ETV Bharat / state

ಚುರುಕುಗೊಂಡ ವಿದ್ಯುತ್ ದುರಸ್ತಿ ಕಾರ್ಯ: ಬೆಸ್ಕಾಂನಿಂದ ಹೆಚ್ಚುವರಿ ಸಿಬ್ಬಂದಿ ನಿಯೋಜನೆ - Bescom

ಬಾಗಲಕೋಟೆ ಜಿಲ್ಲೆಯಲ್ಲಿ 195 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿದ್ದು, ಈ ಪ್ರದೇಶಗಳಲ್ಲಿ ಹಾನಿಗೊಳಗಾಗಿರುವ ವಿದ್ಯುತ್ ಕಂಬ, ಟ್ರಾನ್ಸ್​ಫಾರ್ಮರ್​ಗಳ ದುರಸ್ಥಿ ಕಾರ್ಯ ನಡೆಸಲು ಬೆಸ್ಕಾಂ ಕಚೇರಿಯಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಚುರುಕುಗೊಂಡ ವಿದ್ಯುತ್ ದುರಸ್ಥಿ ಕಾರ್ಯ
author img

By

Published : Aug 30, 2019, 8:52 PM IST

ಬಾಗಲಕೋಟೆ: ಜಿಲ್ಲೆಯಲ್ಲಿ 195 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿದ್ದು, ಈ ಪ್ರದೇಶಗಳಲ್ಲಿ ಹಾನಿಗೊಳಗಾಗಿರುವ ವಿದ್ಯುತ್ ಕಂಬ, ಟ್ರಾನ್ಸ್​ಫಾರ್ಮರ್​ಗಳ ದುರಸ್ತಿ ಕಾರ್ಯ ಬಿರುಸಿನಿಂದ ಸಾಗುತ್ತಿದೆ. ಈ ಹಿನ್ನಲೆಯಲ್ಲಿ ಬೆಸ್ಕಾಂ ಕಚೇರಿಯಿಂದ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಹೆಸ್ಕಾಂ ಅಧೀಕ್ಷಕ ಅಭಿಯಂತರ ಕಾಶಿನಾಥ ಹಿರೇಮಠ ತಿಳಿಸಿದ್ದಾರೆ.

