ETV Bharat / state

ಇನ್ಮುಂದೆ ವಾರಕ್ಕೆ ಮೂರು ಸಲ ಬೆಂಗಳೂರು-ಟೋಕಿಯೊ ನೇರ ವಿಮಾನಸೇವೆ - ಈಟಿವಿ ಭಾರತ ಕನ್ನಡ

ಬೆಂಗಳೂರು ಹಾಗೂ ಟೋಕಿಯೊ ನಡುವಿನ ವಿಮಾನಸೇವೆ ಇನ್ನಷ್ಟು ವಿಸ್ತರಿಸಲಾಗಿದೆ. ಈ ವಿಮಾನಯಾನ ಸೇವೆಗೆ JAL ಬೋಯಿಂಗ್ 787-8 ವಿಮಾನ ಬಳಸಲಾಗುತ್ತಿದೆ.

bengaluru-tokyo-flight-service-for-three-times-a-week
ಇನ್ಮುಂದೆ ವಾರಕ್ಕೆ ಮೂರು ಸಲ ಬೆಂಗಳೂರು-ಟೋಕಿಯೊ ನೇರ ವಿಮಾನಸೇವೆ
author img

By

Published : Aug 6, 2022, 8:08 PM IST

ದೇವನಹಳ್ಳಿ: ದಕ್ಷಿಣ ಭಾರತದಿಂದ ಜಪಾನ್​ಗೆ ನೇರ ಸಂಪರ್ಕ ಒದಗಿಸುವ ಏಕೈಕ ನಿಲ್ದಾಣವೆಂದರೆ ಕೆಂಪೇಗೌಡ ವಿಮಾನ ನಿಲ್ದಾಣ (ಕೆಐಎಎಲ್) ಆಗಿದೆ. ಈ ಹಿಂದೆ ಬೆಂಗಳೂರು-ಟೋಕಿಯೊ ನಡುವೆ ವಾರಕ್ಕೆ ಎರಡು ಸಲ ಇದ್ದ ವಿಮಾನಸೇವೆಯನ್ನು ಇದೀಗ ಮೂರಕ್ಕೆ ಹೆಚ್ಚಿಸಲಾಗಿದೆ.

ಜಪಾನ್ ಏರ್​​ಲೈನ್ಸ್ (JAL) ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಪಾನ್​​ನ ಟೋಕಿಯೊ (ನರಿಟಾ) ಗೆ ತಡೆರಹಿತ ವಿಮಾನ ಸೇವೆಯನ್ನ ಆರಂಭಿಸಿದೆ. ಈ ಹಿಂದೆ ಇದ್ದ ವಾರಕ್ಕೆ ಎರಡು ಸುತ್ತಿನ ಟ್ರಿಪ್​ಗಳನ್ನ ಮೂರಕ್ಕೆ ಹೆಚ್ಚಿಗೆ ಮಾಡಲಾಗಿದೆ. ಇದಕ್ಕೆ ಕೆಐಎಎಲ್​ನಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಚಾಲನೆ ನೀಡಿದರು.

bengaluru-tokyo-flight-service-for-three-times-a-week
ಸಚಿವ ಮುರುಗೇಶ್ ನಿರಾಣಿ ಚಾಲನೆ

2020ರಲ್ಲಿ ಬೆಂಗಳೂರಿನಿಂದ ಜಪಾನ್​​ಗೆ ತಡೆರಹಿತ ವಿಮಾನ ಸೇವೆ ಪ್ರಾರಂಭವಾಗಿದೆ. ಆದರೆ ಬಳಿಕ ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸೇವೆ ರದ್ದಾಗಿತ್ತು. ವೈರಸ್​​ ನಿಯಂತ್ರಣಕ್ಕೆ ಬಂದ ನಂತರ ಮತ್ತೆ ಸೇವೆ ಆರಂಭವಾಗಿದೆ. ಬೆಂಗಳೂರು ಮತ್ತು ಟೋಕಿಯೊ ನಡುವಿನ ವಿಮಾನಯಾನ ಸೇವೆಗೆ JAL ಬೋಯಿಂಗ್ 787-8 ವಿಮಾನ ಬಳಸಲಾಗುತ್ತಿದೆ. ಇದರಲ್ಲಿ 30 ಬ್ಯುಸಿನೆಸ್ ಕ್ಲಾಸ್, 156 ಎಕಾನಮಿ ಕ್ಲಾಸ್ ಸೀಟ್​​ಗಳಿವೆ.

ಇದನ್ನೂ ಓದಿ: ಸೇನಾಪಡೆಗೂ ಹೈಸ್ಪೀಡ್​ ಡೇಟಾ: ಗಡಿಯುದ್ದಕ್ಕೂ ಬರಲಿದೆ 5G ನೆಟ್ವರ್ಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.