ಆನೇಕಲ್: ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಖದೀಮರನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಪರಾರಿಯಾಗಿದ್ದಾನೆ.
ತಮಿಳುನಾಡು ಮೂಲದ ಮುನಿರಾಜು ಅಲಿಯಾಸ್ ಸಿನ್ನಬ್ಬಯ್ಯ, ಹಾಗೂ ಅಸ್ಸಾಂ ಮೂಲದ ಧೀರೇನ್ ಕಲಂದ್ರಿ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 2 ಲಕ್ಷ ರೂ. ಮೌಲ್ಯದ 10 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಜಿಗಣಿ ಹಾಗೂ ನಂಜಾಪುರ ರಸ್ತೆಯ ಮೀನಾಕ್ಷಿ ರೆಸಾರ್ಟ್ ಪಕ್ಕದಲ್ಲಿರುವ ಎಸ್.ಡಿ.ಎಂ.ಎಲ್ ಮೆಡೋಸ್ ಹತ್ತಿರ ಸಿಕ್ಕಿಬಿದ್ದಿದ್ದಾರೆ. ಒಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಮುನಿರಾಜು ಹಾಗೂ ಧೀರೇನ್ ಎಂಬ ಇಬ್ಬರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಸಂಬಂಧ ಜಿಗಣಿ ಪೋಲೀಸರು ದೂರು ದಾಖಲು ಮಾಡಿಕೊಂಡಿದ್ದಾರೆ.