ETV Bharat / state

ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲ ಈ ಅಂಗನವಾಡಿಗಳು.. - private school equal to these Anganwadis

ಕಳೆದ ಒಂದು‌ ವರ್ಷದ ಹಿಂದೆಯೇ ಅಂದರೆ ಕೊರೊನಾ ಬರುವ ಮುಂಚೆ ಎಲ್ಲಾ ವ್ಯವಸ್ಥೆ ಮಾಡಿ, ಪ್ರಸಕ್ತ ಸಾಲಿನ ವರ್ಷದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ, ಕೊರೊನಾದಿಂದ ಅಂಗನವಾಡಿ ಬಂದ್​ ಮಾಡಲಾಗಿದೆ..

bagalkot-there-is-no-private-school-equal-to-these-anganwadis
ಅಂಗನವಾಡಿ
author img

By

Published : Apr 20, 2021, 6:07 PM IST

ಬಾಗಲಕೋಟೆ : ಗ್ರಾಮೀಣ ಪ್ರದೇಶಗಳಲ್ಲಿ ಅಂಗನವಾಡಿ ಅಂದರೆ, ಗಲೀಜು, ಮೂಲಸೌಲಭ್ಯಗಳ ಕೊರೆತೆ ಎದ್ದು ಕಾಣುತ್ತದೆ ಎಂಬ ಆರೋಪಗಳಿವೆ. ಆದರೆ, ಇದಕ್ಕೆ ಅಪವಾದ ಎಂಬಂತೆ ಬಾಗಲಕೋಟೆ ನಗರ ಸಮೀಪದ ಮುರನಾಳದ ಅಂಗನವಾಡಿಗಳನ್ನು ನೋಡಿದರೆ ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲ ಎಂಬಂತಿವೆ.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹಾಂತೇಶ ನಾಲ್ವತ್ತವಾಡ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಸೇರಿ, ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಒಟ್ಟು ಒಂಬತ್ತು ಅಂಗನವಾಡಿ ಕೇಂದ್ರಗಳಿಗೆ‌ 10 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಈ ಮೂಲಕ ಮಕ್ಕಳಿಗೆ ಆಟಿಕೆಯ ವಸ್ತುಗಳು, ಆಕರ್ಷಣೆಯ ಚಿತ್ರಕಲೆ, ಆಟ, ಪಾಠ ಮತ್ತು ಟಿವಿ, ಅಂತರ್ಜಾಲದಂತಹ ಪಾಠ ಕಲಿಸುವ ಉದ್ದೇಶ ಹೊಂದಲಾಗಿದೆ.

ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲ ಈ ಅಂಗನವಾಡಿ..

ಒಂದು ಅಂಗನವಾಡಿ ಕೇಂದ್ರಕ್ಕೆ ಸುಮಾರು 1.5 ಲಕ್ಷ ರೂ. ವೆಚ್ಚ ಮಾಡಿ, ಕಾಂಪೌಂಡ್, ಉದ್ಯಾನವನ, ಗೋಡೆ ಬರಹ, ಜೋಕಾಲಿ ಸೇರಿ ಕುಳಿತುಕೊಳ್ಳಲು ಚಿಕ್ಕ ಕುರ್ಚಿ, ಮೇಜು ವಿವಿಧ ಆಟಿಕೆ ಸಾಮಗ್ರಿಗಳನ್ನು ತರಿಸಲಾಗಿದೆ.

ಕಳೆದ ಒಂದು‌ ವರ್ಷದ ಹಿಂದೆಯೇ ಅಂದರೆ ಕೊರೊನಾ ಬರುವ ಮುಂಚೆ ಎಲ್ಲಾ ವ್ಯವಸ್ಥೆ ಮಾಡಿ, ಪ್ರಸಕ್ತ ಸಾಲಿನ ವರ್ಷದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ, ಕೊರೊನಾದಿಂದ ಅಂಗನವಾಡಿ ಬಂದ್​ ಮಾಡಲಾಗಿದೆ. ಮಕ್ಕಳು ಯಾವಾಗ ಈ ಎಲ್ಲಾ ಸದುಪಯೋಗಗಳನ್ನು ಪಡೆಯಲಿದ್ದಾರೆ ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.