ETV Bharat / state

ಊಟದ ಜೊತೆ ಪರಿಸರ ಪಾಠ, ಗ್ರಾಹಕರಿಗೆ ಗಿಡ ನೀಡುವ ಹೊಟೇಲ್! - Kannada news

ಹೊಟೇಲ್‌ಗೆ ಬರುವ ಗ್ರಾಹಕರಿಗೆ ಸಸಿ ನೀಡುವ ಮೂಲಕ ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಪರಿಸರ ದಿನಾಚರಣೆ ಅಂಗವಾಗಿ ಗ್ರಾಹಕರಿಗೆ ಸಸಿ ಉಡುಗೂರೆ
author img

By

Published : Jun 8, 2019, 9:45 PM IST

ಬಾಗಲಕೋಟೆ : ಗಿಡ ನೆಟ್ಟು ಪರಿಸರ ದಿನಾಚರಣೆ ಆಚರಣೆ ಮಾಡುವುದು ಕಾಮನ್. ಆದ್ರೆ, ಇಲ್ಲೊಂದು ಹೊಟೇಲಿನಲ್ಲಿ ಗ್ರಾಹಕರಿಗೆ ಸಸಿ ನೀಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿ ಮರ ಬೆಳೆಸಿ ಹಸಿರು ಉಳಿಸಿ ಎಂಬ ಸಂದೇಶ ಸಾರಲಾಗುತ್ತಿದೆ.

ನಗರದ ವಿದ್ಯಾಗಿರಿ ಪ್ರದೇಶದ ಪಕವಾನ್ ಎಂಬ ಹೊಟೇಲ್ ಮಾಲೀಕ ಪವನ್ ಸೀಮೆಕೇರಿ, ಗ್ರಾಹಕರನ್ನು ಸೆಳೆಯುವ ಜೊತೆಗೆ ಪರಿಸರ ದಿನಾಚರಣೆ ಅಂಗವಾಗಿ ಗ್ರಾಹಕರಿಗೆ ಸಸಿ ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಪರಿಸರ ದಿನಾಚರಣೆ ಅಂಗವಾಗಿ ಗ್ರಾಹಕರಿಗೆ ಸಸಿ ಉಡುಗೂರೆ

ಸಂಪೂರ್ಣ ಸಸ್ಯಹಾರಿ ಆಹಾರ ಒದಗಿಸುವ ಈ ಹೊಟೇಲ್, ಶುಚಿರುಚಿಗೆ ಹೆಸರುವಾಸಿಯಾಗಿದೆ. ವಿಶೇಷ ಅಂದ್ರೆ, ಪರಿಸರ ದಿನಾಚರಣೆ ಅಂಗವಾಗಿ ಗ್ರಾಹಕರಿಗೆ ಸಸಿ ವಿತರಣೆ ಮಾಡುವ ಜೊತೆಗೆ, ಪಾರ್ಸಲ್ ತೆಗೆದುಕೊಂಡು ಹೋಗುವ ಗ್ರಾಹಕರಿಗೆ ಹಾಗೂ ಆನ್‌ಲೈನ್ ಮೂಲಕ ಆಹಾರ ಬುಕ್ ಮಾಡಿದ ಗ್ರಾಹಕರಿಗೂ ಸಿಬ್ಬಂದಿ ಮೂಲಕ ಸಸಿಯನ್ನು ನೀಡುತ್ತಾರೆ.

