ETV Bharat / state

ಐತಿಹಾಸಿಕ ತಾಣಗಳ ಬಗ್ಗೆ ಜಾಗೃತಿ ಮೂಡಿಸಬೇಕು: ಸಚಿವ ಸಿ.ಟಿ.ರವಿ - ಬೆಂಗಳೂರು ಗ್ರಾಮಾಂತರ ಸುದ್ದಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಸ್ಥೂಲಭದ್ರ ದೇವಸ್ಥಾನದ ಶಾಲಾ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಶಾಲಾ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿದ ಸಚಿವ ಸಿ.ಟಿ.ರವಿ
author img

By

Published : Oct 6, 2019, 3:06 PM IST

Updated : Oct 6, 2019, 8:02 PM IST

ಬೆಂಗಳೂರು: ಐತಿಹಾಸಿಕ ತಾಣಗಳು ಅನೈತಿಕ ಚಟುವಟಿಕೆಗಳ ಗೂಡಾಗುತ್ತಿವೆ. ಅವುಗಳ ಬಗ್ಗೆ ಜಾಗೃತಿ ಮೂಡಿಸುವುದರಿಂದ ರಕ್ಷಿಸಲು ಸಾಧ್ಯ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.

ಸಚಿವ ಸಿ.ಟಿ.ರವಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಸ್ಥೂಲಭದ್ರ ದೇವಸ್ಥಾನದ ಶಾಲಾ ಕಟ್ಟಡದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಸ್ಕಾರ ಪ್ರಧಾನ ಶಿಕ್ಷಣ ನೀಡುವ ನಿಟ್ಟಿನಲ್ಲಿ ಈ ಶಾಲೆ ಆರಂಭವಾಗಲಿದೆ. ಪ್ರವಾಸ ಸ್ಥಳಗಳ ಅಧ್ಯಯನ ನಡೆಸಿ ಉತ್ತಮ ಪಡಿಸುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.

ಸಾಮಾನ್ಯ ಜನರಲ್ಲಿ ಐತಿಹಾಸಿಕ ಸ್ಥಳಗಳ ಬಗ್ಗೆ ಅಸಡ್ಡೆ ಇರುವುದರಿಂದ‌ ಟಿಪ್ಪು ಕೋಟೆಯನ್ನು ಅನೈತಿಕ ತಾಣ ಮಾಡಲಾಗಿದೆ. ಅವುಗಳು ಸಾರ್ವಜನಿಕರ ಸ್ವತ್ತು ಎಂದು ಮಾರ್ಪಡಿಸಿದರೆ ಅಭಿವೃದ್ಧಿ ಹೊಂದುತ್ತವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ಥಳೀಯ ಶಾಸಕರ ಕಡೆಗಣನೆ: ಸ್ಥೂಲಭದ್ರ ದೇವಸ್ಥಾನದ ಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರಿಗೆ ಆಹ್ವಾನ ನೀಡದೆ ಅವಮಾನ ಮಾಡಲಾಗಿದೆ. ಕೇವಲ ಸಚಿವರಿಗೆ ಆಹ್ವಾನ ನೀಡಿರುವ ಜೈನರು, ಸ್ಥಳೀಯ ಶಾಸಕರನ್ನು ನಿರ್ಲಕ್ಷಿಸಿದ್ದಾರೆ ಎನ್ನಲಾಗುತ್ತಿದೆ.

ಈ ಸಂಬಂಧ ಈಟಿವಿ ಭಾರತಗೆ ಪ್ರತಿಕ್ರಿಯೆ ನೀಡಿರುವ ಶಾಸಕರು, ನನಗೆ ಯಾರೂ ಆಹ್ವಾನ ನೀಡಿಲ್ಲ. ಸರ್ಕಾರಿ ಜಮೀನನ್ನು ಅವರ ಹೆಸರಿಗೆ ಮಾಡಿಸಿಕೊಳ್ಳಲು ನನ್ನ ಬಳಿ ಸಹಿ ಮಾಡಿಸಿಕೊಳ್ಳಲು ಬಂದಿದ್ದರು. ಆದರೆ, ನಾನು ಸಹಿ ಮಾಡಿರಲಿಲ್ಲ. ಹೀಗಾಗಿ ನನ್ನನ್ನು ಆಹ್ವಾನಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಂದನ್​ ಶರ್ಮಾ ಅವರು ವೇದಿಕೆಯೊಂದರ ಮೇಲೆ ಪ್ರಪೋಸ್​ ಮಾಡಿರುವ ಬಗ್ಗೆ ಪ್ರಶ್ನಿಸುತ್ತಿದ್ದಂತೆ ನನಗೇನು ಗೊತ್ತಿಲ್ಲ ಎಂದು ಉತ್ತರಿಸಿ ತೆರಳಿದರು.

Intro:KN_BNG_01_06_c.t Ravi_Ambarish_7203301
Slug: ಚಂದನ್ ಶೆಟ್ಟಿ ಎಂಗೇಜ್ಮೆಂಟ್ ಮಾಡಿಕೊಂಡಿರುವ ವಿಷಯದ ಬಗ್ಗೆ ಮಾಹಿತಿ ಇಲ್ಲ: ಸಚಿವ ಸಿಟಿ ರವಿ

ಬೆಂಗಳೂರು: ಚಂದನ್ ಶೆಟ್ಟಿ ಎಂಗೇಜ್ಮೆಂಟ್ ಮಾಡಿಕೊಂಡಿರುವ ಮಾಹಿತಿಯೇ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ರು..

