ನವದೆಹಲಿ : ಟೋಕಿಯೋ ಒಲಿಂಪಿಕ್ಸ್ ನಂತರ ಭಾರತದಲ್ಲಿ ಕುಸ್ತಿ ಆಟಕ್ಕೆ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿವೆ. ಈಗಾಗಲೇ ಒಡಿಶಾ ಸರ್ಕಾರ ಭಾರತೀಯ ಹಾಕಿಗೆ ಮುಂದಿನ 10 ವರ್ಷಗಳ ಪ್ರಾಯೋಜಕತ್ವ ವಿಸ್ತರಿಸಿಕೊಂಡಿದೆ. ಹಾಗೇಯೆ ಉತ್ತರ ಪ್ರದೇಶ ಸರ್ಕಾರವು ಭಾರತೀಯ ಕುಸ್ತಿಯನ್ನು 2032ರ ಬ್ರಿಸ್ಬೇನ್ ಒಲಿಂಪಿಕ್ಸ್ವರೆಗೆ ದತ್ತು ತೆಗೆದಕೊಳ್ಳುವುದಾಗಿ ಗುರುವಾರ ಘೋಷಣೆ ಮಾಡಿದೆ.
ಇದರ ಮಧ್ಯ ಡಬ್ಲ್ಯುಎಫ್‌ಐ 2018 ರಲ್ಲಿ ಟಾಟಾ ಮೋಟಾರ್ಸ್‌ನೊಂದಿಗೆ ಇಂಡಿಯನ್ ರೆಸ್ಲಿಂಗ್‌ನ ಮುಖ್ಯ ಪ್ರಾಯೋಜಕರಾಗಿ ಸಹಭಾಗಿತ್ವ ಹೊಂದಿತ್ತು. ಈಗ ಈ ಪ್ರಾಯೋಜಕತ್ವದ ಪಾಲುದಾರಿಕೆಯನ್ನು 2024 ಒಲಿಂಪಿಕ್ಸ್ ವರೆಗೆ ವಿಸ್ತರಿಸುವುದಾಗಿ ಟಾಟಾ ಮೋಟಾರ್ಸ್ ಶುಕ್ರವಾರ ಘೋಷಿಸಿದೆ.
ಡಬ್ಲ್ಯುಎಫ್‌ಐನಿಂದ ಗುರುತಿಸಲ್ಪಡುವ 60 ಕಿರಿಯರಿಗೆ, 30 ಪ್ರತಿಭಾವಂತ ಕುಸ್ತಿಪಟುಗಳಿಗೆ ವಿದ್ಯಾರ್ಥಿವೇತನವನ್ನು ಟಾಟಾ ಮೋಟಾರ್ಸ್ ನೀಡಲಿದೆ ಎಂದು ಘೋಷಿಸಿದೆ. ಹಾಗೇಯೆ ಕ್ರೀಡಾಪಟುಗಳ ಎಲ್ಲ ತರಬೇತಿ ವೆಚ್ಚಗಳು, ವಿದೇಶಗಳಿಗೆ ಮಾನ್ಯತೆ ನೀಡುವ ಪ್ರವಾಸಗಳು ಕಿರಿಯ ಅಭಿವೃದ್ಧಿ ಕಾರ್ಯಕ್ರಮದ ಅಡಿ ಒಳಗೊಂಡಿರುತ್ತವೆ ಮತ್ತು ಕ್ರೀಡಾಪಟುಗಳಿಗೆ ಯಾವುದೇ ತರಹದ ಗಾಯದ ಸಮಸ್ಯೆಗಳು ಕಂಡು ಬಂದರೆ ಅದರ ಸಂಪೂರ್ಣ ವೆಚ್ಚವನ್ನು ನಿರ್ವಹಿಸಲು ಸಹಾಯವನ್ನು ನೀಡಲಾಗುವುದು.
ಈ ಬಗ್ಗೆ ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಟಾಟಾ ಮೋಟಾರ್ಸ್‌ನ ಬೆಂಬಲದಿಂದ ಉತ್ಸುಕರಾಗಿದ್ದೇವೆ. ಹಾಗೇಯೆ ಟಾಟಾ ಮೋಟಾರ್ಸ್ ಕಂಪನಿಯು ಕುಸ್ತಿ ಲೀಗ್‌ಗೆ ಬೆಂಬಲ ನೀಡುಬೇಕು ಎಂದು ಮನವಿ ಮಾಡಿದರು. ಇದೇ ವೇಳೆ, ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಎಲ್ಲ ಏಳು ಭಾರತೀಯ ಕುಸ್ತಿಪಟುಗಳಿಗೆ ಕಾರಿನ ಕೀಲಿಗಳನ್ನು ಹಸ್ತಾಂತರಿಸಲಾಯಿತು.
ಇದನ್ನೂ ಓದಿ : ಭಾರತೀಯ ಕುಸ್ತಿಯನ್ನು 2032ರ ಒಲಿಂಪಿಕ್ಸ್ವರೆಗೆ ದತ್ತು ತೆಗೆದುಕೊಂಡ ಯುಪಿ ಸರ್ಕಾರ