ETV Bharat / state

ಲೋಕಸಭಾ ಚುನಾವಣೆ 2024: ಬಾಗಲಕೋಟೆ ಟಿಕೆಟ್ ಆಕಾಂಕ್ಷಿಗಳ‌ ಪಟ್ಟಿ ಹೀಗಿದೆ

ಈ ಬಾರಿಯ ಲೋಕಸಭಾ ಚುನಾವಣೆಗೆ ಪಕ್ಷಗಳಿಂದ ಪೂರ್ವ ತಯಾರಿ ನಡೆಯುತ್ತಿದೆ. ಜಿಲ್ಲೆಯಾದ ಬಾಗಲಕೋಟೆಯಲ್ಲಿಯಂತು ಆಕಾಂಕ್ಷಿಗಳ ಪಟ್ಟಿ ಈಗಲೇ ಬೆಳೆಯುತ್ತಿದೆ.

ಆಕಾಂಕ್ಷಿಗಳು
ಆಕಾಂಕ್ಷಿಗಳು
author img

By ETV Bharat Karnataka Team

Published : Sep 4, 2023, 7:33 AM IST

ಬಾಗಲಕೋಟೆ: ಲೋಕಸಭೆ ಚುನಾವಣೆಗೆ ಇನ್ನು 9 ತಿಂಗಳು ಬಾಕಿ ಇರುವಾಗಲೇ ‌ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ಹನಮಂತನ ಬಾಲದಂತೆ ಬೆಳೆಯುತ್ತಿದ್ದು, ನಾನಾ..ನೀನಾ ಎಂಬ ಸ್ಪರ್ಧೆ ಏರ್ಪಟ್ಟಿದೆ. ಕಳೆದ‌‌ ಲೋಕಸಭಾ‌ ಚುನಾವಣೆಗೆ ಕಾಂಗ್ರೆಸ್ ‌ಪಕ್ಷದಿಂದ‌ ಸ್ಪರ್ಧೆ ಮಾಡಿ ಸೋಲು ಕಂಡಿರುವ ವೀಣಾ ಕಾಶಪ್ಪನವರ ಮತ್ತೆ ಅಖಾಡಕ್ಕಿಳಿಯುವ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಹಲವರು ತಾವೂ ಕೂಡ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಆಕಾಂಕ್ಷಿ ಎಂದು ಹೇಳುತ್ತಿದ್ದಾರೆ. ಈ ಮೂಲಕ‌ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆಗೆ ಈಗಲೇ ಪೈಪೋಟಿ ಪ್ರಾರಂಭವಾಗಿದೆ.

ವೀಣಾ ಕಾಶಪ್ಪನವರ ನಂತರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಜೇಯಕುಮಾರ ಸರನಾಯಕ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷರಾದ ಪ್ರಕಾಶ ತಪಶೆಟ್ಟಿ, ಕಾಂಗ್ರೆಸ್ ‌ಪಕ್ಷದ ಮಹಿಳಾ ಘಟಕದ ಅಧ್ಯಕ್ಷರಾದ ರಕ್ಷಿತಾ ಈಟಿ ಲೋಕಸಭೆಗೆ ಸ್ಪರ್ಧೆ ಮಾಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ.

