ETV Bharat / sports

IND vs SA 2nd T20: ಮೊದಲ ಪಂದ್ಯ ಗೆದ್ದರೂ ಟೀಂ ಇಂಡಿಯಾಗೆ ಕಡಿಮೆ ಆಗಿಲ್ಲ ಟೆನ್ಶನ್: ಕಾರಣ ಏನು ಗೊತ್ತಾ? - INDIA VS SOUTH AFRICA T20

ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡನೇ ಟಿ20 ಪಂದ್ಯ ನಡೆಯಲಿದೆ.

ಭಾರತ ದಕ್ಷಿಣ ಆಫ್ರಿಕಾ ಟಿ20
ಭಾರತ ದಕ್ಷಿಣ ಆಫ್ರಿಕಾ ಟಿ20 (AFP)
author img

By ETV Bharat Sports Team

Published : Nov 10, 2024, 7:45 AM IST

Updated : Nov 10, 2024, 12:55 PM IST

IND vs SA 2nd T20: ಟೀಂ ಇಂಡಿಯಾ 4 ಪಂದ್ಯಗಳ ಟಿ20 ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ ಪ್ರದರ್ಶನ ತೋರಿ ಹರಿಣ ಪಡೆ ಮೇಲೆ ಜಯ ಸಾಧಿಸಿದೆ.

ಕಿಂಗ್ಸ್‌ಮೇಡ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲಿಂಗ್​ ಮತ್ತು ಬ್ಯಾಟಿಂಗ್​ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ತೋರಿತು. ಬ್ಯಾಟಿಂಗ್​ನಲ್ಲಿ ಸಂಜು ಸ್ಯಾಮ್ಸನ್​ ಅಬ್ಬರಿಸಿ ಬಿರುಸಿನ ಶತಕ ಸಿಡಿಸಿದರೆ, ಬೌಲಿಂಗ್​ನಲ್ಲಿ ಕನ್ನಡಿಗ ವರುಣ್ ಚಕ್ರವರ್ತಿ ಮತ್ತು ರವಿ ಬಿಷ್ಣೋಯ್​​ ಕಮಾಲ್​ ಮಾಡಿದ್ದರು. ಈ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಟೀಂ ಇಂಡಿಯಾ ಮೊದಲ ಟಿ20 ಪಂದ್ಯದಲ್ಲಿ ಹರಿಣಗಳ ವಿರುದ್ಧ 61 ರನ್‌ಗಳಿಂದ ಗೆಲುವು ಸಾಧಿಸಿತು.

ಭಾರತ ನೀಡಿದ್ದ 203 ರನ್‌ಗಳ ಗುರಿ ಬೆನ್ನತ್ತಿದ ಆತಿಥೇಯ ತಂಡ ಆರಂಭದಲ್ಲೇ ಭಾರತೀಯ ಬೌಲರ್‌ಗಳ ದಾಳಿಗೆ ಸಿಲುಕಿ 17.5 ಓವರ್‌ಗಳಲ್ಲಿ 141 ರನ್‌ಗಳಿಗೆ ಸರ್ವಪತನ ಕಂಡಿತು. ವರುಣ್ ಚಕ್ರವರ್ತಿ ಮತ್ತು ಬಿಷ್ಣೋಯ್ ತಲಾ ಮೂರು ವಿಕೆಟ್ ಉರುಳಿಸಿದರು. ಅವೇಶ್ ಖಾನ್ ಇಬ್ಬರು ಬ್ಯಾಟರ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರೆ, ಅರ್ಷದೀಪ್ ಖಾತೆಗೆ ಒಂದು ವಿಕೆಟ್ ಸೇರಿತು.

ಇದರೊಂದಿಗೆ ಟೀಂ ಇಂಡಿಯಾ ಡರ್ಬನ್‌ನಲ್ಲಿ ಸತತ 5ನೇ ಗೆಲುವು ಮತ್ತು ಈ ವರ್ಷದ ಸತತ 11ನೇ ಜಯ ದಾಖಲಿಸಿತು. ಈ ವರ್ಷದಲ್ಲಿ ಭಾರತ ಒಟ್ಟು 23 ಪಂದ್ಯಗಳನ್ನು ಆಡಿದ್ದು ಕೇವಲ ಒಂದರಲ್ಲಿ ಮಾತ್ರ ಸೋತಿದೆ. ಜುಲೈ 6ರಂದು ನಡೆದ ಜಿಂಬಾಬ್ವೆ ವಿರುದ್ಧ ಟಿ20 ಪಂದ್ಯದಲ್ಲಿ ಭಾರತ ಸೋಲನುಭವಿಸಿತ್ತು. ನಂತರ ನಡೆದ ಪಂದ್ಯಗಳಲ್ಲಿ ತಂಡ ಸತತ ಗೆಲುವು ಸಾಧಿಸುತ್ತಾ ಬಂದಿದೆ. ಆದ್ರೆ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20ಗೂ ಮುನ್ನವೇ ಭಾರತಕ್ಕೆ ಟೆನ್ಶನ್​ ಹೆಚ್ಚಾಗಿದೆ.

