ETV Bharat / state

ನಾಮಪತ್ರ ವಾಪಸ್​..ಚುನಾವಣಾ ಕಣದಿಂದ ಹಿಂದೆ ಸರಿದ ಶಿವಶಂಕರ ಶ್ರೀ

ಹಳೆ ಹುಬ್ಬಳ್ಳಿಯ ವೀರ ಭೀಕ್ಷಾವ್ರತಿ ಮಠದ ಪೀಠಾಧ್ಯಕ್ಷ ಶಿವಶಂಕರ ಶ್ರೀ ನಾಮಪತ್ರ ಹಿಂಪಡೆದಿದ್ದಾರೆ.

shivashankar shree withdrew nomination
ಚುನಾವಣಾ ಕಣದಿಂದ ಹಿಂದೆ ಸರಿದ ಶಿವಶಂಕರ ಶ್ರೀ
author img

By

Published : Apr 25, 2023, 11:58 AM IST

ಬಾಗಲಕೋಟೆ: ರಾಜ್ಯ ರಾಜಕಾರಣದಲ್ಲಿ ವಿಶೇಷ ಸದ್ದು ಮಾಡಿದ್ದ ಹಳೆ ಹುಬ್ಬಳ್ಳಿಯ ವೀರ ಭೀಕ್ಷಾವ್ರತಿ ಮಠದ ಪೀಠಾಧ್ಯಕ್ಷ ಶಿವಶಂಕರ ಶ್ರೀ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದನ್ನು ಹಿಂಪಡೆದಿದ್ದಾರೆ.

ನಾಮಪತ್ರ ಹಿಂಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅವರು, ಸನ್ಯಾಸಿ ಧರ್ಮ, ಗುರು, ಪೀಠ ಹಾಗೂ ಸಮಾಜದ ನಂತರ ರಾಜಕೀಯವಿದೆ. ಇದನ್ನು ಗಮನಿಸದೆ ಕುರುಹಿನಶೆಟ್ಟಿ ಹಾಗೂ ಹಟಗಾರ ಸಮುದಾಯಗಳ ಹಿರಿಯರ, ಹಿಂದುಳಿದ ವರ್ಗ, ದೀನ ದಲಿತರ ಒತ್ತಡಕ್ಕೆ ಹಾಗೂ ನೇಕಾರರಿಗೆ ಆದ ಅನ್ಯಾಯ ಸಹಿಸಿಕೊಳ್ಳಲಾಗದೇ ಸ್ಪರ್ಧೆಗೆ ನಿಲ್ಲುವಂತೆ ಒತ್ತಾಯಿಸಿದ ಕಾರಣ ನಾಮಪತ್ರ ಸಲ್ಲಿಸಿದ್ದೆ. ಇದೀಗ ಕೊಲ್ಹಾಪುರ ಕಣೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳ ಆದೇಶದಂತೆ ಹಾಗೂ ವೈಯಕ್ತಿಕವಾಗಿ ನನಗೂ ಬೇಸರವಾದ ಕಾರಣ ನಾಮಪತ್ರ ಹಿಂಪಡೆಯುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ‌ ತ್ರಿಕೋನ‌ ಸ್ಪರ್ಧೆ: ಶ್ರೀ ಯಲ್ಲಮ್ಮದೇವಿ ಆಶೀರ್ವಾದ ಯಾರಿಗೆ..?

ಸ್ಪರ್ಧೆ ವೇಳೆ ಕೆಲ ಹಿರಿಯರು ಹಾಗೂ ಮಠಾಧೀಶ ಪ್ರಭುಗಳ ಅನುಮತಿ ಪಡೆಯದಿರುವುದು ತಪ್ಪಾಗಿದೆ. ಒಟ್ಟಾರೆ ರಾಜಕೀಯ ಕ್ಷೇತ್ರ ನನಗಿಷ್ಟವಿಲ್ಲ. ಭಕ್ತರು ಹಾಗೂ ನನಗೆ ಬೆಂಬಲಿಸುವ ಎಲ್ಲ ಸಮಾಜಗಳ ಹಿರಿಯರಿಗೆ ತಪ್ಪು ಸಂದೇಶ ಹೋಗಬಾರದು. ತಮಗೆ ಆಯಾ ಪಕ್ಷ ಹಾಗೂ ಪಕ್ಷೇತರ ಮಾರ್ಗಗಳಂತೆ ರಾಜಕೀಯ ಮುನ್ನಡೆಸಲು ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು. ಇದರಿಂದ ಸ್ವಾಮೀಜಿಯೊಬ್ಬರ ಸ್ಪರ್ಧೆಯಿಂದಾಗಿ ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರ ಈಗ ಬಿಜೆಪಿ ಹಾಗೂ ಕಾಂಗ್ರೆಸ್ ‌ಪಕ್ಷದ ಮಧ್ಯೆ ಹಣಾಹಣಿಗೆ ಕಾರಣವಾಗಿದೆ.