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಸ್ಥೂಲಭದ್ರ ದೇವಸ್ಥಾನದ ಶಾಲಾ ಕಟ್ಟಡದ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಂದನ್ ಶೆಟ್ಟಿ, ನಿವೇದಿತಾ ಮೈಸೂರು ದಸರಾಗೆ ಅಪಮಾನ ಮಾಡಿದ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದರು..

ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಲವಾರು ಐತಿಹಾಸಿಕ ಸ್ಥಳಗಳಿದ್ದು, ಅವುಗಳ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮ ಇಲಾಖೆ ಹಿಂದೆ ಇದೆ ಎಂದು ಕೇಳಿದಾಗ, ನಾನು ಸಚಿವನಾಗಿ ಒಂದು ತಿಂಗಳು ಒಂಬತ್ತು ದಿನ ಮಾತ್ರ ಆಗಿದೆ.. ಅದರ ಕುರಿತು ಪರಿಶೀಲನೆ ನಡಸಲು ಸುಮಾರು ಎರಡು ತಿಂಗಳು ಬೇಕಾಗುತ್ತದೆ.. ಆ ಬಳಿಕ ಪ್ರವಾಸ ಸ್ಥಳಗಳ ಅದ್ಯಯನ ನಡೆಸಿ, ಅದರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು.. ನಮ್ಮ ರಾಜ್ಯದಲ್ಲಿ ಹಲವಾರು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ್ದು,. ದೇವಸ್ಥಾನಗಳು, ಜೈನ್ ಮಂದಿರಗಳು, ಸಾಹಸಮಯ, ವೆಸ್ಟ್ರಾನ್ ಟೂರಿಸಂ ಹೀಗೆ ಹಲವು ಬಗೆಯ ಟೂರಿಸಂಗಳನ್ನು ಮಾಡಬಹುದು ಎಂದರು..

ಇನ್ನು ದೇವನಹಳ್ಳಿ ಐತಿಹಾಸಿಕ ಟಿಪ್ಪು ಕೋಟೆಯಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದರ ಕುರಿತು, ಕೇಳಿದಾಗ, ಅದನ್ನು ಎಲ್ಲಾ ಸಾರ್ವಜನಿಕರು ತಿಳಿದುಕೊಳ್ಳಬೇಕು.. ಐತಿಹಾಸಿಕ ಸ್ಥಳಗಳನ್ನು ರಕ್ಷಣೆ ಮಾಡುವ ಕರ್ತವ್ಯ ಎಲ್ಲರದ್ದು.. ಸಾಮಾನ್ಯ ಜನರಲ್ಲಿ ಅಸಡ್ಡೆ ಇರುವುದರಿಂದ‌ ಟಿಪ್ಪು ಕೋಟೆಯನ್ನು ಅನೈತಿಕ ಸ್ಥಾನ ಮಾಡುತ್ತಿದ್ದಾರೆ.. ಎಲ್ಲವನ್ನೂ ಸರ್ಕಾರ ಮಾಡಲು ಸಾಧ್ಯವಿಲ್ಲ. ಸರ್ಕಾರದ ಜೊತೆಯಲ್ಲಿ ಜನಸಾಮಾನ್ಯರು ಸೇರಿಕೊಂಡಾಗ ಮಾತ್ರ ಅಭಿವೃದ್ಧಿ ಮಾಡಲು ಸಾದ್ಯ ಎಂದರು..

ಸ್ಥಳೀಯ ಶಾಸಕರ ಕಡೆಗಣನೆ

ಇನ್ನು ಸ್ಥೂಲಭದ್ರ ದೇವಸ್ಥಾನದ ಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರಿಗೆ ಆಹ್ವಾನ ನೀಡದೆ ಅವಮಾನ ಮಾಡಲಾಗಿದೆ.. ಕೇವಲ ಸಚಿವರಿಗೆ ಆಹ್ವಾನ ನೀಡಿರುವ ಜೈನರು, ಸ್ಥಳೀಯ ಶಾಸಕರನ್ನು ಮಾತಿಗೋಸ್ಕರವಾದ್ರೂ ಕರೆದಿಲ್ಲ ಎನ್ನಲಾಗುತ್ತಿದೆ.. ಇದರ ಸಂಬಂಧ ಈಟಿವಿ ಭಾರತ ಗೆ ಪ್ರತಿಕ್ರಿಯೆ ನೀಡಿರುವ ಶಾಸಕರು, ನನಗೆ ಯಾರೂ ಆಹ್ವಾನ ನೀಡಿಲ್ಲ.. ಸರ್ಕಾರಿ ಜಮೀನನ್ನು ಅವರ ಹೆಸರಿಗೆ ಮಾಡಿಸಿಕೊಳ್ಳಲು ನನ್ನ ಬಳಿ ಸಹಿ ಮಾಡಿಸಿಕೊಳ್ಳಲು ಬಂದಿದ್ದರು.. ಆದರೆ ನಾನು ಸಹಿ ಮಾಡಿರಲಿಲ್ಲ.. ಈಗಾಗಿ ನನ್ನನ್ನು ಆಹ್ವಾನಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು..
Body:NoConclusion:No
Last Updated : Oct 6, 2019, 8:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.