ಟೋಕಿಯೋ (ಜಪಾನ್): ಟೋಕಿಯೋ ಪ್ಯಾರಾಲಿಂಪಿಕ್ನಲ್ಲಿ ಭಾರತದ ಪದಕ ಓಟ ಮುಂದುವರಿದಿದೆ. ಇದೀಗ ಮಹಿಳಾ ವಿಭಾಗದ 50 ಮೀಟರ್ ರೈಫಲ್ ವಿಭಾಗದಲ್ಲಿ ಅವನಿ ಲೇಖರಾ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಭಾರತ ಪ್ಯಾರಾಲಿಂಪಿಕ್ನಲ್ಲಿ ತನ್ನ 12ನೇ ಪದಕ ಗೆದ್ದುಕೊಂಡಂತಾಗಿದೆ.
ಜೊತೆಗೆ ಪಾರಾಲಿಂಪಿಕ್ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಅವನಿ ಲೇಖರಾ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 10 ಮೀಟರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಅವನಿ ಚಿನ್ನದ ಪದಕ ಗೆದ್ದು ಕೀರ್ತಿ ತಂದಿದ್ದರು. ಇದೀಗ 50 ಮೀಟರ್ ಶೂಟಿಂಗ್ನಲ್ಲಿ ಕಂಚಿನ ಪದಕ ಗೆದ್ದು ಬೀಗಿದ್ದಾರೆ.
1983ರಲ್ಲಿ ಜಿತೆಂದರ್ ಸಿಂಗ್ ಸೋಡಿ ಹಲವು ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆದ್ದಿದ್ದರು, ಇದು ವೈಯಕ್ತಿಕವಾಗಿ ಓರ್ವ ಪಡೆದ ಹೆಚ್ಚು ಪದಕವಾಗಿತ್ತು. ಇದೀಗ ಮಹಿಳೆಯರ ವಿಭಾಗದಲ್ಲಿ ಅವನಿ ಎರಡು ಪದಕ ಗೆದ್ದಿದ್ದಾರೆ.
-
And @AvaniLekhara does India proud a second time at the Games, winning a #Bronze with a score of 445.9! 🔥
— VVS Laxman (@VVSLaxman281) September 3, 2021 " class="align-text-top noRightClick twitterSection" data="
1⃣2⃣ medals now for India. #Tokyo2020 #Paralympics #ShootingParaSport pic.twitter.com/XnzRj0N7Bf
">And @AvaniLekhara does India proud a second time at the Games, winning a #Bronze with a score of 445.9! 🔥
— VVS Laxman (@VVSLaxman281) September 3, 2021
1⃣2⃣ medals now for India. #Tokyo2020 #Paralympics #ShootingParaSport pic.twitter.com/XnzRj0N7BfAnd @AvaniLekhara does India proud a second time at the Games, winning a #Bronze with a score of 445.9! 🔥
— VVS Laxman (@VVSLaxman281) September 3, 2021
1⃣2⃣ medals now for India. #Tokyo2020 #Paralympics #ShootingParaSport pic.twitter.com/XnzRj0N7Bf
ಸ್ಪರ್ಧೆಯಲ್ಲಿ 457.9 ಅಂಕ ಪಡೆದ ಚೀನಾದ ಕುಲ್ಪಿಂಗ್ ಜಾಂಗ್ ಚಿನ್ನದ ಪದಕ ತಮ್ಮದಾಗಿಸಿಕೊಂಡರೆ, 445.9 ಅಂಕಗಳೊಂದಿಗೆ ಅವನಿ ಕಂಚು ಗೆದ್ದುಕೊಂಡಿದ್ದಾರೆ.
ಇದನ್ನೂ ಓದಿ: ಚಿನ್ನದ ಅವನಿ'ಗೆ 3 ಕೋಟಿ ರೂ., ದೇವೇಂದ್ರ ಜಜಾರಿಯಾಗೆ 2 ಕೋಟಿ ರೂ. ಘೋಷಿಸಿದ ರಾಜಸ್ಥಾನ್ ಸರ್ಕಾರ