ETV Bharat / state

ಬಣಜಿಗ ಸಮಾಜಕ್ಕೆ ಅವಹೇಳನ ಆರೋಪ: ವಿಷಾದ ವ್ಯಕ್ತ ಪಡಿಸಿದ ವಿಜಯಾನಂದ ಕಾಶಪ್ಪನವರ್​ - ಈಟಿವಿ ಭಾರತ ಕನ್ನಡ

ಬಣಜಿಗ ಸಮಾಜಕ್ಕೆ ಅವಹೇಳನೆ ಮಾಡಿರುವ ಆರೋಪ ಹಿನ್ನೆಲೆ ಇಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಮತ್ತು ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ್​ ವಿರುದ್ದ ಬಣಜಿಗ ಸಮಾಜದವರು ಪ್ರತಿಭಟನೆ ನಡೆಸಿದರು.

Kn_Bgk_01
ವಿಜಯಾನಂದ ಕಾಶಪ್ಪನವರ್
author img

By

Published : Nov 5, 2022, 8:14 PM IST

ಬಾಗಲಕೋಟೆ: ಬಣಜಿಗ ಸಮಾಜಕ್ಕೆ ಅವಹೇಳನ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ನಾನು ಬಣಜಿಗ ಸಮಾಜದವರಿಗೆ ನೋವು ಆಗುವಂತೆ ನಡೆದಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಕೂಡಲಸಂಗಮನಾಥನ ಮೇಲಾಣೆ ಮಾಡುತ್ತೇನೆ ಇನ್ನು ಮುಂದೆ ಯಾವತ್ತೂ ಹಾಗೆ ನಡೆದುಕೊಳ್ಳಲ್ಲ ಎಂದು ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ್​ ಹೇಳಿದರು.

ಬಣಜಿಗರ ಬಗ್ಗೆ ಬಸನಗೌಡ ಪಾಟೀಲ್​ ಯತ್ನಾಳ್​ ಹಾಗೂ ಕಾಶಪ್ಪನವರ್​ ಅವಹೇಳನ ಮಾಡಿರುವ ಆರೋಪದ ಹಿನ್ನೆಲೆ, ಹುನಗುಂದ ಪಟ್ಟಣದಲ್ಲಿ ಯತ್ನಾಳ್​ ಹಾಗೂ ಕಾಶಪ್ಪನವರ ವಿರುದ್ದ ಬಣಜಿಗ ಸಮಾಜದಿಂದ ಪ್ರತಿಭಟನೆ ಹಮ್ಮಿಕೊಂಡಿದ್ದ ಸಮಯದಲ್ಲಿ ಪ್ರತಿಭಟನೆ ಸ್ಥಳಕ್ಕೆ ವಿಜಯಾನಂದ ಕಾಶಪ್ಪನವರ್​ ಆಗಮಿಸಿ ಮಾತನಾಡಿ, ಹುಕ್ಕೇರಿಯಲ್ಲಿ ಬಣಜಿಗ ಸಮಾಜದ ಬಗ್ಗೆ ನಾನು ಮಾತನಾಡಿಲ್ಲ.

ಅಂದು ನನಗೆ ಕತ್ತಿ ಅವರ ಮಗ ಅಂತ ಗೊತ್ತಿರಲಿಲ್ಲ. ನನ್ನ ಬಗ್ಗೆ ಮಾತನಾಡಿದ್ದಕ್ಕೆ ನಾನು ಮಾತನಾಡಿದ್ದೆ. ಆದರೆ, ಸಮಾಜದ ವಿರುದ್ದ ಅಲ್ಲ, ಇದೀಗ ನನ್ನ ಬಗ್ಗೆ ಪ್ರತಿಭಟನೆ ಮಾಡ್ತಿರೋ ಕಾರಣಕ್ಕೆ ನಾನು ಇಲ್ಲಿಗೆ ಬಂದು ಸ್ಪಷ್ಟನೆ ಕೊಡ್ತಿದ್ದೇನೆ.

