ಬಾಗಲಕೋಟೆ: ಕಾಲುಜಾರಿ ಬಾವಿಗೆ ಬಿದ್ದು ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ, ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ಬಳಿ ನಡೆದಿದೆ.
ರೇಣಮ್ಮ ನಿಂಗಪ್ಪ ಕುರಿ (45) ಮೃತಪಟ್ಟಿರುವ ಮಹಿಳೆ. ಈಕೆ ಇಂದು ಬೆಳಗ್ಗೆ ಬಾವಿ ಪಕ್ಕದಲ್ಲಿರುವ ದೇವರ ಪೊಜೆಗೆಂದು ತೆರಳಿ ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದಿದ್ದಾಳೆ. ಎಷ್ಟೊತ್ತಾದರೂ ಮನೆಗೆ ಬಾರದ ಹಿನ್ನಲೆ ಸಂಶಯಗೊಂಡು ಕುಟುಂಬದವರು ನೋಡಲು ಹೋದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸುಮಾರು ಎರಡು ಗಂಟೆ ಕಾರ್ಯಾಚರಣೆ ನಡೆಸಿ, ಮಹಿಳೆಯ ಶವ ಹೊರ ತೆಗೆಯಲಾಯಿತು. ಈ ಸಂಬಂಧ ಇಲಕಲ್ಲ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.