ETV Bharat / state

ಕಳ್ಳತನ ಆರೋಪದಡಿ ಠಾಣೆಗೆ ಕರೆತಂದು ದೌರ್ಜನ್ಯ ಆರೋಪ : ಪೊಲೀಸರ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು

ಪ್ರಕಾಶ್ ಕಳ್ಳತನ ಪ್ರಕರಣ ಒಪ್ಪಿಕೊಳ್ಳದಿದ್ದಾಗ ಆತನ ಕೈ-ಕಾಲು ಕಟ್ಟಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಠಾಣೆಗೆ ಹೋದ ಪ್ರಕಾಶ್ ಅವರ ಪತ್ನಿ, ಮಕ್ಕಳನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಅಂತಲೂ ಆರೋಪಿಸಲಾಗಿದೆ..

author img

By

Published : Dec 15, 2021, 2:53 PM IST

allegedly-torturing-a-man-in-cell
ಕಳ್ಳತನ ಆರೋಪದಡಿ ಠಾಣೆಗೆ ಕರೆತಂದು ದೌರ್ಜನ್ಯ ಆರೋಪ

ದೇವನಹಳ್ಳಿ(ಬೆಂ.ಗ್ರಾ) : ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆಂದು ಠಾಣೆಗೆ ಕರೆದುಕೊಂಡು ಹೋದ ಪೊಲೀಸರು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಳ್ಳುವಂತೆ ಬಲವಂತ ಮಾಡಿದ್ದಾರೆ. ಒಪ್ಪಿಕೊಳ್ಳದಿದ್ದಾಗ ಕೈ-ಕಾಲು ಕಟ್ಟಿ ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಪೊಲೀಸರ ವಿರುದ್ಧ ಕೇಳಿ ಬಂದಿದೆ.

ದೇವನಹಳ್ಳಿ ತಾಲೂಕು ಧರ್ಮಪುರ ಗ್ರಾಮದ ನಿವಾಸಿ ಪ್ರಕಾಶ್ (39) ಈ ಆರೋಪ ಮಾಡುತ್ತಿದ್ದಾರೆ. ವಿಜಯಪುರ ಪೊಲೀಸರು ದೌರ್ಜನ್ಯ ಎಸಗಿರುವುದಾಗಿ ಅವರು ಆಪಾದಿಸಿದ್ದಾರೆ.

A Copy of case registered against police
ಪೊಲೀಸರ ವಿರುದ್ಧ ದಾಖಲಿಸಲಾದ ದೂರಿನ ಪ್ರತಿ

ಡಿಸೆಂಬರ್ 11ರ ರಾತ್ರಿ 7 ಗಂಟೆಯ ಸಮಯದಲ್ಲಿ ವಿಜಯಪುರ ಪೊಲೀಸರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ್​ನನ್ನು ಕರೆದುಕೊಂಡು ಹೋಗಿದ್ದಾರೆ. ಕಳ್ಳತನ ಪ್ರಕರಣವನ್ನ ಒಪ್ಪಿಕೊಳ್ಳುವಂತೆ ಠಾಣೆಯ ಸಬ್​​ಇನ್ಸ್​ಪೆಕ್ಟರ್​​​ ನಂದೀಶ್ ಮತ್ತು ಪೊಲೀಸ್ ಸಿಬ್ಬಂದಿ ಬಲವಂತ ಮಾಡಿದ್ದಾರೆ.

ಪ್ರಕಾಶ್ ಕಳ್ಳತನ ಪ್ರಕರಣ ಒಪ್ಪಿಕೊಳ್ಳದಿದ್ದಾಗ ಆತನ ಕೈ-ಕಾಲು ಕಟ್ಟಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಠಾಣೆಗೆ ಹೋದ ಪ್ರಕಾಶ್ ಅವರ ಪತ್ನಿ, ಮಕ್ಕಳನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಅಂತಲೂ ಆರೋಪಿಸಲಾಗಿದೆ.

ಠಾಣೆಯಿಂದ ಬಿಟ್ಟು ಕಳಿಸುವಾಗ ಹೊಡೆದಿರುವ ವಿಷಯ ಯಾರಿಗಾದರು ಹೇಳಿದರೆ ಜೀವನ ಪರ್ಯಂತ ಜೈಲಿನಲ್ಲಿ ಕೊಳೆಯುವಂತೆ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪ್ರಕಾಶ್​ ನೋವು ತೋಡಿಕೊಂಡಿದ್ದಾರೆ. ವಿಜಯಪುರ ಪೊಲೀಸರ ದೌರ್ಜನ್ಯದ ವಿರುದ್ಧ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಹ ನೀಡಲಾಗಿದೆ.

ಇದನ್ನೂ ಓದಿ: Bus fell in river: ಸೇತುವೆಯಿಂದ ನದಿಗೆ ಉರುಳಿದ ಆರ್​​ಟಿಸಿ ಬಸ್ : 8 ಮಂದಿ ಜಲಸಮಾಧಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.