ETV Bharat / state

ಮೂರಂತಸ್ತಿನ ನಿರ್ಮಾಣ ಹಂತದ ಕಟ್ಟಡ ಮೇಲಿಂದ ಇಟ್ಟಿಗೆ ಬಿದ್ದು ಬಾಲಕಿ ಸಾವು - ಮಕ್ಕಳಿಗೆ ಆಟ ಆಡಿಸುವಾಗ ಬಿದ್ದ ಇಟ್ಟಿಗೆ

ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಇಟ್ಟಿಗೆ ಬಿದ್ದು 15 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ನೆಲಮಂಗಲ ತಾಲೂಕಿನಲ್ಲಿ ಈ ಘಟನೆ ನಡೆದಿದೆ.

ಇಟ್ಟಿಗೆ ಬಿದ್ದು ಬಾಲಕಿ ಸಾವು
ಇಟ್ಟಿಗೆ ಬಿದ್ದು ಬಾಲಕಿ ಸಾವು
author img

By

Published : Jan 13, 2023, 10:32 AM IST

ನೆಲಮಂಗಲ (ಬೆಂಗಳೂರು ಗ್ರಾ.): ಮೂರಂತಸ್ತಿನ ಕಟ್ಟಡದ ಮೇಲಿಂದ ಹಾಲೋಬ್ಲಾಕ್ ಇಟ್ಟಿಗೆ ಬಿದ್ದು 15 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಸಮೀಪದ ಭಾರತೀಪುರ ಗ್ರಾಮದಲ್ಲಿ ನಡೆದಿದೆ. ಯಾದಗಿರಿ ಮೂಲದ ಉಷಾ (15) ಮೃತಪಟ್ಟ ಬಾಲಕಿ. ನಾಗರಾಜ ಎಂಬುವವರ ಮನೆ ಕಟ್ಟಡ ನಿರ್ಮಾಣದ ವೇಳೆ ಘಟನೆ ಸಂಭವಿಸಿದೆ.

ಮಕ್ಕಳನ್ನು ಆಟ ಆಡಿಸುವಾಗ ಬಿತ್ತು ಇಟ್ಟಿಗೆ: ಕಾರ್ಮಿಕರು ನಿರ್ಮಾಣ ಹಂತದ ಕಟ್ಟಡಕ್ಕೆ ಕಾಂಕ್ರಿಟ್ ಹಾಕುತ್ತಿದ್ದರು. ಈ ವೇಳೆ ಅಲ್ಲೇ ಕೆಳಗೆ ಚಿಕ್ಕ ಮಕ್ಕಳಿಗೆ ಬಾಲಕಿ ಆಟ ಆಡಿಸುತ್ತಿದ್ದಳು. ಆಗ ಕಟ್ಟಡದ ಮೇಲಿಂದ ಹಾಲೋಬ್ಲಾಕ್ ಇಟ್ಟಿಗೆ ಬಿದ್ದು, ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಳು. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಕಟ್ಟಡದ ಕೆಳಗೆ ಮಕ್ಕಳಿಗೆ ಆಟ ಆಡಿಸುತ್ತಿದ್ದ ಬಾಲಕಿ ಮೇಲೆ ಇಟ್ಟಿಗೆ ಬಿದ್ದಿತ್ತು. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ಈ ಬಗ್ಗೆ ದಾಬಸ್​ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಬಾಲಕಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದ್ರೆ ನಮ್ಮ ಸಹೋದರಿಯ ಮಕ್ಕಳಿಗೆ ಆಕೆ ಆಟ ಆಡಿಸುತ್ತಿದ್ದಳು ಎಂದು ಗುತ್ತಿಗೆದಾರ ನರಸಿಂಹರಾಜು ಮಾಹಿತಿ ನೀಡಿದರು.

ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ದಾಬಸ್​ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆ ಗುತ್ತಿಗೆದಾರನಾಗಿ ನರಸಿಂಹರಾಜು ಭಾರತೀಪುರ ಗ್ರಾಮದಲ್ಲಿ ತನ್ನ ತಂಗಿಯ ಮನೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದರು ಎಂದು ತಿಳಿದುಬಂದಿದೆ. ಬಾಲಕಿ ಪೋಷಕರು ಕಟ್ಟಡ ನಿರ್ಮಾಣದ ಕೆಲಸ ಮಾಡುತ್ತಿದ್ದರಿಂದ ಅವರ ಜೊತೆ ಆಕೆಯೂ ಬಂದಿದ್ದಳು. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ನಡೆದ ಮೆಟ್ರೋ ಪಿಲ್ಲರ್ ದುರಂತ: ಮಂಗಳವಾರವಷ್ಟೇ ಬೆಂಗಳೂರಲ್ಲಿ ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತಗೊಂಡು ತಾಯಿ ಮಗ ಮೃತಪಟ್ಟಿದ್ದರು. ಜೊತೆಗೆ ತಂದೆ ಮಗಳ ಕೂಡ ಘಟನೆಯಲ್ಲಿ ಗಾಯಗೊಂಡಿದ್ದರು. ಅಂದು ಬೆಳಗ್ಗೆ ಲೋಹಿತ್ ಕುಮಾರ್ ಅವರು ಪತ್ನಿ ತೇಜಸ್ವಿನಿ ಮತ್ತು ತಮ್ಮ ಅವಳಿ ಮಕ್ಕಳ ಜೊತೆ ಬೈಕ್​ನಲ್ಲಿ ತೆರಳುತ್ತಿದ್ದರು. ತೇಜಸ್ವಿನಿ ಅವರು ಮಾನ್ಯತಾ ಟೆಕ್ ಪಾರ್ಕ್​ನಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರನ್ನು ಬೈಕ್​ನಲ್ಲಿ ಕಚೇರಿಗೆ ಡ್ರಾಪ್​ ಮಾಡಲು ಪತಿ ತೆರಳುತ್ತಿದ್ದರು. ಹಾಗೆಯೇ ನಂತರ ತನ್ನ ಇಬ್ಬರು ಮಕ್ಕಳನ್ನು ಬೇಬಿ ಸಿಟ್ಟಿಂಗ್ ಶಾಲೆಗೆ ಬಿಡುವವರಿದ್ದರು.

ಈ ವೇಳೆ ಏಕಾಏಕಿ ಹೆಣ್ಣೂರು ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಏಕಾಏಕಿ ಇಬರ ಮೇಲೆ ಕುಸಿದು ದುರಂತ ಸಂಭವಿಸಿತ್ತು. ಘಟನೆಯಲ್ಲಿ ತಾಯಿ ಮಗ ಮೃತಪಟ್ಟಿದ್ದು, ತಂದೆ ಮಗಳು ಗಾಯಗೊಂಡಿದ್ದರು. ಮೃತರ ಪತಿ ಲೋಹಿತ್ ನೀಡಿರುವ ದೂರಿನನ್ವಯ ಗೋವಿಂದಪುರ ಠಾಣೆಯಲ್ಲಿ 8 ಜನರ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೊತೆಗೆ ಸಂಬಂಧಪಟ್ಟ ಎಂಜಿನಿಯರ್​ಗಳನ್ನು ಅಮಾನತು ಮಾಡಲಾಗಿತ್ತು.

ಪರಿಹಾರ ಘೋಷಿಸಿದ್ದ ಸಿಎಂ: ಮೆಟ್ರೋ ಪಿಲ್ಲರ್ ಕುಸಿತ ದುರಂತ ಅತ್ಯಂತ ದುರದೃಷ್ಟಕರ. ಈ ಬಗ್ಗೆ ತನಿಖೆ ಮಾಡಿಸುತ್ತೇವೆ. ಮೃತಪಟ್ಟವರಿಗೆ ಮೆಟ್ರೋ ಸಂಸ್ಥೆಯಿಂದ ಪರಿಹಾರ ಕೊಡಲಾಗುವುದು. ಸಿಎಂ ಪರಿಹಾರ ನಿಧಿನಿಂದಲೂ ತಲಾ 10 ಲಕ್ಷ ರೂ. ಕೊಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ.. ತಾಯಿ ಮಗ ಸಾವು, ಅಪ್ಪ ಮಗಳ ಸ್ಥಿತಿ ಗಂಭೀರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.