ದಕ್ಷಿಣ ಆಫ್ರಿಕಾ ಅಂಕಿಅಂಶ: ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡನೇ ಟಿ20 ಪಂದ್ಯ ಸೇಂಟ್ ಜಾರ್ಜ್ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಮೈದಾನದಲ್ಲಿ ಆತಿಥೇಯ ತಂಡದ ಅಂಕಿಅಂಶಗಳು ಅತ್ಯುತ್ತಮವಾಗಿವೆ. ದಕ್ಷಿಣ ಆಫ್ರಿಕಾ ಕಳೆದ 17 ವರ್ಷಗಳಿಂದ ಈ ಮೈದಾನದಲ್ಲಿ ಒಂದೇ ಒಂದು ಟಿ20 ಪಂದ್ಯವನ್ನೂ ಸೋತಿಲ್ಲ. ಕೊನೆಯದಾಗಿ 2007ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹರಿಣ ಪಡೆ ಸೋಲನುಭವಿಸಿತ್ತು.

ಕಳೆದ ವರ್ಷ ಡಿಸೆಂಬರ್​ 12ರಂದು ಗ್ಕೆಬರ್ಹಾದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 180 ರನ್‌ ದಾಖಲಿಸಿತ್ತು. ಇದು ಈ ಮೈದಾನದ ಈವರೆಗಿನ ಅತ್ಯಧಿಕ ಟಿ20 ಸ್ಕೋರ್​ ಆಗಿದೆ. 180 ರನ್​ಗಳಿಸಿದ್ದರೂ ಆ ಪಂದ್ಯವನ್ನು ಭಾರತ ಸೋತಿತ್ತು. ಡಕ್ವರ್ತ್ ಲೂಯಿಸ್ ನಿಯಮದಿಂದ ದಕ್ಷಿಣ ಆಫ್ರಿಕಾ ಪಂದ್ಯ ಗೆದ್ದಿತು. ಈ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಈವರೆಗೂ ಒಟ್ಟು 4 ಪಂದ್ಯಗಳನ್ನು ಆಡಿದ್ದು, ಕೊನೆಯ 3 ಪಂದ್ಯಗಳನ್ನು ಗೆದ್ದಿದೆ.

ಗ್ಕೆಬರ್ಹಾ ಅಂಕಿಅಂಶ: ಗ್ಕೆಬರ್ಹಾದಲ್ಲಿ ಒಟ್ಟು9 ಟಿ20 ಪಂದ್ಯಗಳು ನಡೆದಿದ್ದು, ಇದರಲ್ಲಿ 4 ಬಾರಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದರೆ 5 ಬಾರಿ ಚೇಸಿಂಗ್​ ತಂಡಗಳು ಗೆಲುವು ಸಾಧಿಸಿವೆ. ಆದರೆ, 170ರ ಆಸುಪಾಸಿನಲ್ಲಿ ಗುರಿ ಇದ್ದರೆ ರನ್ ಚೇಸಿಂಗ್ ಮಾಡುವುದು ಸುಲಭವಲ್ಲ. ಹಾಗಾಗಿ ಇಂದಿನ ಪಂದ್ಯದಲ್ಲಿ ಟಾಸ್​ ಕೂಡ ನಿರ್ಣಾಯಕವಾಗಿದೆ.

ಪಂದ್ಯ ಇಲ್ಲಿ ನೋಡಿ: ಇಂದು ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಸ್ಪೋರ್ಟ್ಸ್ 18 ಮತ್ತು ಜಿಯೋಸಿನಿಮಾ ಹೊರತಾಗಿ, ಈ ಪಂದ್ಯ ಡಿಡಿ ಸ್ಪೋರ್ಟ್ಸ್‌ನಲ್ಲೂ ನೆರಪ್ರಸಾರವಾಗಲಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಹೆಸರಲ್ಲಿದ್ದ ದೊಡ್ಡ ದಾಖಲೆ ಮುರಿದ ಪಾಕಿಸ್ತಾನ: ಇದೀಗ ಈ ರೆಕಾರ್ಡ್​ ಬರೆದ ಏಷ್ಯಾದ ಮೊದಲ ತಂಡ ಪಾಕ್​!

Last Updated : Nov 10, 2024, 12:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.