ಇದನ್ನೂ ಓದಿ: ನೇಕಾರರ ಸಂಪೂರ್ಣ ಸಾಲಮನ್ನಾ ಅಗತ್ಯ: ಶಿವಶಂಕರ ಶ್ರೀ ಅಭಿಮತ

ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದ ಶಿವಶಂಕರ ಶ್ರೀ: ರಾಜ್ಯ ರಾಜಕಾರಣದಲ್ಲಿ ಇದೇ ಮೊದಲ ಬಾರಿಗೆ ಸ್ವಾಮೀಜಿಯೊಬ್ಬರು ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಗಮನ ಸೆಳೆದಿದ್ದರು. ತೇರದಾಳ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಹಾಗೂ ನೇಕಾರರ ಸಮುದಾಯದ ಸ್ವಾಮೀಜಿ ಶಿವಶಂಕರ ಶ್ರೀಗಳು ಕಳೆದ ಬುಧವಾರ ಸಾಕಷ್ಟು ಜನರ ಬೆಂಬಲದೊಂದಿಗೆ ತಹಶೀಲ್​​ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿ ಅಖಾಡಕ್ಕೆ ಇಳಿದಿದ್ದರು. ಎರಡು ರಾಷ್ಟ್ರೀಯ ಪಕ್ಷಗಳು ನೇಕಾರರಿಗೆ ಮಾನ್ಯತೆ ನೀಡದ ಹಿನ್ನೆಲೆ ಸ್ವಾಮೀಜಿಯೇ ಪ್ರವೇಶ ಮಾಡಿದ್ದರು.

ಸ್ಥಳೀಯರಿಗೆ ಅದರಲ್ಲಿಯೂ ನೇಕಾರರ ಮುಖಂಡರಿಗೆ ರಾಷ್ಟ್ರೀಯ ಪಕ್ಷಗಳಲ್ಲಿ ಟಿಕೆಟ್ ನೀಡುವಂತೆ ಬೆಂಬಲಿಗರು ಒತ್ತಾಯ ಮಾಡಿ, ಪ್ರತಿಭಟನೆಯನ್ನು ಸಹ ಮಾಡಿದ್ದರು. ಆದರೆ, ಟಿಕೆಟ್ ನೀಡದ ಹಿನ್ನೆಲೆ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ನೇಕಾರರ ಮುಖಂಡರು ಸೇರಿಕೊಂಡು ಒಮ್ಮತದಿಂದ ಸ್ವಾಮೀಜಿ ಅವರಿಂದ ನಾಮಪತ್ರ ಸಲ್ಲಿಸಿದ್ದರು. ತೇರದಾಳ ಮತಕ್ಷೇತ್ರದ ನೇಕಾರ ಸಮುದಾಯದ ಹೊಸುರು ಗ್ರಾಮದಲ್ಲಿರುವ ಮಠಾಧೀಶ ಶಿವಶಂಕರ ಶ್ರೀಗಳು ಮೂಲ ಹುಬ್ಬಳ್ಳಿ ಮಠದವರು ಆಗಿದ್ದು, ಕಳೆದ ಆರು ವರ್ಷಗಳಿಂದ ತೇರದಾಳ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಧಾರ್ಮಿಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.

ಇದನ್ನೂ ಓದಿ: ಪಕ್ಷೇತರ ಅಭ್ಯರ್ಥಿಯಾಗಿ ನೇಕಾರ ಸಮುದಾಯದ ಸ್ವಾಮೀಜಿ ಶಿವಶಂಕರ ಶ್ರೀ ನಾಮಪತ್ರ ಸಲ್ಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.