬರಬಹುದು. ನಿಮ್ಮ ಪ್ರಣಯ ಸಂಗಾತಿಯ ಜೊತೆಗಿನ ಭಾವ ತೀವ್ರತೆಯು ಹೆಚ್ಚಲಿದೆ. ನಿಮ್ಮ ಪೋಷಕರು ನಿಮ್ಮ ಪ್ರಣಯ ಸಂಬಂಧಕ್ಕೆ ಹಸಿರು ನಿಶಾನೆಯನ್ನು ತೋರಲಿದ್ದು, ಭವಿಷ್ಯದಲ್ಲಿ ಮದುವೆಗೆ ತಮ್ಮ ಆಶೀರ್ವಾದವನ್ನು ನೀಡಲಿದ್ದಾರೆ. ವಾರದ ಕೊನೆಗೆ ನಿಮ್ಮ ತಾಯಿಯ ಆರೋಗ್ಯದ ಕುರಿತ ಚಿಂತೆ ನಿಮ್ಮನ್ನು ಕಾಡಬಹುದು. ನಿಮ್ಮ ಯೋಗಕ್ಷೇಮ ಮತ್ತು ನಿಮ್ಮ ವಾಹನದ ಸುರಕ್ಷತೆಯ ಕುರಿತು ಗಮನ ಹರಿಸಿ.

ಮಕರ: ಈ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ಸವಾಲಿನಿಂದ ಕೂಡಿರಲಿದೆ. ಏಕೆಂದರೆ ಅವರು ವಿವಿಧ ಅಡಚಣೆಗಳನ್ನು ಎದುರಿಸಲಿದ್ದು, ಅನೇಕ ಜವಾಬ್ದಾರಿಗಳಿಗೆ ಹೆಗಲು ನೀಡಬೇಕಾಗುತ್ತದೆ. ಅನೇಕ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಉಂಟಾಗಲಿದ್ದು, ನಿಮ್ಮ ಹೊಣೆಗಾರಿಕೆಯನ್ನು ಈಡೇರಿಸಲು ಹೆಚ್ಚಿನ ಪ್ರಯತ್ನದ ಅಗತ್ಯ ಉಂಟಾಗಲಿದೆ. ಅಲ್ಲದೆ ಮನೆಯ ಕೆಲಸ ಹಾಗೂ ಇತರ ಕಾಮಗಾರಿಗಳಲ್ಲಿ ಹೆಚ್ಚಳ ಉಂಟಾಗಲಿದೆ. ಇದರ ನಡುವೆ ದೊಡ್ಡ ವೆಚ್ಚವನ್ನು ನಿಭಾಯಿಸಲು ನಿಮ್ಮ ಕೈಯಲ್ಲಿರುವ ಹಣವು ಸಾಲದೆ ಹೋಗಬಹುದು. ನೀವು ಕೆಲಸದ ಹುಡುಕಾಟದಲ್ಲಿದ್ದರೆ ಇನ್ನಷ್ಟು ತಾಳ್ಮೆ ವಹಿಸಿ ಕೆಲಸವನ್ನು ಹುಡುಕುವ ಅಗತ್ಯವಿದೆ. ನಿಮ್ಮ ಸಂಗಾತಿಯ ಜೊತೆಗಿನ ಯಾವುದೇ ಭಿನ್ನಾಭಿಪ್ರಾಯವು ಸಂಘರ್ಷಕ್ಕೆ ತಿರುಗದಂತೆ ನೋಡಿಕೊಳ್ಳಿ. ಮನೆಯಲ್ಲಿ ಕಾಣಿಸಿಕೊಳ್ಳುವ ಯಾವುದೇ ಸಮಸ್ಯೆಯನ್ನು ಮುಕ್ತ ಸಂವಹನದ ಮೂಲಕ ಬಗೆಹರಿಸಲು ಯತ್ನಿಸಿ. ಈ ವಾರದಲ್ಲಿ ನಿಮ್ಮ ಪ್ರಣಯ ಸಂಗಾತಿಯ ಜೊತೆಗೆ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಹುದು. ಅಲ್ಲದೆ ಕುಟುಂಬದ ಹಿರಿಯ ಸದಸ್ಯರ ಆರೋಗ್ಯವು ನಿಮ್ಮ ಚಿಂತೆಗೆ ಕಾರಣವೆನಿಸಬಹುದು. ಸರಿಯಾಗಿ ಆಹಾರವನ್ನು ಸೇವಿಸುವುದು, ಸಾಕಷ್ಟು ನೀರನ್ನು ಕುಡಿಯುವುದು ಮತ್ತು ನಿಯತವಾಗಿ ವ್ಯಾಯಾಮವನ್ನು ಮಾಡುವುದು ಇತ್ಯಾದಿಗಳ ಮೂಲಕ ಆರೋಗ್ಯದಾಯಕ ಜೀವನಶೈಲಿಯನ್ನು ಕಾಪಾಡುವುದು ಅಗತ್ಯ. ವಿರಾಮವನ್ನು ತೆಗೆದುಕೊಂಡು ನಿಮ್ಮ ಮಾನಸಿಕ ಯೋಗಕ್ಷೇಮಕ್ಕೆ ಒತ್ತು ನೀಡಲು ಮರೆಯಬೇಡಿ.

ಕುಂಭ: ಈ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ಆಲಸ್ಯದಿಂದ ಹೊರಬರಬೇಕು ಮತ್ತು ಅಹಂಕಾರವನ್ನು ದೂರ ಮಾಡಬೇಕು. ಕೆಲಸವನ್ನು ಮುಂದಿನ ದಿನಕ್ಕೆ ಮುಂದೂಡಬೇಡಿ. ಇಲ್ಲದಿದ್ದರೆ ಸಮಸ್ಯೆಗಳು ಎದುರಾಗಬಹುದು. ಜಮೀನಿಗೆ ಸಂಬಂಧಿಸಿದ ವಿವಾದವನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸುವುದು ಒಳ್ಳೆಯದು. ನ್ಯಾಯಾಲಯದ ಭೇಟಿಯನ್ನು ಮುಂದೂಡಿದರೆ ಸಮಸ್ಯೆಗಳು ಎದುರಾಗಬಹುದು. ವಾರದ ನಡುವಿನ ದಿನಗಳು ವ್ಯವಹಾರಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಅನುಕೂಲಕರ. ಆರ್ಥಿಕ ವಿಚಾರಗಳನ್ನು ನಿಭಾಯಿಸುವಾಗ ಎಚ್ಚರಿಕೆ ವಹಿಸಿ. ಭವಿಷ್ಯದಲ್ಲಿ ನಷ್ಟ ಉಂಟಾಗದಂತೆ ನೋಡಿಕೊಳ್ಳುವುದಕ್ಕಾಗಿ ಉದ್ಯಮ ಅಥವಾ ವ್ಯವಹಾರದಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ಹೆಜ್ಜೆ ಇಡಿರಿ. ಪ್ರಯಾಣದ ವೇಳೆ ನಿಮ್ಮ ವೈಯಕ್ತಿಕ ವಸ್ತುಗಳ ಸುರಕ್ಷತೆಗೆ ಗಮನ ನೀಡಿರಿ ಮತ್ತು ಯೋಗಕ್ಷೇಮದ ಕುರಿತು ಕಾಳಜಿ ವಹಿಸಿ. ಪ್ರಣಯ ಸಂಬಂಧದಲ್ಲಿಯೂ ಎಚ್ಚರಿಕೆ ವಹಿಸಿ. ವೈವಾಹಿಕ ಬದುಕಿನಲ್ಲಿ ಸಾಮರಸ್ಯ ಕಾಪಾಡಬೇಕಾದರೆ ನಿಮ್ಮ ಸಂಗಾತಿಯ ಅಗತ್ಯತೆಗಳನ್ನೂ ಈಡೇರಿಸಿರಿ.

