ETV Bharat / state

ಬಾಗಲಕೋಟೆ ಜಿಲ್ಲಾದ್ಯಂತ ಭಾರಿ ಮಳೆ: ಮನೆಗಳು ಕುಸಿದು ಬೀದಿ ಪಾಲಾದ ಜನ

ಬಾಗಲಕೋಟೆ ಜಿಲ್ಲಾದ್ಯಂತ ಸುರಿದ ಭಾರಿ ಮಳೆಗೆ ಅವಾಂತರ ಸೃಷ್ಟಿಯಾಗಿದ್ದು, ಮನೆಗಳು ಕುಸಿದು, ಜಮೀನುಗಳಿಗೆ ನೀರು ನುಗ್ಗಿ ಜನ ಸಂಕಷ್ಟಕ್ಕೀಡಾಗಿದ್ದಾರೆ.

author img

By

Published : Oct 1, 2020, 4:55 PM IST

Heavy Rain in Bagalkot District
ಮಳೆ ಅವಾಂತರಕ್ಕೆ ಬೀದಿ ಪಾಲಾದ ಜನ

ಬಾಗಲಕೋಟೆ : ಜಿಲ್ಲಾದ್ಯಂತ ಸುರಿದ ಭಾರಿ ಮಳೆಗೆ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಕೆಲವೆಡೆ ಮನೆಗಳು ಕುಸಿದು ಜನ ಜೀವನ ಅಸ್ತವ್ಯಸ್ತವಾಗಿದೆ.

ಇಳಕಲ್​ ತಾಲೂಕಿನ ಓತಗೇರಿ ಗ್ರಾಮದಲ್ಲಿ ಮಳೆಗೆ ಮನೆಗಳು ಕುಸಿದು ಜನ ಬೀದಿ ಪಾಲಾಗಿದ್ದಾರೆ. ಬಾಗಲಕೋಟೆ ತಾಲೂಕಿನ ಮನ್ನಿಕಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿಯೂ ಭಾರಿ ಹಾನಿ ಉಂಟಾಗಿದೆ.

ಮಳೆ ಅವಾಂತರಕ್ಕೆ ಬೀದಿ ಪಾಲಾದ ಜನ

ಜಿಲ್ಲಾಡಳಿತ ಮಾಡಿದ ಮಳೆ ಹಾನಿ ಸರ್ವೆಯ ಪ್ರಕಾರ, ಜಿಲ್ಲಾದ್ಯಂತ ಒಟ್ಟು 760 ಮನೆಗಳು ಭಾಗಶಃ ಕುಸಿದಿದ್ದು, ಹತ್ತಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಕುಸಿದಿದೆ. ಜಿಲ್ಲಾದ್ಯಂತ ಸಾವಿರಾರು ಹೆಕ್ಟೇರ್ ಕೃಷಿ ಜಮೀನು ಜಲಾವೃತವಾಗಿದ್ದು, ಬೆಳೆ ಹಾನಿ ಸರ್ವೆ ಕಾರ್ಯ ಮುಂದುವರೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಸಿದು ಬಿದ್ದ ಮನೆಗಳಿಗೆ ಎಸ್​ಡಿಆರ್​ಎಫ್ ಅನುಸಾರ ಪರಿಹಾರ‌ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.