ETV Bharat / state

ಗುಳೇದಗುಡ್ಡ ಪುರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ : ಸಿದ್ದರಾಮಯ್ಯ ಮುಂದೆ ಕಣ್ಣೀರಿಟ್ಟ ಮಹಿಳೆ

ನನ್ನ ಪತಿ ಕಳೆದ ಆರು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ ಎಂದು ನೆನೆದು ಕಣ್ಣೀರು ಹಾಕಿದರು. ಅಧಿಕಾರ ಬಂದಿದೆ. ಆದರೆ, ಇದನ್ನು ನೋಡಲು ಪತಿಯೇ ಇಲ್ಲವೆಂದು ಯಲ್ಲವ್ವ ಗೌಡರ ಕಣ್ಣೀರು ಹಾಕಿದರು. ಈ ಸಮಯದಲ್ಲಿ ಸಿದ್ದರಾಮಯ್ಯ ಅವರನ್ನ ಸಮಾಧಾನ ಪಡಿಸಿದರು..

author img

By

Published : Jan 24, 2022, 5:22 PM IST

ಸಿದ್ದರಾಮಯ್ಯ ಮುಂದೆ ಕಣ್ಣೀರಿಟ್ಟ ಮಹಿಳೆ
ಸಿದ್ದರಾಮಯ್ಯ ಮುಂದೆ ಕಣ್ಣೀರಿಟ್ಟ ಮಹಿಳೆ

ಬಾಗಲಕೋಟೆ : ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಗುಳೇದಗುಡ್ಡ ಹಾಗೂ ಬಾದಾಮಿ ಪಟ್ಟಣದಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಧಿಕಾರ ಇರುವ ಪುರಸಭೆಯಲ್ಲಿ ನಿರೀಕ್ಷೆಯಂತೆ ಅಧ್ಯಕ್ಷರಾಗಿ ಕಾಂಗ್ರೆಸ್​​ನ ಯಲ್ಲವ್ವ ಗೌಡರ ಹಾಗೂ ಉಪಾಧ್ಯಕ್ಷರಾಗಿ ನಾಗರತ್ನ ಲಕ್ಕುಂಡಿ ಅವರನ್ನ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದೆ ಕಣ್ಣೀರಿಟ್ಟ ಮಹಿಳೆ..

ಜೆಡಿಎಸ್ ಪಕ್ಷದ ಸದಸ್ಯರ ಬಹುಮತ ಇಲ್ಲವಾದರೂ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕರಾದ ಹಿನ್ನೆಲೆ ಅವರ ಸಮ್ಮುಖದಲ್ಲಿ ಆಯ್ಕೆಯ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಘೋಷಣೆ ಮಾಡಿದ ಬಳಿಕ ಯಲ್ಲವ್ವ ಗೌಡರ ಸಿದ್ದರಾಮಯ್ಯನವರ ಸಮ್ಮುಖದಲ್ಲಿ ಕಣ್ಣೀರು ಹಾಕಿದ ಘಟನೆ ನಡೆಯಿತು.

ನನ್ನ ಪತಿ ಕಳೆದ ಆರು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ ಎಂದು ನೆನೆದು ಕಣ್ಣೀರು ಹಾಕಿದರು. ಅಧಿಕಾರ ಬಂದಿದೆ. ಆದರೆ, ಇದನ್ನು ನೋಡಲು ಪತಿಯೇ ಇಲ್ಲವೆಂದು ಯಲ್ಲವ್ವ ಗೌಡರ ಕಣ್ಣೀರು ಹಾಕಿದರು. ಈ ಸಮಯದಲ್ಲಿ ಸಿದ್ದರಾಮಯ್ಯ ಅವರನ್ನ ಸಮಾಧಾನ ಪಡಿಸಿದರು.

ನಂತರ ಸಿದ್ದರಾಮಯ್ಯ ನೂತನವಾಗಿ ಆಯ್ಕೆ ಆದ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೂ ಮಾಲೆ ಹಾಕಿ ಸನ್ಮಾಸಿನಿದರು. ಒಟ್ಟು 23 ಸ್ಥಾನಗಳ ಪೈಕಿ 16 ಕಾಂಗ್ರೆಸ್ ಸದಸ್ಯರು, ಐದು ಜೆಡಿಎಸ್ ಸದಸ್ಯರು, ಇಬ್ಬರು ಬಿಜೆಪಿ ಪಕ್ಷದ ಸದಸ್ಯರು ಆಯ್ಕೆಯಾಗಿದ್ದರು.

ಇದೇ ಸಮಯದಲ್ಲಿ ಜೆಡಿಎಸ್ ಸದಸ್ಯರು ಪುರಸಭೆಯ ಸಿಬ್ಬಂದಿ ಕೊರತೆಯ ಬಗ್ಗೆ ಗಮನ ಹರಿಸಿದಾಗ, ಸಚಿವ ಎಂಟಿಬಿ ನಾಗರಾಜ್​​ಗೆ ಮಾಜಿ ಸಿಎಂ ಸಿದ್ದರಾಮಯ್ಯ ಕರೆ ಮಾಡಿದರು. ಪುರಸಭೆಯಲ್ಲಿ ‌ಜೆಡಿಎಸ್ ಬೆಂಬಲ ಬೆನ್ನಲ್ಲೆ ಮೊದಲ ದಿನವೇ ಜೆಡಿಎಸ್ ಸದಸ್ಯರ ಬೇಡಿಕೆಗೆ ಸಿದ್ದರಾಮಯ್ಯ ಸ್ಪಂದಿಸಿದರು. ಗುಳೇದಗುಡ್ಡ ಪುರಸಭೆಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇದೆ. ಅದನ್ನು ಈ ಕೂಡಲೇ ಭರ್ತಿ ಮಾಡುವಂತೆ ಸಚಿವ ಎಂಟಿಬಿ ನಾಗರಾಜ್ ಅವರಿಗೆ ಸೂಚಿಸಿದರು‌.

ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.