ETV Bharat / state

ಬಾಗಲಕೋಟೆಯಲ್ಲಿ ಭಾರೀ ಮಳೆ: ಮೈದುಂಬಿ ಧುಮ್ಮಿಕ್ಕುತ್ತಿದೆ ಸಿದ್ದನಕೊಳ್ಳ ಕಿರು ಜಲಪಾತ! - ಕೊರೊನಾ ವೈರಸ್

ಬಾಗಲಕೋಟೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಳಕಲ್ಲು ತಾಲೂಕಿನ ಸಿದ್ದೇಶ್ವರ ಮಠದ ಸಮೀಪದಲ್ಲಿರುವ ‘ಸಿದ್ದನಕೊಳ್ಳ ಕಿರು ಜಲಪಾತ’ ಹಾಲಿನ ನೊರೆಯಯಂತೆ ಮೈದುಂಬಿ ಧುಮ್ಮಿಕ್ಕುತ್ತಿದೆ.

Siddanakolla Falls
ಸಿದ್ದನಕೊಳ್ಳ ಕಿರು ಜಲಪಾತ
author img

By

Published : Aug 1, 2020, 12:54 PM IST

ಬಾಗಲೋಟೆ: ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಇಳಕಲ್ಲು ತಾಲೂಕಿನ ಸಿದ್ದನಕೊಳ್ಳ ಕಿರು ಜಲಪಾತ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರು ಮತ್ತು ಸಿದ್ದನಕೊಳ್ಳದ ಸಿದ್ದೇಶ್ವರ ಮಠಕ್ಕೆ ಭೇಟಿ ನೀಡುವ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.

ಧಾರ್ಮಿಕ ಸ್ಥಳ ಸಿದ್ದೇಶ್ವರ ಮಠವು ಐಹೊಳೆಯಿಂದ 10 ಕಿ.ಮೀ. ದೂರದಲ್ಲಿದೆ. ಪಕ್ಕದಲ್ಲೇ ಇರುವ ಜಲಪಾತವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮತ್ತು ಭಕ್ತರ ದಂಡೇ ಹರಿದು ಬರುತ್ತದೆ. ಬೆಟ್ಟದ ಮೇಲೆ ಹಸಿರಿನ ಮಧ್ಯೆ ಜಾರಿ ಬರುವ ನೀರನ್ನು ನೋಡಲು ನಯನ ಮನೋಹರವಾಗಿರುತ್ತದೆ. ಕೆಳಗಡೆ ಹಾಸು ಬಂಡೆಗಳಿರುವುದರಿಂದ ಚಾರಣಿಗರಿಗೆ ಸ್ನಾನ ಮಾಡಲು ಯೋಗ್ಯವಾದ ಸ್ಥಳವಾಗಿದೆ.

ಸಿದ್ದನಕೊಳ್ಳ ಕಿರು ಜಲಪಾತದ ನಯನ ಮನೋಹರ ದೃಶ್ಯ

ಹಿಂದಿನ‌ ಕಾಲದಲ್ಲಿ ಪವಾಡ ಪುರುಷರು ಸಿದ್ಧಿಗಾಗಿ ಇಂತಹ ಸ್ಥಳವನ್ನು ಆಯ್ಕೆ ಮಾಡಿ ತಪ್ಪಸ್ಸು ಮಾಡುತ್ತಿದ್ದರು ಎನ್ನಲಾಗಿದೆ. ಮಕ್ಕಳು ಆಗದವರು ಇಲ್ಲಿಗೆ ಬಂದು ಪೂಜೆ ಸಲ್ಲಿಸಿದರೆ ಸಂತಾನ ಭಾಗ್ಯ ಸಿಗಲಿದೆ ಎಂಬ ನಂಬಿಕೆ ಇದೆ. ಭಕ್ತರು ಪ್ರತೀ ಅಮಾವಾಸ್ಯೆ ದಿನದಂದು ಬೇರೆ ಬೇರೆ ಪ್ರದೇಶದಿಂದ ಆಗಮಿಸಿ ವಿಶೇಷ ಪೂಜೆ ನೆರವೇರಿಸುತ್ತಾರೆ. ಹಾಗೆಯೇ ಮಠದ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದವನ್ನೂ ಪಡೆಯುತ್ತಾರೆ.

ಮಠದಲ್ಲಿ ನಿರಂತರ ದಾಸೋಹ ಇರಲಿದೆ. ಇಲ್ಲಿ ಕೆಲ ಸಿನಿಮಾಗಳ ಚಿತ್ರೀಕರಣ ಸೇರಿದಂತೆ ಚನಲಚಿತ್ರಗಳ ಆಡಿಯೋ ಬಿಡುಗಡೆ ಮಾಡಲಾಗಿದೆ. ಪ್ರತೀ ವರ್ಷ ಸಿದ್ದಶ್ರೀ ಪ್ರಶಸ್ತಿ ನೀಡಿ ಕಲಾವಿದರನ್ನು ಪ್ರೋತ್ಸಾಹಿಸಲಾಗುತ್ತದೆ. ಸದ್ಯದ ಮಟ್ಟಿಗೆ ಕೊರೊನಾ ಭಯದಿಂದ ಪ್ರವಾಸಿಗರ ಸಂಖ್ಯೆ ವಿರಳವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.