ETV Bharat / state

ಬಾಗಲಕೋಟೆಯಲ್ಲಿ ಅದ್ಧೂರಿಯಾಗಿ ಜರುಗಿದ ಲಕ್ಷ ದೀಪೋತ್ಸವ - Laksha deepotsava at Bagalkot

ಅಂಬಾಭವಾನಿ ದೇವಸ್ಥಾನದಲ್ಲಿ ಭಾವಸಾರ ಶಕ್ತಿ ಮಹಿಳಾ ಮಂಡಳಿ ವತಿಯಿಂದ ಲಕ್ಷ ದೀಪೋತ್ಸವ ಅದ್ಧೂರಿಯಾಗಿ ಜರುಗಿತು.

Laksha deepotsava at Bagalkot
ಬಾಗಲಕೋಟೆಯಲ್ಲಿ ಅದ್ಧೂರಿಯಾಗಿ ಜರುಗಿದ ಲಕ್ಷ ದೀಪೋತ್ಸವ
author img

By

Published : Dec 15, 2019, 7:06 AM IST

ಬಾಗಲಕೋಟೆ: ನವನಗರದ 50 ಸೆಕ್ಟರ್​ನಲ್ಲಿರುವ ಭಾವಸಾರ ಕ್ಷತ್ರೀಯ ಸಮಾಜದ ಅಂಬಾಭವಾನಿ ದೇವಸ್ಥಾನದಲ್ಲಿ ಭಾವಸಾರ ಶಕ್ತಿ ಮಹಿಳಾ ಮಂಡಳಿ ವತಿಯಿಂದ ಲಕ್ಷ ದೀಪೋತ್ಸವ ಅದ್ಧೂರಿಯಾಗಿ ಜರುಗಿತು.

ಪ್ರತಿ ವರ್ಷವೂ ನಡೆಯುವ ದೀಪೋತ್ಸವದಲ್ಲಿ ಈ ಬಾರಿ ಸಮಾಜದ ಹಲವಾರು ಮಹಿಳೆಯರು ವಿವಿಧ ರಂಗೋಲಿಗಳ ಚಿತ್ತಾರ ಮೂಡಿಸಿ, ಆ ರಂಗೋಲಿಗಳಲ್ಲಿ ದೀಪಗಳನ್ನು ಬೆಳಗಿ ಸಂಭ್ರಮಪಟ್ಟರು. ದೇವಸ್ಥಾನ ಹಾಗೂ ದೇವಸ್ಥಾನದ ಪ್ರಾಂಗಣದಲ್ಲಿರುವ ಎರಡು ದೊಡ್ಡ ಮಂಗಲ ಕಾರ್ಯಾಲಯ ಹಾಗೂ ಹೊರಗಡೆ, ಶಂಖ, ಚಕ್ರ, ಗಧೆ, ನವಿಲು, ಕಮಲ ಸೇರಿದಂತೆ ವಿವಿಧ ಹೂಗಳ ಆಕೃತಿಯ ರಂಗೋಲಿಯ ಚಿತ್ತಾರ ಹಾಕಿದ ಮಹಿಳೆಯರು, ನಂತರ ಅದರ ಮೇಲೆ ದೀಪಗಳನ್ನು ಬೆಳಗಿದರು.

ದೀಪೋತ್ಸವದ ಅಂಗವಾಗಿ ಅಂಬಾಭವಾನಿ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವರಿಗೆ ಅಭಿಷೇಕ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ನೂರಾರು ಮಹಿಳೆಯರು ದೀಪೋತ್ಸವದಲ್ಲಿ ಭಾಗಿಯಾಗಿ ದೀಪಗಳನ್ನು ಬೆಳಗಿ ಭಕ್ತಿ ಸಮರ್ಪಿಸಿದರು.