ಮೀನ: ಈ ರಾಶಿಯಲ್ಲಿ ಹುಟ್ಟಿದವರಿಗೆ ಮುಂದಿನ ವಾರದಲ್ಲಿ ಯಶಸ್ಸು ದೊರೆಯಲಿದೆ. ಅದರೆ ಇದಕ್ಕಾಗಿ ಸವಾಲುಗಳನ್ನು ಎದುರಿಸುವುದು ಮಾತ್ರವಲ್ಲದೆ ಸಾಕಷ್ಟು ಶ್ರಮವನ್ನೂ ವಹಿಸಬೇಕಾಗುತ್ತದೆ. ನಿಮ್ಮ ವೃತ್ತಿಪರ ಕಾರ್ಯಗಳಲ್ಲಿ ಇತರರನ್ನು ಅವಲಂಬಿಸಿದೆ ಖುದ್ದಾಗಿ ಬದ್ಧತೆಯನ್ನು ತೋರುವುದು ಒಳ್ಳೆಯದು. ಉದ್ಯೋಗದಲ್ಲಿರುವವರು ತಮ್ಮ ಆದಾಯದ ಮೂಲದಲ್ಲಿ ವೈವಿಧ್ಯತೆಯನ್ನು ತರುವುದು ಒಳ್ಳೆಯದು. ಉದ್ಯಮದಲ್ಲಿ ತೊಡಗಿಸಿಕೊಂಡಿರುವವರಿಗೆ ವಾರದ ಆರಂಭಿಕ ದಿನಗಳು ನಿಷ್ಕ್ರಿಯತೆಯಿಂದ ಕೂಡಿರಬಹುದು. ಆದರೆ ವಾರದ ಕೊನೆಗೆ ವೇಗ ದೊರೆಯಲಿದ್ದು, ನಿರೀಕ್ಷಿತ ಆರ್ಥಿಕ ಲಾಭ ಸಿಗಲಿದೆ. ಮಾರುಕಟ್ಟೆಯ ಅವಕಾಶಗಳನ್ನು ನೀವು ಚೆನ್ನಾಗಿ ಬಳಸಿಕೊಳ್ಳಲಿದ್ದು, ನಿಮ್ಮ ಸಂಪತ್ತಿನಲ್ಲಿ ಸಾಕಷ್ಟು ಹೆಚ್ಚಳ ಉಂಟಾಗಲಿದೆ. ಪ್ರಣಯ ಸಂಬಂಧಕ್ಕೆ ಕುರಿತಂತೆ ಹೇಳುವುದಾದರೆ, ನಿಮ್ಮ ಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದ್ದು, ಸಂಗಾತಿಯ ಜೊತೆಗಿನ ಸಂವಹನದಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ನಿಮ್ಮ ಆರೋಗ್ಯಕ್ಕೆ ಗಮನ ನೀಡಿರಿ. ವೈವಾಹಿಕ ಜೀವನದಲ್ಲಿ ಸಂತೃಪ್ತಿ ನೆಲೆಸಬೇಕಾದರೆ ನಿಮ್ಮ ಸಂಬಂಧಕ್ಕೆ ಆದ್ಯತೆ ನೀಡಿರಿ. ಆದರೆ ಈ ವಾರದಲ್ಲಿ ನೀವು ಋತುಮಾನಕ್ಕೆ ಸಂಬಂಧಿಸಿದ ಅಥವಾ ಈಗಾಗಲೇ ಇರುವ ಆರೋಗ್ಯ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇದ್ದು, ನಿಮ್ಮ ಯೋಗಕ್ಷೇಮಕ್ಕೆ ಒತ್ತು ನೀಡುವುದು ಅಗತ್ಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.