ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ರೈತರೊಬ್ಬರು ಸಾಕಿದ ಎತ್ತನ್ನು ದಾಖಲೆಯ 13.5 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. 'ರಾಜ' ಎಂಬ ಹೆಸರಿನ ಕಾಲರಿ ಎತ್ತು ಈ ಹಿಂದೆ ಹಲವು ಬಂಡಿ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿತ್ತು.
ನಾವಲಗಿ ಗ್ರಾಮದ ಹೊಳೆಪ್ಪ ಸಂಗಪ್ಪ ಅವರು ಕೇವಲ ಏಳು ತಿಂಗಳ ಹಿಂದೆ 1 ಲಕ್ಷ ರೂಪಾಯಿಗೆ ಬೈಲಹೊಂಗಲದ ರೈತನೋರ್ವನಿಂದ ಈ ಎತ್ತನ್ನು ಖರೀದಿಸಿದ್ದರು. ಎತ್ತಿಗೆ ಈಗ 5 ವರ್ಷವಾಗಿದ್ದು, ಮುಧೋಳ ತಾಲೂಕಿನ ವಂಟಗೂಡಿ ಗ್ರಾಮದ ರೈತ ಭೀಮಶಿ ಐನಾಪುರ ಎಂಬುವರಿಗೆ ಮಾರಾಟ ಮಾಡಲಾಗಿದೆ.
ರಾಜ ಕಳೆದ ಕೆಲ ತಿಂಗಳಲ್ಲಿ ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲಿ ತೆರೆದ(ಕರ) ಬಂಡಿ ಜಗ್ಗುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು, ಅಂದಾಜು 3 ಲಕ್ಷಕ್ಕೂ ಅಧಿಕ ಹಣ ಗೆದ್ದು ತಂದಿದೆ. ಬುಧವಾರ ನಾವಲಗಿ ಗ್ರಾಮಸ್ಥರು ಅದ್ಧೂರಿ ಮೆರವಣಿಗೆ, ಪೂಜೆ ಮಾಡಿ ಪ್ರೀತಿಯ ರಾಜನನ್ನು ಬೀಳ್ಕೊಟ್ಟಿದ್ದಾರೆ. ಗ್ರಾಮದಲ್ಲಿ ವಾದ್ಯ ವೈಭವಗಳೊಂದಿಗೆ ಎತ್ತನ್ನು ಮೆರವಣಿಗೆ ಮಾಡಿದ್ದಾರೆ.
ಇದನ್ನೂ ಓದಿ: ಸ್ಪಂದಿಸದ ಜನಪ್ರತಿನಿಧಿಗಳು.. ಎಮ್ಮೆಯಿಂದ ಬಸ್ ನಿಲ್ದಾಣ ಉದ್ಘಾಟನೆ ಮಾಡಿಸಿದ ಗ್ರಾಮಸ್ಥರು!!