Intro:AnchorBody:ಬಾಗಲಕೋಟೆ--ನವನಗರದ 50 ಸೆಕ್ಟರ್‍ನಲ್ಲಿರುವ ಭಾವಸಾರ ಕ್ಷತ್ರೀಯ ಸಮಾಜದ ಅಂಬಾಭವಾನಿ ದೇವಸ್ಥಾನದಲ್ಲಿ ಭಾವಸಾರ ಶಕ್ತಿ ಮಹಿಳಾ ಮಂಡಳಿ ವತಿಯಿಂದ ಲಕ್ಷ ದೀಪೋತ್ಸವ ಅದ್ಧೂರಿಯಾಗಿ, ವೈಶಿಷ್ಠ್ಯಪೂರ್ಣವಾಗಿ ಜರುಗಿತು.
ಪ್ರತಿ ವರ್ಷವೂ ನಡೆಯುವ ದೀಪೋತ್ಸವದಲ್ಲಿ ಈ ಬಾರಿ ಸಮಾಜದ ಹಲವಾರು ಮಹಿಳೆಯರು ವಿವಿಧ ರಂಗೋಲಿಗಳ ಚಿತ್ತಾರ ಮೂಡಿಸಿ, ಆ ರಂಗೋಲಿಗಳಲ್ಲಿ ದೀಪಗಳನ್ನು ಬೆಳಗಿ ಸಂಭ್ರಮಪಟ್ಟರು.
ದೇವಸ್ಥಾನ ಹಾಗೂ ದೇವಸ್ಥಾನದ ಪ್ರಾಂಗಣದಲ್ಲಿರುವ ಎರಡು ದೊಡ್ಡ ಮಂಗಲ ಕಾರ್ಯಾಲಯ ಹಾಗೂ ಹೊರಗಡೆ, ಶಂಖ, ಚಕ್ರ, ಗಧೆ, ನವಿಲು, ಕಮಲ ಸೇರಿದಂತೆ ವಿವಿಧ ಹೂಗಳ ಆಕೃತಿಯ ರಂಗೋಲಿಯ ಚಿತ್ತಾರ ಹಾಕಿದ ಮಹಿಳೆಯರು, ನಂತರ ಅದರ ಮೇಲಿ ದೀಪಗಳನ್ನು ಬೆಳಗಿದರು. ರಂಗೋಲಿಯ ಚಿತ್ತಾರವೂ ಕಣ್ಮನಸೆಳೆಯಿತು.
ದೀಪೋತ್ಸವದ ಅಂಗವಾಗಿ ಅಂಬಾಭವಾನಿ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವರಿಗೆ ಅಭಿಷೇಕ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ನೂರಾರು ಮಹಿಳೆಯರು ದೀಪೋತ್ಸವದಲ್ಲಿ ಭಾಗಿಯಾಗಿ ದೀಪಗಳನ್ನು ಬೆಳಗಿ ಭಕ್ತಿ ಸಮರ್ಪಿಸಿದರು.
ಮಹಿಳಾ ಮಂಡಳಿಯ ಮುಖಂಡರಾದ ಸಂಧ್ಯಾ ಅಂಬಾದಾಸ ವಡೆ, ವಿದ್ಯಾ ಹೆಬ್ಬಾರೆ, ಸುಮಿತ್ರಾ ಲಾತೂರಕರ, ಉಮಾ ಲಾತೂರಕರ, ಆಶಾ ಕರ್ಣೆ ಮೊದಲಾದವರು ದೀಪೋತ್ಸವದ ನೇತೃತ್ವ ವಹಿಸಿದ್ದರು.
ನ್ಯಾಯವಾದಿ ಅನಿತಾ ಛಬ್ಬಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಚಂದ್ರಕಾಂತ ತೇಲಕರ ಅಧ್ಯಕ್ಷತೆ ವಹಿಸಿದ್ದರು.Conclusion:E-TV-Bharat-Bagalkote
ETV Bharat Logo

Copyright © 2025 Ushodaya Enterprises Pvt. Ltd., All Rights Reserved.