ETV Bharat / state

ಬೀಳಗಿ ಮತಕ್ಷೇತ್ರ: ಸಚಿವ ಮುರುಗೇಶ ನಿರಾಣಿ ನಾಮಪತ್ರ ಸಲ್ಲಿಕೆ - ಈಟಿವಿ ಭಾರತ್ ಕನ್ನಡ ಸುದ್ದಿ

ಬಾಗಲಕೋಟೆಯ ಏಳು ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸುವುದು ಖಚಿತ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

ಸಚಿವ ಮುರಗೇಶ ನಿರಾಣಿ
ಸಚಿವ ಮುರಗೇಶ ನಿರಾಣಿ
author img

By

Published : Apr 13, 2023, 10:28 PM IST

ಬಾಗಲಕೋಟೆ: ಜಿಲ್ಲೆಯ ಬೀಳಗಿ ಹಾಗೂ ತೇರದಾಳ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ತೇರದಾಳ ಮತಕ್ಷೇತ್ರದಲ್ಲಿ ಸಿದ್ದು ಸವದಿ, ಬೀಳಗಿಯಲ್ಲಿ ಸಚಿವ ಮುರಗೇಶ ನಿರಾಣಿ ಅವರು ತಹಶಿಲ್ದಾರರ ಕಚೇರಿಯಲ್ಲಿ 22ನೇ ವಿಧಾನಸಭೆ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು.

ಬೀಳಗಿ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ನಿರಾಣಿ, ಬಾಗಲಕೋಟೆ ಜಿಲ್ಲೆಯ ಏಳು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸುವುದು ಖಚಿತ. ಈಗಾಗಲೇ ಬಾದಾಮಿ ಹಾಗೂ ಜಮಖಂಡಿ ಕ್ಷೇತ್ರದಲ್ಲಿ ಬೇರೆ ಅಭ್ಯರ್ಥಿಗಳನ್ನು ಹೈಕಮಾಂಡ್ ಕಣಕ್ಕಿಳಿಸಿದೆ. ಈ ಬಾರಿ ಆ ಎರಡು ಕ್ಷೇತ್ರವೂ ಸಹ ಜಯಗಳಿಸುತ್ತದೆ. ಟಿಕೆಟ್ ತಪ್ಪಿದಲ್ಲಿ ಸ್ವಲ್ಪ ಅಸಮಾಧಾನ ಉಂಟಾಗುವುದು ಸಹಜ. ಆದರೆ, ಅವರ ಜೊತೆಗೆ ಮಾತುಕತೆ ಮಾಡಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಬಾಗಲಕೋಟೆ ಮತಕ್ಷೇತ್ರದಲ್ಲಿಯೂ ಸಹ ಬಂಡಾಯ ಬಿಸಿ ಇದೆ. ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದಲ್ಲಿ ಅವರನ್ನು ಕರೆದು ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಯುವ ಮುಖಂಡರಾದ ಬಸವಪ್ರಭು ಸರನಾಡಗೌಡ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಗೊಂಡಿದ್ದು ಅವರನ್ನು ಸಂಪರ್ಕ ಮಾಡಿದ್ದೇನೆ. ಅವರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮುಂದಿನ ಎರಡು ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಲಕ್ಷ್ಮಣ ಸವದಿ ಬಗ್ಗೆ ಪ್ರತಿಕ್ರಿಯೆ ನೀಡಿ, ನಾವು- ಅವರು ರಾಮ ಲಕ್ಷ್ಮಣ ಇದ್ದಂತೆ. ಆದರೆ ನೋಡುವವರ ಕಣ್ಣಿಗೆ ಕಾಮಾಲೆ ಎಂಬಂತೆ ಕಾಣುತ್ತದೆ ಎಂದರು. ಸಿದ್ದರಾಮಯ್ಯನವರ ಕ್ಷೇತ್ರದಲ್ಲಿ ಸೋಮಣ್ಣ ಸ್ಪರ್ಧೆ ಮಾಡಿರುವ ಬಗ್ಗೆ ಮಾತನಾಡಿ, ಸೋಮಣ್ಣ ಜಯ ಗಳಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿ, ಸಿದ್ದರಾಮಯ್ಯನವರ ಸೋಲು ಖಚಿತವೇ ಎಂಬ ಪ್ರಶ್ನೆಗೆ ಅದರ ಬಗ್ಗೆ ಏನೂ ಹೇಳಲ್ಲ ಎಂದರು.

ಇದನ್ನೂ ಓದಿ : ಅರಸೀಕೆರೆಯಲ್ಲಿ ಎನ್.ಆರ್.ಸಂತೋಷ್​ಗೆ ಬಿಜೆಪಿ ಟಿಕೆಟ್​ ಮಿಸ್​: ಪತ್ನಿ, ಹಸುಗೂಸಿನೊಂದಿಗೆ ಮತಬೇಟೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.