ETV Bharat / state

ದೇಶದಲ್ಲಿ ಪ್ರತಿ ನಿಮಿಷಕ್ಕೆ 84 ಸೈಬರ್ ವಂಚನೆ ಪ್ರಕರಣ ದಾಖಲು - ಸೈಬರ್ ಭದ್ರತೆ

Cyber security awareness programme: ಸೈಬರ್​ ವಂಚನೆಗೆ ಒಳಗಾಗುತ್ತಿರುವವರ ಪೈಕಿ ಹೆಚ್ಚಾಗಿ ಗ್ರಾಮೀಣ ಜನರೇ ಇದ್ದು, ಅವರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ದೊಡ್ಡಬಳ್ಳಾಪುರದಲ್ಲಿ ಸೈಬರ್ ಭದ್ರತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

Cyber security awareness programme
ಸೈಬರ್ ಭದ್ರತೆ ಜಾಗೃತಿ ಕಾರ್ಯಕ್ರಮ
author img

By ETV Bharat Karnataka Team

Published : Dec 13, 2023, 3:23 PM IST

ದೇಶದಲ್ಲಿ ಪ್ರತಿ ನಿಮಿಷಕ್ಕೆ 84 ಸೈಬರ್ ವಂಚನೆ ಪ್ರಕರಣ ದಾಖಲು

ದೊಡ್ಡಬಳ್ಳಾಪುರ: "ದೇಶದಲ್ಲಿ ಡಿಜಿಟಲ್ ಕ್ರಾಂತಿಯಾಗುತ್ತಿದೆ. ಆದರೆ, ಇನ್ನೊಂದು ಕಡೆಯಲ್ಲಿ ಸೈಬರ್ ವಂಚನೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಪ್ರಸಕ್ತ ದಾಟಾದ ಪ್ರಕಾರ ದೇಶದಲ್ಲಿ ಪ್ರತಿ ನಿಮಿಷಕ್ಕೆ 84 ಸೈಬರ್ ವಂಚನೆ ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲೂ ಹೆಚ್ಚಾಗಿ ಗ್ರಾಮೀಣ ಜನರೇ ಸೈಬರ್​ ವಂಚನೆಗೆ ಒಳಗಾಗುತ್ತಿದ್ದಾರೆ" ಎಂದು ಮೈತ್ರಿ ಸರ್ವ ಸೇವಾ ಸಮಿತಿಯ ಸಿಇಓ ಹರೀಶ್ ಮಾಹಿತಿ ನೀಡಿದ್ದಾರೆ.

ಗ್ರಾಮೀಣ ಜನತೆಯನ್ನ ಗುರಿಯಾಗಿಸಿಕೊಂಡು ಸೈಬರ್​ ಖದೀಮರ ದಾಳಿ: ಮೈತ್ರಿ ಸರ್ವ ಸೇವಾ ಸಮಿತಿ, ಐಟಿಟಿ ಮದ್ರಾಸ್ ಮತ್ತು ಎಕ್ಸಿ(NIXI) ಸಹಯೋಗದಲ್ಲಿ ದೊಡ್ಡಬಳ್ಳಾಪುರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೈಬರ್ ಭದ್ರತೆ ಕುರಿತು ಐಐಟಿ ವಿಜ್ಞಾನಿಗಳಿಂದ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮಾತನಾಡಿದ ಅವರು, "ಪ್ರತಿಯೊಬ್ಬರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಸ್ಮಾರ್ಟ್ ಪೋನ್​ಗಳನ್ನು ಬಳಕೆ ಮಾಡುತ್ತಿದ್ದಾರೆ. ಇದು ಸೈಬರ್ ವಂಚಕರ ಪಾಲಿಗೆ ರಹದಾರಿಯನ್ನೇ ಮಾಡಿಕೊಟ್ಟಿದೆ. ಸೇವೆಯ ಹೆಸರಿನಲ್ಲಿ ಫೋನ್ ಮಾಡುವ ಅವರು ಜನರ ಹಣ, ಚಿನ್ನ, ವೈಯಕ್ತಿಕ ಮಾಹಿತಿ ಮತ್ತು ಡಾಟಾವನ್ನು ಕದಿಯುತ್ತಿದ್ದಾರೆ. ಪ್ರಮುಖವಾಗಿ ಗ್ರಾಮೀಣ ಜನರೇ ಸೈಬರ್ ವಂಚನೆಗೆ ಒಳಗಾಗುತ್ತಿದ್ದು, ಅವರಿಗಾಗಿ ಸೈಬರ್ ಭದ್ರತೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ" ಎಂದು ಅವರು ತಿಳಿಸಿದರು.

