ETV Bharat / state

ಶಿವಾಜಿ‌ ಮೂರ್ತಿ ವಿವಾದ: ನಾಳೆ ಬಾಗಲಕೋಟೆ ಬಂದ್‌ಗೆ ಬಿಜೆಪಿ ಕರೆ - etv bharat kannada

ಶಿವಾಜಿ ಮೂರ್ತಿ ತೆರವು ಮಾಡಿರುವುದನ್ನು ಖಂಡಿಸಿ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ನಾಳೆ ಬಾಗಲಕೋಟೆ ಬಂದ್ ಕರೆ ನೀಡಿವೆ.

bjp-calls-for-bagalkote-bandh-tomorrow-for-clearance-of-shivaji-idol
ಶಿವಾಜಿ‌ ಮೂರ್ತಿ ವಿವಾದ: ನಾಳೆ ಬಾಗಲಕೋಟೆ ಬಂದ್‌ಗೆ ಕರೆ ನೀಡಿದ ಬಿಜೆಪಿ
author img

By

Published : Aug 18, 2023, 10:58 PM IST

ಮಾಜಿ ಸಚಿವ ಗೋವಿಂದ ಕಾರಜೋಳ

ಬಾಗಲಕೋಟೆ: ನಗರದಲ್ಲಿ ರಾತ್ರೋರಾತ್ರಿ ಪ್ರತಿಷ್ಠಾಪನೆ ಮಾಡಲಾಗಿದ್ದ ಶಿವಾಜಿ ಮೂರ್ತಿ ತೆರವು ಮಾಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ನಾಳೆ ( ಶನಿವಾರ) ಬಾಗಲಕೋಟೆ ನಗರದಲ್ಲಿ ಬಂದ್ ಕರೆ ನೀಡಿವೆ. ಸೋನಾರ್ ಲೇಔಟ್​ನಲ್ಲಿ ರಾತ್ರಿ ಪ್ರತಿಷ್ಠಾಪನೆ ಮಾಡಲಾಗಿದ್ದ ಶಿವಾಜಿ ಮೂರ್ತಿಯನ್ನು ಅನಧಿಕೃತ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ಆಗಸ್ಟ್ 16ರ ರಾತ್ರಿ ತೆರವುಗೊಳಿಸಿತ್ತು.

ಇದೀಗ ಶಿವಾಜಿ ಮೂರ್ತಿ ತೆರವಿನ ವಿಚಾರ ದಿನೇ ದಿನೇ ಕಾವು ಪಡೆದುಕೊಳುತ್ತಿದೆ. ಶಿವಾಜಿ ಮೂರ್ತಿ ತೆರವು ವಿಷಯವನ್ನೇ ಇದೀಗ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇವತ್ತು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಸಭೆ‌ ನಡೆಸಿದ್ದವು. ಸಭೆಯಲ್ಲಿ ನಾಳೆ ಅಂದರೆ ಶನಿವಾರ ಆಗಸ್ಟ್​19 ರಂದು ಬಾಗಲಕೋಟೆ ನಗರದಲ್ಲಿ ಸ್ವಯಂಘೋಷಿತ ಬಂದ್​ಗೆ ಕರೆ‌ ನೀಡಲಾಯಿತು. ಬಾಗಲಕೋಟೆಯ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಸಭೆ ಸೇರಿದ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಶಿವಾಜಿ ಮೂರ್ತಿ ಮರು ಪ್ರತಿಷ್ಠಾಪನೆ ಆಗೋವರೆಗೂ ಹೋರಾಟದ ಶಪಥ ಮಾಡಿದ್ದಾರೆ.

"ಸರ್ಕಾರ ವಿನಾಕಾರಣ ಗೊಂದಲ ಸೃಷ್ಟಿ ಮಾಡುತ್ತಿದೆ. ಇದು ನೋವಿನ ಸಂಗತಿ. ಸೂಕ್ಷ್ಮ ವಿಷಯಗಳನ್ನು ಗಮಿಸಬೇಕೇ ಹೊರತು ಸರ್ಕಾರವೇ ಮೂರ್ತಿ ತೆರವುಗೊಳಿಸಿ ಗೊಂದಲಕ್ಕೆ ಕಾರಣವಾಗಿದೆ. ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಎಲ್ಲ ರೀತಿಯ ಪ್ರಯತ್ನ ಮಾಡೋಣ. ಕಾನೂನು ಕೈಗೆತ್ತಿಕೊಳ್ಳುವುದು ಬೇಡ, ನಾಳೆ ಅಂಗಡಿ, ಮಾರ್ಕೆಟ್ ಬಂದ್ ಸರ್ಕಾರಕ್ಕೆ ನಮ್ಮ ಭಾವನೆ ತಿಳಿಸಬೇಕು ಅಂತಾ ನಿರ್ಣಯ ಮಾಡಿದ್ದೇವೆ. ನಾಳೆ ಯಾವುದೇ ಗಲಭೆ, ಅಶಾಂತಿ ಆಗಬಾರದು. ಬಾಗಲಕೋಟೆ ನಗರ ನಾಳೆ ಬಂದ್ ಆಗಲಿದೆ. 9 ತಾಲೂಕಿನಲ್ಲಿ ತಹಶೀಲ್ದಾರರಿಗೆ ಮನವಿ ನೀಡಲಾಗುವುದು. ಮೌನ ಮೆರಣಿಗೆಯನ್ನು ಕೂಡಾ ಮಾಡಲಾಗುವುದು. ಸರ್ಕಾರ ಇಷ್ಟಕ್ಕೂ ಬಗ್ಗದೇ ಇದ್ದಲ್ಲಿ ಮುಂದಿನ ರೂಪರೇಷೆಗಳನ್ನು ರೂಪಿಸಲಾಗುವುದು" ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ವೀರಣ್ಣ ಚರಂತಿಮಠ, ಬಿಜೆಪಿ ಮುಖಂಡರು ಹಾಗೂ ಹಿಂದು ಪರ ಸಂಘಟನೆ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರದ ವಿರುದ್ಧ ಆಗಸ್ಟ್ 23ಕ್ಕೆ ಬಿಜೆಪಿ ಪ್ರತಿಭಟನೆ: ಬಿ.ಎಸ್.ಯಡಿಯೂರಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.