ETV Bharat / state

ಆಟ ಆಡುವಾಗ ಆಯತಪ್ಪಿ ಕೆರೆಯಲ್ಲಿ ಬಿದ್ದು ಮಗು ಸಾವು - ಕುಡಿದು ಶೌಚಾಲಯದಲ್ಲಿ ಬಿದ್ದು ವ್ಯಕ್ತಿ ಸಾವು

ಅಜ್ಜಿಮನೆಗೆಂದು ಬಾಲಕ ಮಾಗಡಿ ರಸ್ತೆಯ ಅಗ್ರಹಾರದಿಂದ ನಾಗನಾಥಪುರಕ್ಕೆ ಬಂದಿದ್ದನು.

Child died after falling into lake while playing
ಆಟ ಆಡುವಾಗ ಆಯತಪ್ಪಿ ಕೆರೆಯಲ್ಲಿ ಬಿದ್ದು ಮಗು ಸಾವು
author img

By

Published : May 15, 2023, 6:20 PM IST

ಆನೇಕಲ್: ಆಟ ಆಡುವಾಗ ಆಯತಪ್ಪಿ ಮಗು ಕೆರೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಘಟ್ಟಹಳ್ಳಿ ಬಳಿ ನಡೆದಿದೆ. ಶಕ್ತಿ (4) ಕೆರೆಯಲ್ಲಿ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿರುವ ಮಗು. ಮಾಗಡಿ ರಸ್ತೆಯ ಅಗ್ರಹಾರದ ಮೂಲದವರ ಮಗು ಇದಾಗಿದ್ದು, ಪರಪ್ಪನ ಅಗ್ರಹಾರ ಸಮೀಪದ ನಾಗನಾಥಪುರಕ್ಕೆ ಅಜ್ಜಿ ಮನೆಗೆ ಬಾಲಕ ಬಂದಿದ್ದನು. ನಿನ್ನೆ ಸಂಜೆ ಮಗು ಕೆರೆಯಲ್ಲಿ ಆಯತಪ್ಪಿ ಬಿದ್ದು ಸಾವನ್ನಪ್ಪಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿ ಕೊನೆಗೂ ಮಗುವಿನ ಮೃತದೇಹ ಹೊರ ತೆಗೆದಿದ್ದಾರೆ. ಸ್ಥಳದಲ್ಲಿ ಪೋಷಕರ ಆಕ್ರಂದನ‌ ಮುಗಿಲು ಮುಟ್ಟಿದೆ. ಮೃತದೇಹವನ್ನು ಪೋಷಕರಿಗೆ ಅಗ್ನಿಶಾಮಕ ಸಿಬ್ಬಂದಿ ಒಪ್ಪಿಸಿದ್ದಾರೆ. ಮಗುವಿನ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಹೆಬ್ಬಗೊಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಡಿದು ಶೌಚಾಲಯದಲ್ಲಿ ಬಿದ್ದು ವ್ಯಕ್ತಿ ಸಾವು: ಆನೇಕಲ್ ಅತ್ತಿಬೆಲೆಯ ಮಂಚನಹಳ್ಳಿ ರಸ್ತೆಯ ಪ್ರಕಾಶ್ ರೆಡ್ಡಿ ಬಿಲ್ಡಿಂಗ್ ಬಾಡಿಗೆ ಮನೆಯಲ್ಲಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಶೌಚಾಲಯದಲ್ಲಿ ಬಿದ್ದು ಸಾವನ್ನಪ್ಪಿರುವ ತಡವಾಗಿ ಬೆಳಕಿಗೆ ಬಂದಿದೆ. ಮೂಲತಃ ಹೊಸದುರ್ಗದ 40 ವರ್ಷದ ಮಂಜುನಾಥ್ ಸಾವನ್ನಪ್ಪಿದವರು. ಕಂಬಿ ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದ ಮಂಜುನಾಥ್​ ತನ್ನ ಹೆಂಡತಿ ಮಂಜುಳಾ ಮತ ಚಲಾಯಿಸಲು ಊರಿಗೆ ಹೋದ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿ ಶೌಚಾಲಯದಲ್ಲಿ ಜಾರಿ ಬಿದ್ದು ಅಸುನೀಗಿದ್ದಾನೆ ಎಂದು ಅತ್ತಿಬೆಲೆ ಪೊಲೀಸರ ಮೇಲ್ನೋಟದ ತನಿಖೆಯಲ್ಲಿ ತಿಳಿದು ಬಂದಿದೆ.

ಮನೆಯಲ್ಲಿ ಯಾರು ಇಲ್ಲದೇ ಇದ್ದುದ್ದರಿಂದ ಯಾರಿಗೂ ಸಾವಿನ ಕುರಿತು ಗೊತ್ತಾಗದೆ ನಿನ್ನೆ ಬಾಗಿಲು ತೆರೆಯದೆ ಇದ್ದುದರಿಂದ ವಿಷಯ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ಮಗುವಿನ ಶವ ಬ್ಯಾಗ್‌ನಲ್ಲಿಟ್ಟುಕೊಂಡು ಸಾಗಿದ ತಂದೆ: ಹೀಗೊಂದು ಮನಕಲುಕುವ ಘಟನೆ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.