ETV Bharat / state

ರಾಜ್ಯದಲ್ಲಿ ಎಲ್​ಕೆಜಿ-ಯುಕೆಜಿ ಪುನಾರಂಭ: ಪುಟ್ಟಪುಟ್ಟ ಹೆಜ್ಜೆ ಇಟ್ಟು ಶಾಲೆಗೆ ಬಂದ ಚಿಣ್ಣರು

ಮಕ್ಕಳನ್ನು ಶಾಲೆಗೆ ಕಳುಹಿಸುವ, ಬಿಡುವ ಸಂಪೂರ್ಣ ಸ್ವಾತಂತ್ರ್ಯವನ್ನು ಪೋಷಕರಿಗೆ ನೀಡಲಾಗಿದೆ. ಕೋವಿಡ್ ಭೀತಿ ಇದ್ದರೆ ಆನ್​ಲೈನ್ ಮೂಲಕವೇ ಪಾಠ ಕೇಳಲು ವ್ಯವಸ್ಥೆ ಮಾಡಬಹುದು.‌ ಒಂದು ವೇಳೆ ಭೌತಿಕ ತರಗತಿಗೆ ಬರಲು ಇಚ್ಚಿಸಿದ್ದಲ್ಲಿ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ ಮಾಡಲಾಗಿದೆ.

author img

By

Published : Nov 8, 2021, 4:57 PM IST

lkg-ukg-classes-re-open-in-bengalore
ಮಕ್ಕಳಿಗೆ ಸ್ವಾಗತ ಮಾಡಿದ ಶಿಕ್ಷಕರು

ಬೆಂಗಳೂರು: ನಗರದ ಬಹುತೇಕ ಶಾಲೆಗಳು ಪೋಷಕರ ಒಪ್ಪಿಗೆಯ ಮೇರೆಗೆ ತರಗತಿ ಆರಂಭಿಸಲು ಮುಂದಾಗ್ತಿವೆ. ಇಂದು ಶೇ. 5-10 ಶಾಲೆಗಳು ಮಾತ್ರ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಿವೆ.

ನಗರದ ಮಲ್ಲೇಶ್ವರಂನಲ್ಲಿರುವ ಬೆಂಗಳೂರು ಎಜುಕೇಷನ್ ಸೊಸೈಟಿ ಶಾಲೆಯನ್ನು ಚಿಣ್ಣರಿಗಾಗಿ ಬಣ್ಣಬಣ್ಣದ ಬಲೂನುಗಳಿಂದ ಅಲಂಕರಿಸಿದ್ದರು. ಜೊತೆಗೆ, ಆಟಿಕೆಯನ್ನು ಜೋಡಿಸಿ ಮಕ್ಕಳನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಮೊದಲ ತರಗತಿಯಲ್ಲಿ ಕೋವಿಡ್ ಕುರಿತು ಪಾಠ ಮಾಡಿ ನಂತರ ಅವರಲ್ಲಿ ಭಯ ಹೋಗಲಾಡಿಸಲು ಕೆಲ ಆಟಗಳನ್ನು ಆಡಿಸಿದರು.

ಪೋಷಕರು ಓಕೆ ಅಂದರಷ್ಟೇ ಶಾಲೆಗೆ ಬರಲು ಅವಕಾಶ

ಮಕ್ಕಳನ್ನು ಶಾಲೆಗೆ ಕಳುಹಿಸುವ, ಬಿಡುವ ಸಂಪೂರ್ಣ ಸ್ವಾತಂತ್ರ್ಯವನ್ನು ಪೋಷಕರಿಗೆ ನೀಡಲಾಗಿದೆ. ಕೋವಿಡ್ ಭೀತಿ ಇದ್ದರೆ ಆನ್​ಲೈನ್ ಮೂಲಕವೇ ಪಾಠಕ್ಕೆ ವ್ಯವಸ್ಥೆ ಮಾಡಬಹುದು.‌ ಒಂದು ವೇಳೆ ಭೌತಿಕ ತರಗತಿಗೆ ಬರಲು ಇಚ್ಚಿಸಿದ್ದಲ್ಲಿ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ ಮಾಡಲಾಗಿದೆ.