Intro:Anchor

Body:ಪರಿಸರ ದಿನಾಚರಣೆ ಅಂಗವಾಗಿ ಕೇವಲ ಸರ್ಕಾರ ಅಧಿಕಾರಿಗಳು ಮಾತ್ರ ಸಸಿ ನಡೆಸುವ ಬಗ್ಗೆ ಜಾಗೃತ ಮೂಡಿಸಿದರೆ ಹೆಚ್ಚು ಪರಿಣಾಮಕಾರಿ ಬೀರಲ್ಲ.ಅದರ ಜೊತೆಗೆ ಹೋಟೆಲ್‌ ಗಳಲ್ಲಿ ಮತ್ತು ಸಾರ್ವಜನಿಕರು ಹೆಚ್ಚು ಗಮನ ಸೆಳೆಯುವಂತಾದರೆ ಅರ್ಥ ಪೂರ್ಣ ಆಗಲಿದೆ.
ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಯ ವಿದ್ಯಾಗಿರಿ ಪ್ರದೇಶದಲ್ಲಿರುವ ಪಕವಾನ್ ಎಂಬುವ ಹೋಟೆಲ್ ನ ಪವನ ಸೀಮೆಕೇರಿ ಎಂಬುವ ಮಾಲಕರು ಗ್ರಾಹಕರಿಗೆ ಸೆಳೆಯುವ ದೃಷ್ಟಿಯಿಂದ ಹಾಗೂ ಸಾಮಾಜಿಕ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಹೋಟೆಲ್ ಗೆ ಬರುವ ಗ್ರಾಹಕರಿಗೆ ಸಸಿ ನೀಡುವ ಮೂಲಕ ಮರಗಳು ಬೆಳೆಸಿ ಹಸಿರು ಉಳಿಸಿ ಎಂಬ ಸಂದೇಶ ಸಾರುತ್ತಿದ್ದಾರೆ.
ಸಂಪೂರ್ಣ ಸಸ್ಯಹಾರಿ ಇರುವ ಹೋಟೆಲ್ ಶುಚಿ ಮತ್ತು ರುಚಿಗೆ ಹೆಚ್ಚು ಹೆಸರುವಾಸಿಯಾಗಿದೆ. ಉತ್ತರ ಭಾರತ್,ದಕ್ಷಿಣ ಭಾರತ ಆಹಾರ ಸೇರಿದಂತೆ, ಉಪಹಾರ ಹಾಗೂ ಚೈನೀಸ್ ತಿಂಡಿದ ಸಹ ದೂರೆಯುತ್ತದೆ.
ಮುಳಗಡೆ ನಗರವಾಗಿದ್ದರೂ ಬೆಂಗಳೂರಿನಂತಹ ಹೈಟೆಕ್ ಮಾದರಿಯಲ್ಲಿ ಹೋಟೆಲ್ ನಿರ್ಮಾಣ ಮಾಡಿದ್ದು,ಹೋಟೆಲ್ ಗ್ರಾಹಕರು ಆಗಮಿಸುತ್ತಿದ್ದಂತೆ ಪರಿಸರ ಅಂದರೆ ಹಸಿರಿನ ವಿವಿಧ ಸಸಿಗಳ ಸೌಂದರ್ಯ ಗಳ ಮೂಲಕ ಗ್ರಾಹಕರ ನ್ನು ಸ್ವಾಗತಿಸುತ್ತೇವೆ.
ಒಳಗಡೆ ಚಿಕ್ಕ ಮಕ್ಕಳ ಸೆಳೆಯುವ ಏಕಗೇರ ಚಿತ್ರಕಲೆ ಹಾಗೂ ಪೇಟಿಂಗ್ ಮತ್ತು ಲೈಟಿಂಗ್ ನೋಡಿದರೆ ಮುಳಗಡೆ ನಗರವು ಅಥವಾ ಬೆಂಗಳೂರು, ಬಾಂಬೆ ದಂತಹ ಬೃಹತ್ ನಗರಕ್ಕೆ ಬಂದಿದ್ದೇವೆ ಎಂದು ಭಾಸ ಆಗುತ್ತದೆ.
ಸೀಮೆಕೇರಿ ಎಂಬುವ ಹೋಟೆಲ್ ಮಾಲಕರು ಸಾಮಾಜಿಕ ಸೇವೆ ಎಂದು ಪರಿಸರ ದಿನಾಚರಣೆ ಅಂಗವಾಗಿ ಗ್ರಾಹಕರಿಗೆ ಸಸಿ ವಿತರಣೆ ಮಾಡುವ ಜೊತೆಗೆ ಪಾರ್ಸಲ್ ತೆಗೆದುಕೊಂಡು ಹೋಗುವ ಗ್ರಾಹಕರಿಗೆ ಹಾಗೂ ಆನ್ ಲೈನ್ ಮೂಲಕ ಬುಕ್ ಮಾಡಿದ ಗ್ರಾಹಕರಿಗೂ ಸಹ ತಮ್ಮ ಸಿಬ್ಬಂದಿಗಳ ಮೂಲಕ ಪಾರ್ಸಲ್ ಜೊತೆಗೆ ಸಸಿಯನ್ನು ನೀಡುತ್ತಾರೆ.ಆರ್ಡರ್‌ ಹೇಳಿದವರ ಮನೆ ಮುಂದೆ ಸಸಿ ನೆಟ್ಟು ಬೆಳೆಸುವಂತೆ ಪ್ರೇರಣೆ ನೀಡುತ್ತಾರೆ.
ಈ ಮೂಲಕ ಕೇವಲ ತಮ್ಮ ಲಾಭವನ್ನು ನೋಡದೆ,ಗ್ರಾಹಕರಿಗೆ ಅನುಕೂಲ ಅಲ್ಲದೆ ಪರಿಸರ ಕಾಳಜಿ ಬೆಳೆಸಿ,ಸಾಮಾಜಿಕ ಸೇವೆಯಲ್ಲಿ ನಿರತರಾಗಿ ಗಮನ ಸೆಳೆಯುತ್ತಿದ್ದಾರೆ.

Conclusion:ಆನಂದ
ಈ ಟಿವಿ,ಭಾರತ್,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.