ಟೋಕಿಯೋ : ಭಾರತೀಯ ಶೂಟರ್ಗಳಾದ ಮನು ಭಾಕರ್ ಮತ್ತು ಯಶಸ್ವಿನಿ ದೇಸ್ವಾಲ್ ಟೋಕಿಯೋ ಒಲಿಂಪಿಕ್ಸ್ನ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಕ್ವಾಲಿಫಯರ್ ಸುತ್ತಿನಲ್ಲಿ ಪರಾಭವಗೊಂಡಿದ್ದಾರೆ.
ಭಾಕರ್ 12 ನೇ ಸುತ್ತಿನಲ್ಲಿ ಕೊನೆಗೊಳಿಸಿದರೆ, ದೇಸ್ವಾಲ್ 13 ನೇ ಸುತ್ತಿನಲ್ಲಿ ಕೊನೆಗೊಳಿಸಿದರು. 2019ರ ಐಎಸ್ಎಸ್ಎಫ್ ಕಪ್ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ದೇಸ್ವಾಲ್ ಸಂಭವನೀಯ 600 ಸ್ಕೋರ್ನಲ್ಲಿ 574 ಪಡೆದಿದ್ದಾರೆ.
ಓದಿ : Tokyo Olympics: ಇಸ್ರೇಲ್ ಮಣಿಸಿ ಶುಭಾರಂಭ ಮಾಡಿದ ಪಿ.ವಿ.ಸಿಂಧು
ಭಾಕರ್ ಒಟ್ಟು 575 ಸ್ಕೋರ್ ದಾಖಲಿಸಿದ್ದು, ವಿವಿಧ ಸುತ್ತುಗಳಲ್ಲಿ 98,95, 94, 95, 95 ಸ್ಕೋರ್ ಮಾಡಿದ್ದಾರೆ.
ಮೊದಲ ಸುತ್ತಿನಲ್ಲಿ 98 ಪಾಯಿಂಟ್ಸ್ ಗಳಿಸಿದ್ದ ಭಾಕರ್ ಮೂರನೇ ಶ್ರೇಯಾಂಕ ಪಡೆದಿದ್ದರು, ಎರಡನೇ ಸುತ್ತಿನಲ್ಲಿ 20 ಶಾಟ್ಸ್ಗಳನ್ನು ಹೊಡೆದ ಭಾಕರ್ 95 ಸ್ಕೋರ್ ಮಾಡಿದರು. ಮೂರನೇ ಸುತ್ತಿಗೆ ಅವರ ಸ್ಕೋರ್ 94 ಕ್ಕೆ ಇಳಿಯಿತು.
ಎರಡನೇ ಸುತ್ತಿನಲ್ಲಿ ಗನ್ ಸಮಸ್ಯೆ ಎದುರಾಗಿದ್ದರಿಂದ ಮೂರನೇ ಸುತ್ತಿನಲ್ಲಿ ಮಾಜಿ ವಿಶ್ವ ಕಪ್ ಚಿನ್ನದ ಪದಕ ವಿಜೇತೆಯ ಪ್ರದರ್ಶನ ಕುಂಠಿತಗೊಂಡಿತು.