ETV Bharat / state

ಪುಣೆ, ಮುಂಬೈಯಿಂದ ಬಾಗಲಕೋಟೆಗೆ ಬಂದವರಿಗೆ ಕ್ವಾರಂಟೈನ್.. ಸಿಇಒ ಮಾನಕರ - ಕೊರನಾ ವೈರಸ್

ಕೊರೊನಾ ವೈರಸ್​ ತಡೆಗಟ್ಟುವ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲಾ ಪಂಚಾಯತ್​ ಶ್ರಮಿಸುತ್ತಿದೆ. ಜಿಲ್ಲೆಗೆ ಆಗಮಿಸುವ ಎಲ್ಲ ಜನರನ್ನು ಕ್ವಾರಂಟೈನ್​ ಮಾಡಲಾಗಿದೆ ಎಂದು ಜಿಪಂ ಸಿಇಒ ತಿಳಿಸಿದ್ದಾರೆ.

Quarantine
ಸಿಇಒ ಮಾನಕರ
author img

By

Published : May 8, 2020, 7:39 PM IST

ಬಾಗಲಕೋಟೆ : ಮಹಾರಾಷ್ಟ್ರದ ಪುಣೆ, ಮುಂಬಯಿದಿಂದ ಆಗಮಿಸಿದ ಕಾರ್ಮಿಕರನ್ನು ಕಡ್ಡಾಯವಾಗಿ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದ್ದಾರೆ.

ಜಿಲ್ಲಾ ಪಂಚಾಯತ್​ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪುಣೆ ಮತ್ತು ಮುಂಬಯಿ ರೀತಿಯ ನಗರಗಳಲ್ಲಿ ಹೆಚ್ಚಾಗಿ ಕೋವಿಡ್ - 19 ಪ್ರಕರಣ ಕಂಡು ಬಂದಿವೆ. ಈ ನಗರಗಳಿಂದ ಆಗಮಿಸಿದ 90 ಜನರನ್ನು ಪ್ರತ್ಯೇಕ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು. ಜಿಲ್ಲೆಯ ಎಲ್ಲ ತಾಲೂಕುಗಳನ್ನು ಸೇರಿ ಈವರೆಗೆ ಒಟ್ಟು 28,493 ಕಾರ್ಮಿಕರು ಆಗಮಿಸಿದ್ದಾರೆ. ಬಾದಾಮಿ ತಾಲೂಕಿಗೆ ಒಟ್ಟು 4,220, ಹುನಗುಂದ ತಾಲೂಕಿಗೆ 7309 ಜನರು ಆಗಮಿಸಿದ್ದಾರೆ. ಅವರನ್ನು ಗ್ರಾಮ ಪಂಚಾಯತ್‌ನಲ್ಲಿ ಎಲ್ಲ ಸೌಲಭ್ಯಗಳನ್ನು ನೀಡಿ ಹೋಮ್ ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತಿದೆ ಎಂದರು.

ಡಾಣಕ ಶಿರೂರ ಗ್ರಾಮಕ್ಕೆ ವಿಶೇಷ ಕಾಳಜಿ ತೋರಿದ ಜಿಪಂ : ಬಾದಾಮಿ ತಾಲೂಕಿನ ಡಾಣಕಶಿರೂರ ಗ್ರಾಮದಲ್ಲಿ ಕೋವಿಡ್-19 ಸೋಂಕು ಪ್ರಕರಣ ದೃಢಪಟ್ಟ ಹಿನ್ನೆಲೆ ಜಿಲ್ಲಾ ಪಂಚಾಯತ್‌ನಿಂದ ಹೆಚ್ಚಿನ ರೀತಿಯ ಕಾಳಜಿ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಡಾಣಕಶಿರೂರ ಗ್ರಾಮದಲ್ಲಿ ಒಟ್ಟು 235 ಕುಟುಂಬಗಳಿವೆ. 1173 ಜನಸಂಖ್ಯೆ ಹೊಂದಿದೆ. ಕೊರೊನಾ ಪ್ರಕರಣ ಹಿನ್ನೆಲೆ ಡಾಣಕ ಶಿರೂರ ಗ್ರಾಮದ ಪ್ರೌಢಶಾಲೆಯಲ್ಲಿ 52, ಜಾಲಿಹಾಳ ಗ್ರಾಮದ ಪ್ರೌಢಶಾಲೆಯಲ್ಲಿ 19, ಚಿಕ್ಕ ಮುಚ್ಚಳಗುಡ್ಡ ವಸತಿ ನಿಲಯದಲ್ಲಿ 125 ಜನರನ್ನು ಕ್ವಾರಂಟೈನ್ ಮಾಡಿ ನಿಗಾವಹಿಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.