ಬಾಗಲಕೋಟೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನವನಗರದ ಸೆಕ್ಟರ್ ನಂ. 30ರಲ್ಲಿ ಆರ್ಎಸ್ಎಸ್ ಸಂಘಟನೆ ವತಿಯಿಂದ ಸಸಿಗಳನ್ನು ನೆಡಲಾಯಿತು.
ರಾಜು ಚಿತ್ತವಾಡಗಿ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಕಟಗೇರಿ, ನಗರಸಭೆ ಸದಸ್ಯ ಶಿವು ಕುರಬರ ಆರ್ಎಸ್ಎಸ್ ಪ್ರಮುಖರೊಂದಿಗೆ ಗಣೇಶನ ದೇವಸ್ಥಾನದ ಎದುರು ಸಸಿಗಳನ್ನು ನೆಟ್ಟರು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿ ಎ.ಎಸ್.ನೇಗಿನಹಾಳ ಈಟಿವಿ ಭಾರತದೊಂದಿಗೆ ಮಾತನಾಡಿ, ಜೂನ್ ತಿಂಗಳಾದ್ಯಂತ ಪರಿಸರ ದಿನಾಚರಣೆ ಆಚರಿಸಿ ಬಾಗಲಕೋಟೆ, ನವನಗರದ ಹಾಗೂ ವಿದ್ಯಾಗಿರಿ ಪ್ರದೇಶದಲ್ಲಿ ಒಟ್ಟು 3300 ಗಿಡಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ.
ಸಂಘ ಸಂಸ್ಥೆಗಳು ಬಂದು ಉಚಿತವಾಗಿ ಸಸಿಗಳನ್ನು ಪಡೆದುಕೊಂಡು ಬೆಳೆಸಬಹುದು. ಇವತ್ತಿನ ಧ್ಯೇಯ ವಾಕ್ಯ ಮಾಲಿನ್ಯ ಅಳಿಸಿ, ಜೀವವೈವಿಧ್ಯತೆ ಉಳಿಸಿ ಎಂಬುದಾಗಿದ್ದು, ರೈತಾಪಿ ವರ್ಗ ಸೇರಿದಂತೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಲಾಗುವುದು ಎಂದರು.