ಸೈಬರ್​​ ಭದ್ರತೆ ಮತ್ತು ವಂಚನೆ ಜಾಲದ ಬಗ್ಗೆ ಬೇಕಿದೆ ಜಾಗೃತಿ: ಐಐಟಿ ಪ್ರೊಫೆಸರ್ ಮೋಹನ್ ರಾಮ್ ಮಾತನಾಡಿ, "ಇದೇ ಮೊದಲ ಬಾರಿಗೆ ಸೈಬರ್ ಭದ್ರತೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಭಾರತದ ಜನಸಂಖ್ಯೆಯಲ್ಲಿ 80 ಕೋಟಿ ಜನರು ಗ್ರಾಮೀಣ ಪ್ರದೇಶದವರು. ಗ್ರಾಮೀಣ ಜನರ ಪ್ರಮಾಣಿಕತೆ ಮತ್ತು ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಬಹಳ ಸುಲಭವಾಗಿ ಹಣ ಮತ್ತು ಮಾಹಿತಿಯನ್ನು ಕದಿಯುತ್ತಿದ್ದಾರೆ. ಸೈಬರ್ ಭದ್ರತೆಯ ಬಗ್ಗೆ ಕನಿಷ್ಠ ಸುರಕ್ಷತಾ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಎರಡು ದಿನಗಳು ನಡೆದ ಕಾರ್ಯಾಗಾರದಲ್ಲಿ ಕಲಿತ ವಿದ್ಯೆಯಿಂದ ತಮ್ಮ ಕುಟುಂಬ ಮತ್ತು ಸಮುದಾಯದ ಜನರಲ್ಲೂ ಅವರು ಜಾಗೃತಿಯನ್ನು ಮೂಡಿಸುವ ಮೂಲಕ ಸೈಬರ್ ವಂಚನೆಗಳಿಗೆ ಕಡಿವಾಣ ಹಾಕಬಹುದು" ಎಂದು ತಿಳಿಸಿದರು.

ಇದನ್ನೂ ಓದಿ: ಸೈಬರ್ ವಂಚನೆ ಪ್ರಕರಣಗಳಲ್ಲಿ ಬೆಂಗಳೂರಿಗೆ ಅಗ್ರಸ್ಥಾನ: ಕಾರಣಗಳೇನು?

ಇತ್ತೀಚಿನ ದಿನಗಳಲ್ಲಿ ಕಳ್ಳರು ಅಂತರ್ಜಾಲವನ್ನು ಬಳಸಿ ವಂಚನೆ ಹಾಗೂ ಕಳ್ಳತನ ಮಾಡುವುದನ್ನ ಜಾಸ್ತಿ ಮಾಡಿದ್ದಾರೆ. ಹಾಗಾಗಿ ಆನ್​ಲೈನ್​ ವ್ಯವಹಾರ ಹಾಗೂ ನಿಮ್ಮ ಬ್ಯಾಂಕ್​ ಖಾತೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಅತ್ಯವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಮೈತ್ರಿ ಸರ್ವ ಸೇವಾ ಸಮಿತಿ, ಐಟಿಟಿ ಮದ್ರಾಸ್ ಮತ್ತು ಎಕ್ಸಿ(NIXI) ಸಹಯೋಗದಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.