ತುರ್ತಾಗಿ ದುರಸ್ತಿ ಕಾರ್ಯ ಕೈಗೊಳ್ಳುವ ನಿಟ್ಟಿನಲ್ಲಿ ಬೆಸ್ಕಾಂನಿಂದ 50 ಸಿಬ್ಬಂದಿಗಳನ್ನೊಳಗೊಂಡ ಒಂದು ತಂಡವನ್ನು ಬಾಗಲಕೋಟೆ ಜಿಲ್ಲೆಗೆ ಕಳುಹಿಸಲಾಗಿದೆ. ಕಳುಹಿಸಲಾದ ತಂಡದ ಸಿಬ್ಬಂದಿಯನ್ನು ಬಾಗಲಕೋಟೆಗೆ 20, ಜಮಖಂಡಿಗೆ 20 ಹಾಗೂ ಮುಧೋಳ ಪ್ರದೇಶಗಳಿಗೆ 10 ಸಿಬ್ಬಂದಿಗಯೆಂದು ನಿಯೋಜಿಸಲಾಗಿದೆ. ಬೆಸ್ಕಾಂ ತಂಡದಿಂದ ದುರಸ್ಥಿ ಕಾರ್ಯ ಚುರುಕೊಂಡಿದ್ದು ಹುನಗುಂದ ಕೂಡಲಸಂಗಮ, ಅಮೀನಗಡ, ಕಮತಗಿ ಹಾಗೂ ಬಾದಾಮಿ ತಾಲೂಕಿನ ನಂದಿಕೇಶ್ವರ, ಬೆಲೂರ ಹಾಗೂ ಕುಳಗೇರಿ ಪ್ರದೇಶಗಳ ವಿದ್ಯುತ್ ದುರಸ್ತಿ ಕೈಗೊಂಡಿದ್ದಾರೆ. ದುರಸ್ತಿ ತಂಡದಲ್ಲಿ ಮೀಟರ್ ತಪಾಸಣಾ ವಿಭಾಗದ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಪ್ರವಾಹದಿಂದ 4,466 ಕಿ.ಮೀ ವಿದ್ಯುತ್ ತಂತಿ ಹಾಳಾಗಿದ್ದು, ಈಗಾಗಲೇ 37.8 ಕಿ.ಮೀ ವಿದ್ಯುತ್ ತಂತಿಯನ್ನು ಒಳವಡಿಸಲಾಗಿದೆ. ಜಮಖಂಡಿ ಭಾಗದಲ್ಲಿ ಕಡಕೋಳ, ಜಂಬಗಿ ಬಿ.ಕೆ ಮತ್ತು ಮುತ್ತೂರ, ಮುಧೋಳ ಭಾಗದಲ್ಲಿ ಗುಳಬಾಳ ಜಂಬಗಿಯಲ್ಲಿ ದುರಸ್ಥಿ ಕಾರ್ಯ ಮಾಡಲಾಗಿದೆ. ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದ ವಿದ್ಯುತ್ ಕಂಬಗಳು ಉರುಳಿ 172 ಗ್ರಾಮಗಳ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಪೈಕಿ 17 ಗ್ರಾಮಗಳಲ್ಲಿ ಪುನಃ ವಿದ್ಯುತ್ ಸಂಪರ್ಕ ನೀಡಲಾಗಿದೆ. ಚನಾಳ ಗ್ರಾಮ ಮಾತ್ರ ಬಾಕಿ ಉಳಿದಿದ್ದು, ಇನ್ನು ಒಂದು ದಿನದೊಳಗಾಗಿ ಸಂಪರ್ಕ ನೀಡಲಾಗುವುದು. ಪ್ರವಾಹದಿಂದ ಒಟ್ಟು 7,670 ವಿದ್ಯುತ್ ಕಂಬ ಮತ್ತು 559 ಟಿಸಿಗಳು ಹಾಳಾಗಿರುವ ಬಗ್ಗೆ ತಿಳಿದುಬಂದಿದೆ.

ಪ್ರವಾಹಕ್ಕೆ ಒಟ್ಟು 29,766 ನೀರಾವರಿ ಪಂಪ್‍ಸೆಟ್ ಗಳು ಹಾಳಾಗಿದ್ದು, ಈ ಪೈಕಿ 4,870 ರಿಪ್ಲೇಸ್ ಮಾಡಲಾಗಿದೆ. ಜಿಲ್ಲೆಯಲ್ಲಿ ವಿದ್ಯುತ್ ದುರಸ್ಥಿ ಕಾರ್ಯ ಯುದ್ಧೋಪಾದಿಯಲ್ಲಿ ನಡೆದಿದೆ. ಬಾಗಲಕೋಟೆಯ ಹೆಸ್ಕಾಂ ಸಿಬ್ಬಂದಿಗಳು ಮಾತ್ರವಲ್ಲದೆ, ಕಾಂಟ್ರಾಕ್ಟರಗಳ ವತಿಯಿಂದ ಸಿಬ್ಬಂದಿಗಳನ್ನು ಪಡೆದು ಕೆಲವೊಂದು ಪ್ರದೇಶಗಳಲ್ಲಿ ದುರಸ್ಥಿ ಕಾರ್ಯ ಮಾಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Intro:AnchorBody:ಪ್ರವಾಹ : ಚುರುಕುಗೊಂಡ ವಿದ್ಯುತ್ ದುರಸ್ಥಿ ಕಾರ್ಯ
ಜಿಲ್ಲೆಗೆ ಬೆಸ್ಕಾಂನಿಂದ ಹೆಚ್ಚುವರಿ ಸಿಬ್ಬಂದಿ ನಿಯೋಜನೆ

