ಬಾಗಲಕೋಟೆ : ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಜರುಗಿದೆ. ಲಲಿತಾ (37) ಮತ್ತು ಅನುಪಮಾ (20)ಮೃತ ದುದೈ೯ವಿಗಳು. ಗುಳೇದಗುಡ್ಡ ಪಟ್ಟಣದ ಗಂಜಿಕೆರೆಯಲ್ಲಿ ಬಟ್ಟೆ ತೊಳೆಯುವ ಸಮಯದಲ್ಲಿ ಕಾಲು ಜಾರಿ ಬಿದ್ದ ಮಹಿಳೆಯನ್ನು ರಕ್ಷಣೆ ಮಾಡಲು ಹೋದ ವೇಳೆ ಈ ದುರ್ಘಟನೆ ಜರುಗಿದೆ.
![two women drown in river while washing clothes](https://etvbharatimages.akamaized.net/etvbharat/prod-images/13372932_water.jpg)
ಕಾಲುಜಾರಿ ಕೆರೆಗೆ ಮೊದಲು ಬಿದ್ದ ಮಹಿಳೆಯನ್ನು ರಕ್ಷಿಸಲು ಆರು ಜನ ಕೆರೆಯಲ್ಲಿ ಇಳಿದಿದ್ದಾರೆ, ಅವರಲ್ಲಿ ಐವರನ್ನು ರಕ್ಷಣೆ ಮಾಡಿದ್ದಾರೆ. ಐವರಲ್ಲಿ ಓರ್ವ ಪುರುಷ ಹಾಗೂ ನಾಲ್ವರು ಮಹಿಳೆಯರು. ಆದರೆ, ಇಬ್ಬರು ಮಹಿಳೆಯರ ದುರ್ಮರಣ ಹೊಂದಿದ್ದಾರೆ.
ಸ್ಥಳೀಯರು ಹಾಗೂ ಮೀನುಗಾರರಿಂದ ಐವರ ರಕ್ಷಣೆ ಮಾಡಲಾಗಿದೆ. ಸ್ಥಳಕ್ಕೆ ಗುಳೇದಗುಡ್ಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯರ ಮತ್ತು ಮೀನುಗಾರರ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.