ಪಿ ಸಿ ಗದ್ದಿಗೌಡರ‌
ಪರ್ವತ್​ಗೌಡ ಗದ್ದಿಗೌಡರ

ಇನ್ನು, ಬಿಜೆಪಿ ಪಕ್ಷದಲ್ಲಿ ಈಗಿನ ಲೋಕಸಭಾ ಸದಸ್ಯರಾದ ಪಿ ಸಿ ಗದ್ದಿಗೌಡರ‌ ನಾಲ್ಕು ಬಾರಿ ಆಯ್ಕೆ ಆಗಿದ್ದಾರೆ. ಈ ಬಾರಿಯೂ ಬಿಜೆಪಿ ಪಕ್ಷದಲ್ಲಿ ಅವರದೇ ಹೆಸರು ಕೇಳಿ‌ ಬರುತ್ತಿದೆ. ಪ್ರತಿ ಸಲ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುತ್ತ ಬಂದರೂ, ಕೊನೆಯಗಳಿಗೆಯಲ್ಲಿ ಅವರನ್ನೇ ಬಿಜೆಪಿ ಪಕ್ಷದಿಂದ ಅಂತಿಮಗೊಳಿಸಿ, ಆಯ್ಕೆ ಮಾಡಲಾಗುತ್ತದೆ.

ಈ ಬಾರಿ ಬಿಜೆಪಿ ಪಕ್ಷದಲ್ಲಿ ಗದ್ದಿಗೌಡರ ಜೊತೆಗೆ, ರಾಜಶೇಖರ ಶೀಲವಂತ, ಮುರುಗೇಶ ನಿರಾಣಿ ಅವರ ಹೆಸರು ಸಹ ಕೇಳಿ‌ ಬರುತ್ತಿದೆ. ಆದರೆ ಗದ್ದಿಗೌಡರ ಹೆಸರು ಅಂತಿಮವಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನು ಕಾಂಗ್ರೆಸ್ ಪಕ್ಷದಲ್ಲಿ ವೀಣಾ ಕಾಶಪ್ಪನವರ, ಲಿಂಗಾಯತ ಪಂಚಸಾಲಿ ಸಮಾಜದವರಾಗಿದ್ದರೆ, ಅಜೇಯಕುಮಾರ ಸರನಾಯಕ ರೆಡ್ಡಿ ಸಮುದಾಯಕ್ಕೆ, ಪ್ರಕಾಶ ತಪಶೆಟ್ಟಿ ಲಿಂಗಾಯತ ಬಣಜಿಗ ಸಮುದಾಯಕ್ಕೆ ಹಾಗೂ ರಕ್ಷಿತಾ ಈಟಿ ಕುರುಬ ಸಮುದಾಯದವರಾಗಿದ್ದಾರೆ. ಜಾತಿಯಿಂದಾಗಿ ಲಿಂಗಾಯತ ಹಾಗೂ ಕುರುಬ ಜನಾಂಗದವರು ನಿರ್ಣಾಯಕರಾಗಿದ್ದಾರೆ.

ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಇರುವುದರಿಂದ ಹಾಗೂ ಐದು ಗ್ಯಾರಂಟಿ ಯೋಜನೆಯಿಂದಾಗಿ ಕಾಂಗ್ರೆಸ್​ ಪಕ್ಷಕ್ಕೆ ಒಲವು ಹೆಚ್ಚಾಗಲಿದೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಎಂಟು ಮತಕ್ಷೇತ್ರ ಬರಲಿದ್ದು, ಇದರಲ್ಲಿ ಜಮಖಂಡಿ ಹಾಗೂ ತೇರದಾಳ ವಿಧಾನ ಸಭೆಯ ಮತಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಉಳಿದ ಮತಕ್ಷೇತ್ರದಲ್ಲಿ ಕಾಂಗ್ರೆಸ್ ‌ಪಕ್ಷದ ಅಭ್ಯರ್ಥಿ ವಿಧಾನಸಭೆಯಲ್ಲಿ ಜಯ ಗಳಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು, ಮುಖಂಡರು ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕೆಲಸ ಮಾಡಿದಲ್ಲಿ ಬಿಜೆಪಿ ತೆಕ್ಕೆಯಲ್ಲಿರುವ ಲೋಕಸಭಾ ಕ್ಷೇತ್ರವುನ್ನು ಕೈ ವಶ ಮಾಡಿಕೊಳ್ಳಲು ಕಾಂಗ್ರೆಸ್​ ತಯಾರಿ ನಡೆಸಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ ತಯಾರಿ: ನಾಳೆ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.