ಪಂಚಮಸಾಲಿ ಬಣಜಿಗರು ಬೀಗರು, ಅಣ್ಣ ತಮ್ಮಂದಿರು ಇದ್ದ ಹಾಗೆ ನಮ್ಮ ತಂದೆಯವರ ಕಾಲದಿಂದ ಈ ಸಂಬಂಧ ಇಟ್ಟುಕೊಂಡು ಬಂದಿದ್ದೇವೆ. ನಮ್ಮ ತಂದೆ ಮೂರು ಸಲ ಶಾಸಕರಾಗಲು, ಮಂತ್ರಿಯಾಗಲು ತಾವು ಕೂಡ ಕಾರಣರಾಗಿದ್ದೀರಿ. ಹೀಗಾಗಿ ನಾವು ಯಾವತ್ತು ಭೇದ ಭಾವ ಮಾಡಲ್ಲ ಎಂದರು.

ಇವತ್ತು ಕೂಡ ಹುನಗುಂದದಲ್ಲಿ ಬಣಜಿಗ, ಪಂಚಮಸಾಲಿ, ಲಿಂಗಾಯತ(ಬಿಪಿಎಲ್) ಸಂಘಟನೆ ಇದೆ. ಅದನ್ನು ನಮ್ಮ ತಂದೆಯವರೇ ಮಾಡಿದ್ದು, ನಾನು ಶಾಸಕ ಇದ್ದಾಗ ಬಣಜಿಗ ಸಮಾಜದವರಿಗೂ ರಾಜಕೀಯ ಸ್ಥಾನಮಾನ ಕೊಟ್ಟಿದ್ದೇನೆ.

ಹೀಗಾಗಿ ನಾನು ಬಣಜಿಗ ಸಮಾಜದ ಬಗ್ಗೆ ಏನೂ ಮಾತನಾಡಿಲ್ಲ. ಸಮಾಜದಲ್ಲಿ ನೋವು ಆಗಿದ್ರೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ ತಿಳಿಸಿದರು. ಇಷ್ಟಾದರೂ ಸಹ ಬಣಜಿಗ ಸಮಾಜದ ಮುಖಂಡರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಮುಂದುವರೆಸಿದರು.

ಈ ಸಮಯದಲ್ಲಿ ಶಾಸಕರಾದ ಬಸವಗೌಡ ಪಾಟೀಲ್​ ಯತ್ನಾಳ್​​ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್​ ವಿರುದ್ಧ ಘೋಷಣೆ ಹಾಕಿದರು. ನಂತರ ಹುನಗುಂದ ತಹಶಿಲ್ದಾರರ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಯಿತು. ಇದಾದ ನಂತರ ಇಲಕಲ್ಲ ಪಟ್ಟಣದಲ್ಲಿಯೂ ಸಹ ಬಣಿಜಗ ಸಮಾಜ ವತಿಯಿಂದ ಪ್ರತಿಭಟನೆ ನಡೆಸಿ, ಯತ್ನಾಳ್​ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ‌ ಶಾಸಕರಾದ ವಿಜಯಾನಂದ ಕಾಶಪ್ಪನವರ್​, ವಿಷಾದ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಇನ್ನು ಮುಂದೆ ವಿಜಯಾನಂದ ಕಾಶಪ್ಪನವರ ವಿರುದ್ದ ಘೋಷಣೆ ಹಾಕದೇ ಕೇವಲ ಬಸವಗೌಡ ಪಾಟೀಲ್ ‌ವಿರುದ್ದ ಘೋಷಣೆ ಹಾಕುವಂತೆ ಹೇಳಲಾಗಿತ್ತು. ಈ ಸಂದರ್ಭದಲ್ಲಿ ಕಾಶಪ್ಪನವರ ವಿರುದ್ಧ ಘೋಷಣೆ ಹಾಕಿದ್ದರಿಂದ ಕೆಲ ಸಮಯ ಮಾತಿನ ಚಕಿಮಕಿ‌ ನಡೆಯಿತು.

ಇದನ್ನೂ ಓದಿ: ಕನ್ನಡ ವಿಷಯದಲ್ಲಿ ಬೆಳಗಾವಿ ರಾಜಕಾರಣಿಗಳು ರಣಹೇಡಿಗಳು: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.