ETV Bharat / state

ಡೀಸೆಲ್ ಕದಿಯಲು ಬಂದು ಸಿಕ್ಕಿಬಿದ್ದ ಕಳ್ಳ.. ಚಾಲಕರಿಂದ ಹಲ್ಲೆಗೊಳಗಾಗಿ ಸಾವು - ಡೀಸೆಲ್ ಕದಿಯಲು ಬಂದು ಸಿಕ್ಕಿಬಿದ್ದ ಕಳ್ಳ

ಲಾರಿಯಿಂದ ಡೀಸೆಲ್​ ಕದಿಯಲು ಬಂದು ಸಿಕ್ಕಿಬಿದ್ದ ಕಳ್ಳನಿಗೆ ಚಾಲಕರು ಥಳಿಸಿದ ಪರಿಣಾಮ ಆರೋಪಿ ಮೃತಪಟ್ಟಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ

author img

By

Published : Jul 26, 2023, 8:27 PM IST

Updated : Jul 26, 2023, 8:34 PM IST

ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ

ಹೊಸಕೋಟೆ : ಟ್ರಕ್ ಟರ್ಮಿನಲ್​ನಲ್ಲಿ ನಿಂತಿದ್ದ ಲಾರಿಗಳಿಂದ ಡೀಸೆಲ್ ಕದಿಯಲು ನಾಲ್ಕು ಜನರ ಕಳ್ಳರ ಗ್ಯಾಂಗ್ ಬಂದಿದ್ದು, ಕದಿಯುವ ಯತ್ನದಲ್ಲಿ ಕಳ್ಳನೊಬ್ಬ ಚಾಲಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ, ಲಾರಿ ಚಾಲಕರಿಂದ ಹಲ್ಲೆಗೊಳಗಾಗಿ ಅಸ್ವಸ್ಥನಾಗಿದ್ದ ಕಳ್ಳ ಸಾವನ್ನಪ್ಪಿದ್ದಾನೆ.

ಹೊಸಕೋಟೆ ಹೊರವಲಯದ ಮಾಲೂರು ರಸ್ತೆಯ ಟ್ರಕ್ ಟರ್ಮಿನಲ್​ನಲ್ಲಿ ಇಂದು ಮುಂಜಾನೆ ಘಟನೆ ನಡೆದಿದ್ದು, ಘಟನೆಯಲ್ಲಿ ಲಾರಿ ಚಾಲಕರ ಹಲ್ಲೆಯಿಂದ ಗಾಯಗೊಂಡಿದ್ದ ಡೀಸೆಲ್​ ಕಳ್ಳ ಅಫ್ಜಲ್ ಸಾವನ್ನಪ್ಪಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹೊರ ವಲಯದ ಮಾಲೂರು ರಸ್ತೆಯಲ್ಲಿ ನಿತ್ಯ ದೇವನಗುಂದಿಯ ಇಂಧನ ಹಾಗೂ ನೆರೆಯ ತಮಿಳುನಾಡಿನಿಂದ ಸರಕು ಸಾಮಗ್ರಿಗಳನ್ನ ಸಾಗಾಟ ಮಾಡಲು ನೂರಾರು ಲಾರಿಗಳು ಬರುತ್ತವೆ.

ಹೀಗೆ ದೂರದ ಊರುಗಳಿಂದ ಬಂದ ಲಾರಿ ಚಾಲಕರು ಇದೇ ಶೆಡ್​ ಬಳಿ ಲಾರಿಗಳನ್ನ ನಿಲ್ಲಿಸಿ ಕೆಲ ಕಾಲ ವಿಶ್ರಾಂತಿ ಪಡೆದು ಹೋಗ್ತಿದ್ದರು. ಇದನೆಲ್ಲ ಗಮನಿಸಿದ ನಾಲ್ವರು ಕಳ್ಳರು ಕಳೆದ ರಾತ್ರಿ ನಿಂತಿದ್ದ ಲಾರಿಗಳನ್ನು ಗಮನಿಸಿದ್ದಾರೆ. ಅದರಂತೆ ಇಂದು ಮುಂಜಾನೆ ಡೀಸೆಲ್ ಕದಿಯಲು ಬಂದಿದ್ದು, ಲಾರಿಯ ಟ್ಯಾಂಕ್​ನಿಂದ ಡೀಸೆಲ್ ಕಳ್ಳತನ ಮಾಡುವ ವೇಳೆ ಚಾಲಕರು ಇವರನ್ನು ಹಿಡಿದಿದ್ದಾರೆ.

