ETV Bharat / state

13 ವರ್ಷಗಳ ನಂತರ ಭರ್ತಿಯಾಗಿರುವ ಶಿರೂರಿನ ಐತಿಹಾಸಿಕ ಕೆರೆಗಳಿಗೆ ಬಾಗಿನ ಅರ್ಪಣೆ - 13 ವರ್ಷಗಳ ನಂತರ ಭರ್ತಿಯಾಗಿರುವ ಶಿರೂರಿನ ಐತಿಹಾಸಿಕ ಕೆರೆಗಳಿಗೆ ಬಾಗಿನ ಅರ್ಪಣೆ

ಶಿರೂರಿನ ಐತಿಹಾಸಿಕ ಕೆರೆಗಳಿಗೆ ಶಾಸಕ ಡಾ. ವೀರಣ್ಣಾ ಚರಂತಿಮಠ ಹಾಗೂ ಸಂಸದ ಪಿ.ಸಿ ಗದ್ದಿಗೌಡರ ಬಾಗಿನ ಅರ್ಪಣೆ ಮಾಡಿದರು.

Bagina offered to Shiruru Lake in Bagalakote
13 ವರ್ಷಗಳ ನಂತರ ಭರ್ತಿಯಾಗಿರುವ ಶಿರೂರಿನ ಐತಿಹಾಸಿಕ ಕೆರೆಗಳಿಗೆ ಬಾಗಿನ ಅರ್ಪಣೆ
author img

By

Published : Nov 7, 2020, 9:24 PM IST

ಬಾಗಲಕೋಟೆ: ಸತತ ಮಳೆಯಿಂದ 13 ವರ್ಷಗಳ ನಂತರ ಭರ್ತಿಯಾಗಿ ಹರಿಯುತ್ತಿರುವ ಶಿರೂರಿನ ಐತಿಹಾಸಿಕ ಕೆರೆಗಳಿಗೆ ಶಾಸಕ ಡಾ. ವೀರಣ್ಣಾ ಚರಂತಿಮಠ ಹಾಗೂ ಸಂಸದ ಪಿ.ಸಿ ಗದ್ದಿಗೌಡರ ಬಾಗಿನ ಅರ್ಪಣೆ ಮಾಡಿದರು.

ನಂತರ ಮಾತನಾಡಿದ ಶಾಸಕ ಡಾ. ವೀರಣ್ಣಾ ಚರಂತಿಮಠ ಅವರು, ಈ ಭಾರಿ ಉತ್ತಮ ಮಳೆಯಾಗಿದ್ದು, ಆಲಮಟ್ಟಿ ಹಿನ್ನಿರು ಸಹ ಸ್ವಲ್ಪ ಮಟ್ಟಿಗೆ ಆಸರೆಯಾಗಿದೆ. ರೈತರಿಗೆ ಹರ್ಷದಾಯಕವಾಗುವುದರೊಂದಿಗೆ ಗಂಗಾಮಾತೆ ಗ್ರಾಮಸ್ಥರಿಗೆ ಸುಖಶಾಂತಿ ನೆಮ್ಮದಿ ನೀಡಲಿ ಎಂದರು.

ಸಂಸದ ಪಿ.ಸಿ ಗದ್ದಿಗೌಡರ ಮಾತನಾಡಿ ಕೆರೆಗಳು ಭರ್ತಿಯಾಗುವುದರಿಂದ ಅಂತರಜಲ ಹೆಚ್ಚುತ್ತದೆ ಎಂದರು. ಕೊರೊನಾ ಇನ್ನೂ ಜನತೆಯನ್ನು ಕಾಡುತ್ತಿದೆ. ಮಾಸ್ಕ್​ ಧರಿಸಿ ಅಂತರ ಕಾಯ್ದುಕೊಳ್ಳಬೇಕೆಂದರು. ಈ ಗಂಗಾ ಮಾತೆ ಕೊರೊನಾವನ್ನು ತೊಲಗಿಸಲಿ, ಪ್ರತಿಯೋಬ್ಬರಿಗೂ ನೆಮ್ಮದಿ ಜೀವನ ಸಿಗಲಿ ಎಂದರು.

ಇದಕ್ಕೂ ಮೊದಲು ಈರಯ್ಯ ಮುಷ್ಠಿಗೇರಿ ಯವರ ನೇತೃತ್ವದಲ್ಲಿ ಗಂಗಾಮತಾಸ್ಥರಾದ ಅಂಬಿಗೇರ ಸಮಾಜ ಬಾಂಧವರಿಂದ ನಾನಾ ಪೂಜೆಗಳು ನಡೆದವು. ನಂತರ ಗಂಗಾಮಾತೆಗೆ ಉಡಿತುಂಬಿ ಪೂಜೆ ಸಲ್ಲಿಸಲಾಯಿತು, ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ. ತಾಪಂ ಸದಸ್ಯ ರಾಜಶೇಖರ ಅಂಗಡಿ, ಜಿಲ್ಲಾ ಪಂಚಾಯತಿ ಸದಸ್ಯ ರಂಗನಗೌಡ ಗೌಡರ, ಸುರೇಶ ದೇಸಾಯಿ, ನ್ಯಾಯವಾದಿ ಸಿ.ವಿ. ಕೋಟಿ, ಸಿ.ಎಂ ಪ್ಯಾಟಿಶೆಟ್ಟರ, ಬಸಪ್ಪ ಮೆನಸಗಿ, ಶೆಖಪ್ಪ ಮಾಚಾ, ಬಸವರಾಜ ಬಿಲ್ಲಾರ, ಸಿದ್ದಪ್ಪ ಮೆಳ್ಲಿ, ಗುರಮ್ಮ ಸಂಕೀಣಮಠ, ಲಲಿತಾ ಪಾಟೀಲ, ಗಿರಿಜಾ ಎಮ್ಮಿಮಠ, ನಂದಾ ಹೊಸಮಠ ಸೇರಿದಂತೆ ಗ್ರಾಪಂ ಸದಸ್ಯರು ಗ್ರಾಮಸ್ಥರು ಬಿಜೆಪಿ ಗ್ರಾಮೀಣ ಘಟಕದ ಪದಾಧಿಕಾರಿಗಳೂ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.