ETV Bharat / state

ನೂತನ ಗ್ರಾಪಂ ಸದ್ಯಸರ ಸನ್ಮಾನ.. ಸಿದ್ದರಾಮಯ್ಯ ವಿರುದ್ಧ ಹೊಸ ಮೆಂಬರ್‌ ಅಸಮಾಧಾನ

ಸಂಗಣ್ಣ ಅವರನ್ನು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಸಮಾಧಾನ ಪಡಿಸಲು ಮುಂದಾದರು. ಸಮಾಧಾನಗೊಳ್ಳದೆ ಇನ್ನು ಸಮಸ್ಯೆ ಹೇಳುತ್ತಿರುವ ಸಂಗಣ್ಣ ಅವರನ್ನು ಸಿದ್ದರಾಮಯ್ಯ ಅವರು ವೇದಿಕೆಯಿಂದ ಕೆಳಗೆ ಇಳಿಸಿದರು..

Bagalkot
ಸಿದ್ದರಾಮಯ್ಯ ವಿರುದ್ದ ನೂತನ ಗ್ರಾಪಂ ಸದಸ್ಯನ ಅಸಮಾಧಾನ
author img

By

Published : Jan 4, 2021, 3:35 PM IST

ಬಾಗಲಕೋಟೆ : ಬಾದಾಮಿ ಪಟ್ಟಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಕಾರ್ಯಕರ್ತರೊಬ್ಬರು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧವೇ ಅಸಮಾಧಾನ ಹೊರ ಹಾಕಿದ ಘಟನೆ ನಡೆದಿದೆ. ಈ ಹಿನ್ನೆಲೆ ಕೆಲ ಕಾಲ ಗೊಂದಲದ ವಾತಾವರಣ ಉಂಟಾಯಿತು.

ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯತ್‌ ಸದ್ಯಸರ ಸನ್ಮಾನ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಆಸನದಿಂದ ಎದ್ದು ಬಂದ ಸಿದ್ದರಾಮಯ್ಯ ಅವರು ನೂತನ ಸದಸ್ಯನ ಮಾತು ತಡೆದು ವೇದಿಕೆಯಿಂದ ಕೆಳಗೆ ಇಳಿಸಿದರು. ಬಾದಾಮಿ ತಾಲೂಕಿನ ಕಿತ್ತಲಿ ಗ್ರಾಮದ ನಿವಾಸಿ ಸಂಗಣ್ಣ ಜಾಬಣ್ಣವರ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ.

ತಮ್ಮ ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಯಾರೂ ಸಹ ಹಳ್ಳಿ ಭಾಗದ ಕಡೆಗೆ ಬಂದಿಲ್ಲ. ನಮ್ಮ ಗ್ರಾಮದ ಆಶ್ರಯ ಮನೆಗಳು ಹಾಳಾಗಿವೆ. ಸಿದ್ದಾರಾಮಯ್ಯ ಅವರು ಬಂದು ಹೋದರು, ಆ ಕಾಮಗಾರಿ ಸರಿಯಾಗಿಲ್ಲ ಎಂದು ದೂರಿದರು.

ಸಿದ್ದರಾಮಯ್ಯ ವಿರುದ್ದ ನೂತನ ಗ್ರಾಪಂ ಸದಸ್ಯನ ಅಸಮಾಧಾನ

ಹಳ್ಳಿಗಳ ಕಡೆಗೆ ಬಂದು ಜನರ ಸಮಸ್ಯೆಯನ್ನ ಆಲಿಸಬೇಕು ಎಂದು ಹೇಳುತ್ತಾರೆ. ಕಾಂಗ್ರೆಸ್ ದೊಡ್ಡ ಪಕ್ಷ. ಹುಡುಗಾಟ ಮಾಡುತ್ತಿದ್ದೀರಾ ಎಂದು ಸ್ಥಳೀಯ ಮುಖಂಡರನ್ನ ತಾರಾಟೆಗೆ ತಗೆದುಕೊಳ್ಳಲು ಮುಂದಾದಾಗ ಸಂಗಣ್ಣನ ವಿರುದ್ದ ಕೆಲವರ ವಿರೋಧ ವ್ಯಕ್ತಪಡಿಸಿದರು. ಸಂಗಣ್ಣ ಜಾಬಣ್ಣವರ ಮಾತು ಕೇಳಿ ಸಿದ್ದರಾಮಯ್ಯನವರು ಸಹ ಗರಂ ಆದರು.

ಓದಿ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಆಮಿಷ, ಬೆದರಿಕೆ ಒಡ್ಡಿ ಬಿಜೆಪಿ ಸೆಳೆಯುತ್ತಿದೆ: ಸಿದ್ದರಾಮಯ್ಯ ಆರೋಪ

ಸಂಗಣ್ಣ ಅವರನ್ನು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಸಮಾಧಾನ ಪಡಿಸಲು ಮುಂದಾದರು. ಸಮಾಧಾನಗೊಳ್ಳದೆ ಇನ್ನು ಸಮಸ್ಯೆ ಹೇಳುತ್ತಿರುವ ಸಂಗಣ್ಣ ಅವರನ್ನು ಸಿದ್ದರಾಮಯ್ಯ ಅವರು ವೇದಿಕೆಯಿಂದ ಕೆಳಗೆ ಇಳಿಸಿದರು.

ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಎಸ್​.ಆರ್.ಪಾಟೀಲ, ಎಂಎಲ್​ಸಿ ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ, ಹೆಚ್.ವೈ.ಮೇಟಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.