ETV Bharat / state

ರಾಮ ಮಂದಿರಕ್ಕೆ ಬರುತ್ತಿರುವುದು 'ಏಕ್ ನಂಬರ್ ದೋ ನಂಬರ್ ದುಡ್ಡಲ್ಲ' : ಹೆಚ್​​ಡಿಕೆಗೆ ಈರಣ್ಣ ಕಡಾಡಿ ಟಾಂಗ್​ - Ernanna Kdadi slams HDK

ರಾಮ ಮಂದಿರ ದೇಣಿಗೆ ಸಂಗ್ರಹದ ವೇಳೆ 20 ಸಾವಿರಕ್ಕಿಂತ ಹೆಚ್ಚಿನ ದುಡ್ಡನ್ನು ಚೆಕ್​ ಮೂಲಕ ಪಡೆಯಲಾಗ್ತಿದೆ. ಇದು ಯಾವುದೋ ಏಕ್ ನಂಬರ್ ದೋ ನಂಬರ್​ ದುಡ್ಡಲ್ಲ ಎಂದು ಕುಮಾರಸ್ವಾಮಿ ಹೇಳಿಕೆಗೆ ಈರಣ್ಣ ಕಡಾಡಿ ತಿರುಗೇಟು ನೀಡಿದ್ದಾರೆ.

Ernanna Kdadi reaction on HDK statement
ರಾಜ್ಯಸಭೆ ಸದಸ್ಯ ಈರಣ್ಣ
author img

By

Published : Feb 19, 2021, 5:58 PM IST

Updated : Feb 19, 2021, 7:03 PM IST

ಬಾಗಲಕೋಟೆ : ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಕಾನೂನುಗಳು ರೈತ ವಿರೋಧಿಯಲ್ಲ. ಕಾನೂನು ಕುರಿತು ರೈತರಿಗೆ ಇರುವ ಗೊಂದಲಗಳಿಗೆ ಪರಿಹಾರ ಕಂಡುಕೊಂಡರೆ ಸೂಕ್ತ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.

ಜಮಖಂಡಿ ಪಟ್ಟಣದಲ್ಲಿ ಕೇಂದ್ರ ಸರ್ಕಾರದ ಕೃಷಿ ನೀತಿ ಕುರಿತ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರ ಜೊತೆ 11 ಬಾರಿ ಮಾತುಕತೆ ನಡೆಸಿದೆ. ಈ ವೇಳೆ ಕೃಷಿ ಕಾನೂನಗಳಲ್ಲಿರುವ ವಿರೋಧಿ ಅಂಶವನ್ನು ತಿಳಿಸಲು ರೈತರು ವಿಫಲರಾಗಿದ್ದಾರೆ. ರೈತರ ಹೋರಾಟದಿಂದ ಜನ ಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದರು.

ರಾಜ್ಯಸಭೆ ಸದಸ್ಯ ಈರಣ್ಣ

ದೇಶದ ಜನರಿಗೆ ವಿರೋಧ ಪಕ್ಷಗಳು ಉತ್ತರ ಕೊಡಬೇಕಾಗುತ್ತದೆ. ಕೇವಲ ಗಲಾಟೆ ಮಾಡಿ ಜನರ ಗಮನ ಸೆಳೆದು ಅಧಿಕಾರ ನಡೆಸುವುದು ಹೆಚ್ಚು ದಿನ ನಡೆಯಲ್ಲ. ಜನ ನಿಮ್ಮನ್ನು ಯಾವ ಸ್ಥಾನಕ್ಕೆ ಒಯ್ಯಬೇಕೋ, ಅಲ್ಲಿಗೆ ಒಯ್ದಿದ್ದಾರೆ. ಈಗಲಾದ್ರೂ ಅರ್ಥೈಸಿಕೊಂಡು ಕಾನೂನುಗಳನ್ನು ಬೆಂಬಲಿಸಿ. ದೇಶದ ಅಭಿವೃದ್ಧಿ, ರೈತರ ಆರ್ಥಿಕ ಚೇತರಿಕೆಗೆ ಅನುಕೂಲ ಮಾಡಿಕೊಡಿ. ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ರೈತರಲ್ಲ. ಕೆಲವು ರೈತರಿದ್ದಾರೆ, ಆ ರೈತರ ಹೋರಾಟವನ್ನು ಹೈಜಾಕ್ ಮಾಡುವ ಕೆಲಸ ನಡೆದಿದೆ. ಪ್ರತಿಪಕ್ಷಗಳು ಈ ಕೆಲಸವನ್ನು ಮಾಡುತ್ತಿವೆ ಎಂದು ಹೇಳಿದರು.

ರಾಮ ಮಂದಿರ ದೇಣಿಗೆ ಸಂಗ್ರಹ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅಧಿಕಾರಿ ಇಲ್ಲದೇ ನೀರಿನಿಂದ ಹೊರ ಬಂದ ಮೀನಿನಂತಾಗಿದ್ದಾರೆ. ಹೀಗಾಗಿ ಅವರ ತಲೆಗೆ ಏನು ಬರುತ್ತೋ ಅದನ್ನೇ ಮಾತನಾಡುತ್ತಿದ್ದಾರೆ. ಶ್ರೀರಾಮ ಈ ದೇಶದ ಮರ್ಯಾದ ಪುರೋಷತ್ತಮ, ನಮಗೆಲ್ಲರಿಗೂ ಆದರ್ಶ. ಅಲ್ಲಿ ರಾಮ ಮಂದಿರ ನಿರ್ಮಾಣ ಅಗಬೇಕು ಎಂದು ಜನರಿಗೆ ಕನಸಿತ್ತು. ರಾಮ ಮಂದಿರ ನಿರ್ಮಾಣ ಮಾಡುವುದರ ಹಿಂದೆ 500 ವರ್ಷಗಳ ಇತಿಹಾಸವಿದೆ. ಹೀಗಾಗಿ, ದೇಶದ ಜನ ಅಪ್ರಬುದ್ಧರಲ್ಲ ಕುಮಾರಸ್ವಾಮಿ ತಮ್ಮ ಮಾತು ವಾಪಸ್ ತೆಗೆದುಕೊಳ್ಳಬೇಕು ಎಂದರು.

ರಾಮ ಮಂದಿರ ನಿರ್ಮಾಣವನ್ನು ಒಬ್ಬರೇ ಮಾಡಬಹುದಿತ್ತು. ಆದರೆ, ದೇಶದ ಎಲ್ಲಾ ಜನರ ಪಾಲು ಅದರಲ್ಲಿ ಇರಬೇಕು ಎಂಬ ಉದ್ದೇಶದಿಂದ ದೇಣಿಗೆ ಸಂಗ್ರಹ ಮಾಡಲಾಗ್ತಿದೆ. ದೇಣಿಗೆ ಸಂಗ್ರಹದ ವೇಳೆ 20 ಸಾವಿರಕ್ಕಿಂತ ಹೆಚ್ಚಿನ ದುಡ್ಡನ್ನು ಚೆಕ್​ ಮೂಲಕ ಪಡೆಯಲಾಗ್ತಿದೆ. ಇದು ಯಾವುದೋ ಏಕ್ ನಂಬರ್ ದೋ ನಂಬರ್​ ದುಡ್ಡಲ್ಲ ಎಂದು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

Last Updated : Feb 19, 2021, 7:03 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.