ETV Bharat / state

ಬಾಗಲಕೋಟೆ: ಭಾರಿ ಮಳೆಗೆ 65ಕ್ಕೂ ಅಧಿಕ ಮನೆಗಳು ಕುಸಿತ

ಬಾಗಲಕೋಟೆಯಲ್ಲಿ ಭಾರಿ ಮಳೆ ಇಂದಾಗಿ ಹಲವೆಡೆ ಮನೆಗಳು ಕುಸಿತವಾಗಿದ್ದು, ಜನರು ಪರದಾಡುವಂತಾಗಿದೆ. ಈ ಬಗ್ಗೆ ಸೂಕ್ತ ಪರಿಹಾರ ಒದಗಿಸುವಂತೆ ಸಂತ್ರಸ್ತರು ಒತ್ತಾಯಿಸಿದ್ದಾರೆ.

more-than-65-houses-collapsed-due-to-heavy-rain-in-bagalkot
ಬಾಗಲಕೋಟೆ : ಭಾರೀ ಮಳೆಗೆ ಸುಮಾರು 65ಕ್ಕೂ ಅಧಿಕ ಮನೆಗಳು ಕುಸಿತ
author img

By

Published : Aug 10, 2022, 10:29 AM IST

ಬಾಗಲಕೋಟೆ : ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನಾದ್ಯಂತ ನಿರಂತರ ಮಳೆಯಾಗುತ್ತಿರುವುದರಿಂದ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಮಳೆಗೆ ಮಣ್ಣಿನ ಮನೆಗಳು ಕುಸಿದಿದ್ದು, ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಹಾನಿಗೊಳಗಾದ ಮನೆಗಳಿಗೆ ಶಾಸಕ ಸಿದ್ದು ಸವದಿ, ತಹಶೀಲ್ದಾರ್​ ಸಂಜಯ ಇಂಗಳೆ ಭೇಟಿ ನೀಡಿದ್ದು, ಹಾನಿಗೊಳಗಾದ ಮನೆಗಳ ಸರ್ವೆ ಕಾರ್ಯ ಮಾಡಿಸಿ ಸೂಕ್ತ ದಾಖಲೆಗಳೊಂದಿಗೆ ಸರ್ಕಾರಕ್ಕೆ ಮಾಹಿತಿ ಒದಗಿಸಿದ್ದಾರೆ.

ಕಳೆದ ಜುಲೈ 25 ರಿಂದ ಕಂದಾಯ ಇಲಾಖೆಯಿಂದ ನಡೆಯುತ್ತಿರುವ ಸರ್ವೆ ಕಾರ್ಯದ ಪ್ರಕಾರ 65 ಮನೆಗಳು ಹಾನಿಗೊಳಗಾಗಿದ್ದು, ಕಳೆದೊಂದು ವಾರದಲ್ಲಿಯೇ 50 ಕ್ಕೂ ಅಧಿಕ ಮನೆಗಳು ಕುಸಿದಿರುವುದಾಗಿ ವರದಿಯಾಗಿದೆ. ಸದ್ಯ ಸೂರಿಲ್ಲದೇ ಪರದಾಡುತ್ತಿರುವ ಕುಟುಂಬಗಳಿಗೆ ಶೀಘ್ರ ಪರಿಹಾರ ಒದಗಿಸುವಂತೆ ಸಂತ್ರಸ್ತರು ಒತ್ತಾಯಿಸಿದ್ದಾರೆ. ಮಳೆಗೆ ಮನೆ ಕುಸಿತ ಅಥವಾ ಇನ್ನಾವುದೇ ಸಮಸ್ಯೆ ಎದುರಾದಲ್ಲಿ ತಕ್ಷಣವೇ ಕಂದಾಯ ಇಲಾಖೆಯ ಸಹಾಯ ವಾಣಿ 08353-230555 ಸಂಖ್ಯೆಗೆ ಸಂಪರ್ಕಿಸುವಂತೆ ಸೂಚಿಸಲಾಗಿದೆ.

ಬಾಗಲಕೋಟೆ : ಭಾರೀ ಮಳೆಗೆ ಸುಮಾರು 65ಕ್ಕೂ ಅಧಿಕ ಮನೆಗಳು ಕುಸಿತ

ಸೂರು ಕಳೆದುಕೊಂಡ ಅರ್ಹ ಫಲಾನುಭವಿಗಳಿಗೆ ಸರ್ವೇ ಕಾರ್ಯ ಮಾಡಿ,ಮಳೆ ಹಾನಿಗನುಗುಣವಾಗಿ ಸರ್ಕಾರ 50 ಸಾವಿರದಿಂದ 5 ಲಕ್ಷದ ವರೆಗೆ ಪರಿಹಾರ ನೀಡಲಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದ್ದಾರೆ. ಈ ಬಗ್ಗೆ ಶಾಸಕರ, ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ಸಭೆಗಳು ನಡೆದಿವೆ. ಆಯಾ ಗ್ರಾಮ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಸಾಧ್ಯವಾದಷ್ಟು ಹಳೆಯ ಬೀಳುವ ಲಕ್ಷಣಗಳನ್ನು ಹೊಂದಿರುವ ಮನೆಗಳಲ್ಲಿ ಮಲಗಬಾರದು ಎಂದು ತಹಶೀಲ್ದಾರ್​ ಸಂಜಯ ಇಂಗಳೆ ಮನವಿ ಮಾಡಿದ್ದಾರೆ.

ಉದ್ಯೋಗ ಕಸಿದ ಮಳೆ: ನೇಕಾರಿಕೆ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಕುಟುಂಬಗಳಿಗೆ ಮಳೆಯಿಂದಾಗಿ ಉದ್ಯೋಗ ನಷ್ಟವಾಗಿದೆ. ಈ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೇಕಾರರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಚಿಕ್ಕಮಗಳೂರಲ್ಲಿ ಭಾರಿ ಮಳೆ: ವರುಣನ ಅಬ್ಬರಕ್ಕೆ ಒಬ್ಬ ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.