ಟೋಕಿಯೋ(ಜಪಾನ್): ಭಾರತೀಯ ತಂಡಗಳು ಪದಕ ಗಳಿಸುವತ್ತ ಒಂದೊಂದಾಗಿ ಹೆಜ್ಜೆ ಇಡುತ್ತಿವೆ. ಆರ್ಚರಿ ಅಂದರೆ ಬಿಲ್ಲುಗಾರಿಕೆಯ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತದ ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ಅವರು ಚೀನಾದ ತೈಪೆಯ ಚಿಹ್-ಚುನ್ ಟ್ಯಾಂಗ್ ಮತ್ತು ಚಿಯಾ-ಎನ್ ಲಿನ್ ಅವರನ್ನು ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಇಂದು ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ಅವರು ದಕ್ಷಿಣ ಕೊರಿಯಾದ ಸ್ಪರ್ಧಿಗಳನ್ನು ಎದುರಿಸಲಿದ್ದು, ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ದೀಪಿಕಾ ಕುಮಾರಿ ಮತ್ತು ಪ್ರವೀಣ್ ಜಾಧವ್ ಇಬ್ಬರೂ ಕೂಡಾ 1319 ಅಂಕಗಳನ್ನು ಪಡೆದರು.
ಮತ್ತೊಂದೆಡೆ, ಶೂಟರ್‌ಗಳಾದ ಎಲವೆನಿಲ್ ವಲರಿವನ್ ಮತ್ತು ಅಪೂರ್ವಿ ಚಂಡೇಲಾ ಅವರು 10 ಮೀಟರ್ ಏರ್ ರೈಫಲ್ ಮಹಿಳಾ ಸುತ್ತಿನಲ್ಲಿ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ. ಶೂಟಿಂಗ್ ವಿಭಾಗದಲ್ಲಿ ಭಾರತ ತಂಡಕ್ಕೆ ಈ ವಿಭಾಗದಲ್ಲಿ ಹಿನ್ನಡೆಯಾಗಿದೆ.
ಪುರುಷರ ಸಿಂಗಲ್ಸ್ ಗ್ರೂಪ್ ಸ್ಟೇಜ್ (ಗ್ರೂಪ್ ಡಿ)ನಲ್ಲಿ ಬ್ಯಾಡ್ಮಿಂಟನ್ ಆಟಗಾರ ಸಾಯಿ ಪ್ರಣೀತ್ ಇಸ್ರೇಲ್ನ ಝೀಬರ್ಮನ್ ಮಿಶಾ ಅವರನ್ನು ಎದುರಿಸಲಿದ್ದಾರೆ. ಅಲ್ಲದೆ, ಭಾರತೀಯ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಹಣಾಹಣಿಯನ್ನು ಪ್ರಾರಂಭಿಸಲಿವೆ. ಇದರ ಜೊತೆಗೆ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯಿರುವ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಕೂಡ ಇಂದು ತಮ್ಮ ತಾಕತ್ತು ಪ್ರದರ್ಶಿಸಲಿದ್ದಾರೆ.
ಇದನ್ನೂ ಓದಿ: SLvIND: ಭಾರತದ ಸರಣಿ ಕ್ಲೀನ್ ಸ್ವೀಪ್ ಕನಸಿಗೆ ಸೋಲು... ಲಂಕಾಗೆ ಜಯ