ಬಾಗಲಕೋಟೆ: ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದ ಒಟ್ಟು 195 ಗ್ರಾಮಗಳು ತುತ್ತಾಗಿದ್ದು, ಈ ಗ್ರಾಮಗಳ ಪ್ರದೇಶಗಳಲ್ಲಿ ಹಾನಿಗೊಳಗಾಗಿರುವ ವಿದ್ಯುತ್ ಕಂಬ, ಟ್ರಾನ್ಸಪಾರ್ಮರ್‍ಗಳ ದುರಸ್ಥಿ ಕಾರ್ಯಕ್ಕೆ ಬೆಸ್ಕಾಂ ಕಚೇರಿಯಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ಬಾಗಲಕೋಟೆಗೆ ನಿಯೋಜಿಸಲಾಗಿದೆ ಎಂದು ಹೆಸ್ಕಾಂ ಅಧೀಕ್ಷಕ ಅಭಿಯಂತರ ಕಾಶಿನಾಥ ಹಿರೇಮಠ ತಿಳಿಸಿದ್ದಾರೆ.
         ಜಿಲ್ಲೆಯಲ್ಲಾದ ಪ್ರವಾಹದಿಂದ ವಿದ್ಯುತ್ ಕಂಬಗಳು ಸಾಕಷ್ಟು ಹಾನಿಗೊಳಗಾಗಿರುವ ಹಿನ್ನಲೆಯಲ್ಲಿ ತುರ್ತಾಗಿ ದುರಸ್ಥಿ ಕಾರ್ಯ ಕೈಗೊಳ್ಳುವ ನಿಟ್ಟಿನಲ್ಲಿ ಬೆಸ್ಕಾಂನಿಂದ 50 ಸಿಬ್ಬಂದಿಗಳನ್ನೊಳಗೊಂಡ ಒಂದು ತಂಡವನ್ನು ಬಾಗಲಕೋಟೆ ಜಿಲ್ಲೆಗೆ ಕಳುಹಿಸಲಾಗಿದೆ. ಕಳುಹಿಸಲಾದ ತಂಡದ ಸಿಬ್ಬಂದಿಗಳನ್ನು ಬಾಗಲಕೋಟೆಗೆ 20, ಜಮಖಂಡಿಗೆ 20 ಹಾಗೂ ಮುಧೋಳ ಪ್ರದೇಶಗಳಿಗೆ 10 ಸಿಬ್ಬಂದಿಗಳನ್ನು ದುರಸ್ಥಿ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
         ಬೆಸ್ಕಾಂ ತಂಡದಿಂದ ದುರಸ್ಥಿ ಕಾರ್ಯ ಚುರುಕೊಂಡಿದ್ದು, ಹುನಗುಂದ ತಾಲೂಕಿನ ಹುನಗುಂದ ಕೂಡಲಸಂಗಮ, ಅಮೀನಗಡ ಹಾಗೂ ಕಮತಗಿ ಹಾಗೂ ಬಾದಾಮಿ ತಾಲೂಕಿನ ನಂದಿಕೇಶ್ವರ, ಬೆಲೂರ ಹಾಗೂ ಕುಳಗೇರಿ ಪ್ರದೇಶಗಳ ವಿದ್ಯುತ್ ದುರಸ್ಥಿ ಕೈಗೊಂಡಿದ್ದಾರೆ. ದುರಸ್ಥಿ ತಂಡದಲ್ಲಿ ಮೀಟರ್ ತಪಾಸಣಾ ವಿಭಾಗದ ಸಿಬ್ಬಂದಿಗಳು ಇದ್ದು, ಪ್ರವಾಹದಿಂದ ಹಾಳಾದ ಟಿಸಿಗಳನ್ನು ಪರೀಕ್ಷಿಸಿ ಸರಿಯಾಗಿದ್ದಲ್ಲಿ ಪುನಃ ಅದೇ ಟಿಸಿಯನ್ನು ಒಳವಡಿಸಲಾಗುತ್ತಿದೆ. ಪೂರ್ತಿ ಹಾಳಾಗಿದ್ದಲ್ಲಿ ಅದನ್ನು ಕಳುಹಿಸಿ ಹೊಸ ಟಿಸಿಗಳನ್ನು ಒಳವಡಿಸಲಾಗುತ್ತಿದೆ ಎಂದು ತಿಳಿಸಿದರು.