ಮಗುವಿನ ಪೋಷಕರು-ಪಾಲಕರದ್ದು ಎರಡು ಡೋಸ್ ವ್ಯಾಕ್ಸಿನೇಷನ್‌ ಆಗಿರಬೇಕು. ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ವಾರದ 5 ದಿನಗಳು ಮಾತ್ರ ಶಾಲೆಗಳು ನಡೆಯಲಿದ್ದು, ಇನ್ನೆರಡು ದಿನ ಸ್ಯಾನಿಟೈಸ್ ಮಾಡಲು ಸಮಯ ಮೀಸಲಿಡಲಾಗಿದೆ.

ಬಾಗಲಕೋಟೆಯಲ್ಲಿ ಹೂ, ಚಾಕಲೇಟ್​, ಪೇಡಾ ನೀಡಿ ಸ್ವಾಗತ

ಬಾಗಲಕೋಟೆ ಜಿಲ್ಲೆಯಲ್ಲಿಯೂ ಸಹ ಎಲ್​ಕೆಜಿ, ಯುಕೆಜಿ ತರಗತಿ ಪ್ರಾರಂಭವಾಗಿದೆ. ಅಂಗನವಾಡಿಗಳ ಮುಂದೆ ರಂಗೋಲಿ ಹಾಕಿ, ಬಾಗಿಲಿಗೆ ಬಲೂನ್​ನಿಂದ ಸಿಂಗರಿಸಿ ಮಕ್ಕಳಿಗೆ ಸ್ವಾಗತ ಮಾಡಲಾಯಿತು.

ಜಿಲ್ಲೆಯಾದ್ಯಂತ 2,221 ಅಂಗನವಾಡಿಗಳು ಕೇಂದ್ರಗಳು ಇವೆ. ಎಲ್ಲವೂ ಇಂದಿನಿಂದ ಪ್ರಾರಂಭವಾಗಿದೆ. ಕೆಲ ಅಂಗನವಾಡಿ ಶಾಲೆಗಳಲ್ಲಿ ಮಕ್ಕಳಿಗೆ ಹೂ ನೀಡಿ ಸಿಬ್ಬಂದಿ ಬರಮಾಡಿಕೊಂಡರೆ, ಇನ್ನೂ ಕೆಲವೆಡೆ ಹೂ, ಚಾಕೊಲೇಟ್, ಪೇಡಾ ನೀಡಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಪಾಲಕರು ಮಾತನಾಡಿ, 'ಕಳೆದ ಎರಡು ವರ್ಷಗಳಿಂದ ಎಲ್ಲವೂ ಬಂದ್​ ಆಗಿದ್ದರಿಂದ ಸಾಕಷ್ಟು ತೊಂದರೆ ಉಂಟಾಗಿತ್ತು. ಮಕ್ಕಳು ಅಂಗನವಾಡಿಗೆ ಹೋಗದೆ ಮನೆಯಲ್ಲಿಯೇ ಇದ್ದು ಕಾಲ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿತ್ತು' ಎಂದರು.

ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೂಬಾಲನ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಭಾರತಿ ಬಣಕಾರ ಸೇರಿದಂತೆ ಇತರ ಅಧಿಕಾರಿಗಳು ಮುರನಾಳ ಪುನರ್​ ವಸತಿ ಕೇಂದ್ರದ ಅಂಗನವಾಡಿ ಶಾಲೆಗೆ ಭೇಟಿ ನೀಡಿದರು. ಮಕ್ಕಳಿಗೆ ಹೂವು ಹಾಗೂ ಪೆನ್ಸಿಲ್ ನೀಡಿ ಸ್ವಾಗತ ಮಾಡಿದರು.

ಇದನ್ನೂ ಓದಿ: ಎಲ್​ಕೆಜಿ, ಯುಕೆಜಿ ಪುನಾರಂಭ: ಕೊಪ್ಪಳದ ಶಾಲೆಗಳಲ್ಲಿ ಮಕ್ಕಳ ಕಲರವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.