ಕೈಗೆ ಸಿಕ್ಕ ಕಳ್ಳನ ಮೇಲೆ ಚಾಲಕರಿಂದ ಹಲ್ಲೆ: ಡೀಸೆಲ್​ ಕದಿಯುವ ವೇಳೆ ಲಾರಿ ಚಾಲಕನೊಬ್ಬನಿಗೆ ಎಚ್ಚರವಾಗಿ ಹಾರ್ನ್ ಮಾಡಿ ಎಲ್ಲ ಚಾಲಕರನ್ನ ಎಬ್ಬಿಸಿದ್ದಾನೆ. ಹಾರ್ನ್ ಶಬ್ದ ಕೇಳಿದ ಕಳ್ಳರ ಗ್ಯಾಂಗ್ ಅಲ್ಲಿಂದ ಪರಾರಿಯಾಗಲು ಯತ್ನಿಸಿದೆ. ಈ ವೇಳೆ, ಅಫ್ಜಲ್ ಎಂಬ ವ್ಯಕ್ತಿ ಚಾಲಕರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಕೈಗೆ ಸಿಕ್ಕಕಳ್ಳನ ಮೇಲೆ ಚಾಲಕರು ಹಲ್ಲೆ ನಡೆಸಿದ್ದಾರೆ.

ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ: ತೀವ್ರವಾಗಿ ಹಲ್ಲೆಗೊಳಗಾಗಿದ್ದ ಅಫ್ಜಲ್​ನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಹಲ್ಲೆಯಿಂದ ಅಸ್ವಸ್ಥಗೊಂಡಿದ್ದ ಆತ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಚಾಲಕರನ್ನ ಬಂಧಿಸಲಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲ ಚಾಲಕರನ್ನ ಸಹ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಓರ್ವ ಬಿದ್ದು ಸತ್ತ, ಇನ್ನಿಬ್ಬರು ಪರಾರಿ : ಮನೆಗೆ ಕನ್ನ ಹಾಕಲು ಬಂದಿದ್ದ ಕಳ್ಳರ ಗುಂಪೊಂದು ಮನೆ‌ ಮಾಲೀಕ ಎಚ್ಚರಗೊಂಡು ಕೂಗಿದ್ದರಿಂದ ಮನೆ ಮೇಲಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ, ಮೂವರು ಕಳ್ಳರ ಪೈಕಿ ಓರ್ವ ಸಾವನಪ್ಪಿ, ಇಬ್ಬರು ಪರಾರಿಯಾಗಿದ್ದ ಘಟನೆ ( ಮೇ 25-2022) ದಾವಣಗೆರೆಯ ಕೆಟಿಜೆ ನಗರದಲ್ಲಿ ನಡೆದಿತ್ತು. ಸಾವನಪ್ಪಿರುವ ಕಳ್ಳನನ್ನು ದಾವಣಗೆರೆಯ ನಿವಾಸಿ ಪರಶುರಾಮ್ ಎಂದು ಗುರುತಿಸಲಾಗಿತ್ತು.

ಅಂದು ಬೆಳಗಿನ ಜಾವ 3 ಗಂಟೆಗೆ ಕೆಟಿಜೆನಗರದ ಮನೆಯೊಂದಕ್ಕೆ ಕಳ್ಳತನಕ್ಕಾಗಿ ಬಂದಿದ್ದ ಮೂವರು ಕಳ್ಳತನ ಮಾಡಲು ಯತ್ನಿಸಿದ್ದರು. ಈ ವೇಳೆ ಮನೆ ಮಾಲೀಕ ಎಚ್ಚರಗೊಂಡಿದ್ದು, ಭಯಭೀತರಾದ ಮೂವರು ಕಳ್ಳರು ಪರಾರಿಯಾಗಲು ಮನೆಯ ಮಹಡಿ ಮೇಲಿಂದ ಜಿಗಿದಿದ್ದರು.

ಇದನ್ನೂ ಓದಿ: ಕಳ್ಳತನಕ್ಕೆ ಬಂದ 3 ಖದೀಮರು.. ಮನೆ ಮಾಲೀಕ ಎಚ್ಚರವಾಗ್ತಿದ್ದಂತೆ ಓರ್ವ ಬಿದ್ದು ಸತ್ತ, ಇನ್ನಿಬ್ಬರು ಪರಾರಿ..

Last Updated : Jul 26, 2023, 8:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.