         ನೆಲಕ್ಕೆ ಬಿದ್ದ ಕಂಬಗಳನ್ನು ಪುನಃ ನಿಲ್ಲುಸುವ ಕಾರ್ಯ ಹಾಗೂ ಹೊಸ ಕಂಬಗಳನ್ನು ನೆಡುವ ಕಾರ್ಯ ಮಾಡಲಾಗುತ್ತಿದೆ. ಇದರ ಜೊತೆಗೆ ವಿದ್ಯುತ್ ತಂತಿಗಳನ್ನು ಸಹ ಬದಲಾಗಿಸುತ್ತಿದೆ ಎಂದು ತಿಳಿಸಿದರು. ಪ್ರವಾಹದಿಂದ 4466 ಕಿ.ಮೀ ಕಂಡಕ್ಟರ (ವಿದ್ಯುತ್ ತಂತಿ) ಹಾಳಾಗಿದ್ದು, ಈಗಾಗಲೇ 37.8 ಕಿ.ಮೀ ವಿದ್ಯುತ್ ತಂತಿಯನ್ನು ಒಳವಡಿಸಲಾಗಿದೆ. ಜಮಖಂಡಿ ಭಾಗದಲ್ಲಿ ಕಡಕೋಳ, ಜಂಬಗಿ ಬಿ.ಕೆ ಮತ್ತು ಮುತ್ತೂರ, ಮುಧೋಳ ಭಾಗದಲ್ಲಿ ಗುಳಬಾಳ ಜಂಬಗಿಯಲ್ಲಿ ದುರಸ್ಥಿ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.
         ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದ ವಿದ್ಯುತ್ ಕಂಬಗಳು ಉರಳಿ 172 ಗ್ರಾಮಗಳ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಪೈಕಿ 17 ಗ್ರಾಮಗಳಲ್ಲಿ ಪುನಃ ವಿದ್ಯುತ್ ಸಂಪರ್ಕ ನೀಡಲಾಗಿದೆ. ಚನಾಳ ಗ್ರಾಮ ಮಾತ್ರ ಬಾಕಿ ಉಳಿದಿದ್ದು, ಇನ್ನು ಒಂದು ದಿನದೊಳಗಾಗಿ ಸಂಪರ್ಕ ನೀಡಲಾಗುವದು. ಪ್ರವಾಹದಿಂದ ಒಟ್ಟು 7670 ವಿದ್ಯುತ್ ಕಂಬ ಮತ್ತು 559 ಟಿಸಿಗಳು ಹಾಳಾಗಿರುವ ಬಗ್ಗೆ ತಿಳಿದುಬಂದಿದ್ದು, ಈ ಪೈಕಿ ಈಗಾಗಲೇ 1129 ವಿದ್ಯುತ್ ಕಂಬ ಹಾಗೂ 745 ಟಿಸಿಗಳನ್ನು ರಿಪ್ಲೇಸ್ ಮಾಡಿರುವುದಾಗಿ ತಿಳಿಸಿದ್ದಾರೆ.
         ಪ್ರವಾಹಕ್ಕೆ ಒಟ್ಟು 29766 ಐಪಿ ಸೆಟ್ (ನೀರಾವರಿ ಪಂಪ್‍ಸೆಟ್) ಗಳು ಹಾಳಾಗಿದ್ದು, ಈ ಪೈಕಿ 4870 ರಿಪ್ಲೇಸ್ ಮಾಡಲಾಗಿದೆ. ಜಿಲ್ಲೆಯಲ್ಲಿ ವಿದ್ಯುತ್ ದುರಸ್ಥಿ ಕಾರ್ಯ ಯುದ್ದೋಪಾದಿಯಲ್ಲಿ ನಡೆದಿದ್ದು, ಬಾಗಲಕೋಟೆಯ ಹೆಸ್ಕಾಂ ಸಿಬ್ಬಂದಿ ಜೊತೆಗೆ ಕಾಂಟ್ರಾಕ್ಟರಗಳ ವತಿಯಿಂದ ಸಿಬ್ಬಂದಿಗಳನ್ನು ಪಡೆದು ಕೆಲವೊಂದು ಪ್ರದೇಶಗಳಲ್ಲಿ ಹೆಸ್ಕಾಂದಿಂದ ಸಲಕರಣಗಳನ್ನು ಕೊಟ್ಟು ದುರಸ್ಥಿ ಕಾರ್ಯ ಮಾಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.